Advertisement

ಪರ್ಕಳ ರಾ.ಹೆ. ವಿಸ್ತರಣೆ ಕಾಮಗಾರಿ : ಖಾಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ

07:03 PM Apr 12, 2021 | Team Udayavani |

ಉಡುಪಿ : ಕಳೆದ ಒಂದುವರೆ ವರ್ಷದಿಂದ ಸ್ಥಗಿತಗೊಂಡ ಪರ್ಕಳದ ರಾ.ಹೆ. ಕಾಮಗಾರಿಗೆ ಚಾಲನೆ ದೊರಕಿದ್ದು, ಸೋಮವಾರ ಪೇಟೆಯಲ್ಲಿನ ಹಳೆ ಖಾಲಿ ಕಟ್ಟಡಗಳನ್ನು ನೆಲ ಸಮಗೊಳಿಸಲಾಗಿದೆ.

Advertisement

ಪ್ರಸ್ತುತ ಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡು ಹತ್ತಾರು ವಾಣಿಜ್ಯ ಮಳಿಗೆ ಹಾಗೂ ಕಟ್ಟಡಗಳಿವೆ. ಅವುಗಳಲ್ಲಿ ಈಗಾಗಲೇ ಖಾಲಿ ಇರುವ ಕಟ್ಟಡಗಳನ್ನು ಈಗಾಗಲೇ ನೆಲಸಮಗೊಳಿಸಿದ್ದು, ಅವಶೇಷಗಳನ್ನು ಸ್ಥಳಾಂತರಿಸುವ ಕೆಲಸ ಭರದಿಂದ ಸಾಗುತ್ತಿದೆ.

ಪೇಟೆಯಲ್ಲಿ ಹಳೆಕಾಲದ 10 ರಿಂದ 14 ಕಟ್ಟಡಗಳು ತೆರವುಗೊಳ್ಳಲಿದೆ. ಕೆಲ ವಾಣಿಜ್ಯ ಮಳಿಗೆಗಳು ಇನ್ನೂ ಕಾರ್ಯಾಚರಿಸುತ್ತಿದ್ದು, ಇವುಗಳ ತೆರವಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ.

ಕೇಂದ್ರ ಸರಕಾರದಿಂದ ಪರ್ಕಳ ರಾ.ಹೆ. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 3ಡಿ ನೋಟಿಫಿಕೇಶನ್‌ ಆಗಿದೆ. ಭೂಸಂತ್ರಸ್ತರಿಗೆ 21. 84 ಕೋ.ರೂ ಹಾಗೂ ರಾ.ಹೆ. ಇಲಾಖೆ ಆಡಳಿತಾತ್ಮಕ ವೆಚ್ಚ 54.60 ಲ. ರೂ. ಸೇರಿದಂತೆ ಒಟ್ಟು 22.38 ಕೋ. ರೂ. ಪರಿಹಾರಧನ ಬಿಡುಗಡೆಯಾಗಿದೆ. 900 ಮೀ.ನಲ್ಲಿ 72 ಸರ್ವೇ ನಂಬರ್‌ ಭೂಮಿಗಳು ಭೂ ಸ್ವಾಧೀನಕ್ಕೆ ಒಳಪಡುತ್ತದೆ.

Advertisement

ಒಂದು ಸರ್ವೇ ನಂಬರ್‌ಗೆ ಕನಿಷ್ಠ 1 ಲ.ರೂ.ನಿಂದ ಗರಿಷ್ಠ 2.85 ಕೋ.ರೂ.ವರೆಗೆ ಪರಿಹಾರ ಮೊತ್ತ ಮಂಜೂರಾಗಿದೆ. ನೋಟಿಫಿಕೇಶನ್‌ ಆದ 30 ದಿನದೊಳಗಡೆ ಸಂತ್ರಸ್ತರು ದಾಖಲೆಗಳನ್ನುನೀಡಿ ಪರಿಹಾರ ಪಡೆಯಬೇಕು. ಗಡುವು ಮುಗಿದರೆ ಪರಿಹಾರ ಮೊತ್ತವನ್ನು ನ್ಯಾಯಾಲಯಕ್ಕೆ ಕಟ್ಟಲಾಗುತ್ತದೆ. ಅನಂತರ ಸಂತ್ರಸ್ತರು ಪರಿಹಾರವನ್ನು ಅಲ್ಲಿಯೇ ಪಡೆದುಕೊಳ್ಳಬೇಕಾಗುತ್ತದೆ. ಸರಕಾರದಿಂದ ನಿಗದಿಪಡಿಸಿದ ಪರಿಹಾರ ಕಡಿಮೆ ಅನಿಸಿದರೆ, ಪರಿಹಾರ ಪಡೆದ 45 ದಿನದೊಳಗಡೆ ಜಿಲ್ಲಾಧಿಕಾರಿ ಅವರಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಹಂತ ಹಂತವಾಗಿ ಕಟ್ಟಡಗಳ ತೆರವು ಕೆಲಸ ಪ್ರಾರಂಭವಾಗಲಿದೆ. ಸೋಮವಾರ ನಾಲ್ಕು ಕಟ್ಟಡ ತೆರವುಗೊಳಿಸಲಾಗಿದೆ. 3ಡಿ ನೋಟಿಫಿಕೇಶನ್‌ ಜಾರಿಯಾಗಿದ್ದು, ಇದೀಗ ಜಾಗವು ಕೇಂದ್ರ ಸರಕಾರದ ಸ್ವಾಧೀನಕ್ಕೆ ಬಂದಿದೆ.
-ಮಂಜುನಾಥ್‌ ನಾಯಕ್‌, ಎಂಜಿನಿಯರ್‌ ರಾ.ಹೆ. ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next