Advertisement

ಪರ್ಕಳ ಶ್ರೀ ಗಣೇಶೋತ್ಸವ: ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

11:30 AM Aug 27, 2017 | Team Udayavani |

ಉಡುಪಿ: ಮಣಿಪಾಲ-ಪರ್ಕಳ ರಸ್ತೆ ವಿಸ್ತರಣೆಗೆ ರಾಜ್ಯ ಸರಕಾರದ ಸಹಕಾರವಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಪರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಸುವರ್ಣ ಸಂಗಮದ ಅಂಗವಾಗಿ
9 ದಿನಗಳ ಕಾಲ ನಡೆಯುವ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಉದ್ಯಾನವನಕ್ಕೆ  ಸ್ಥಳ –  ಭರವಸೆ
ಹೆಚ್ಚು ಧಾರ್ಮಿಕ ಭಾವನೆಯುಳ್ಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ನಡೆಯುವ ಜಿಲ್ಲೆ ಉಡುಪಿ.  ಈ ಗಣೇಶೋತ್ಸವ ಸಮಿತಿ ಸಾರ್ವಜನಿಕ ಉದ್ಯಾನವನ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಮನವಿ ಕೊಟ್ಟಲ್ಲಿ ಸ್ಥಳ ಒದಗಿಸಲು ಪ್ರಯತ್ನಿಸುವ ಭರವಸೆ ನೀಡಿದರು.

ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಸದಸ್ಯೆ ಸುಮಿತ್ರಾ ನಾಯಕ್‌, ಮಂಗಳೂರು ಕೆಎಂಎಫ್‌ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ, ಕೈಗಾರಿಕೋದ್ಯಮಿ ಕೆ. ಬಾಲಕೃಷ್ಣ ಶೆಣೈ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀನಿವಾಸ ಉಪಾಧ್ಯ, ಪಿ. ಬಾಲಕೃಷ್ಣ ನಾಯಕ್‌, ದಿನೇಶ ಶೆಟ್ಟಿ ಹೆರ್ಗ, ಸಂಚಾಲಕ ದೀಲಿಪ್‌ರಾಜ್‌ ಹೆಗ್ಡೆ, ಉಪಾಧ್ಯಕ್ಷ ಸುರೇಶ್‌ ಶಾನುಭಾಗ್‌ ಉಪಸ್ಥಿತರಿದ್ದರು.

ಅಧ್ಯಕ್ಷ ಮಹೇಶ ಠಾಕೂರ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಪ್ರಸ್ತಾವನೆಗೈದರು. ಶಂಕರ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪ್ರಮೋದ ಕುಮಾರ್‌ ವಂದಿಸಿದರು.

Advertisement

ಇಂದು ಪರ್ಕಳಕ್ಕೆ ತಿಲಕ್‌ ಮೊಮ್ಮಗ
ಬಾಲಗಂಗಾಧರ ತಿಲಕ್‌ ಅವರ ಮೊಮ್ಮಗ ಪುಣೆ ತಿಲಕ್‌ ಮಹಾರಾಷ್ಟ್ರ ವಿದ್ಯಾಪೀಠದ ಕುಲಪತಿ ಡಾ| ದೀಪಕ್‌ ಜೆ. ತಿಲಕ್‌ ಅವರು ಆ. 27ರ ಸಂಜೆ 5.30ಕ್ಕೆ ಪಾಲ್ಗೊಂಡು ಮಾತನಾಡುವರು.

Advertisement

Udayavani is now on Telegram. Click here to join our channel and stay updated with the latest news.

Next