Advertisement

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

12:29 AM Apr 27, 2024 | Team Udayavani |

ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ಐಎನ್‌ಡಿಐಎ ಒಕ್ಕೂಟಕ್ಕೆ ಕೇವಲ ಎರಡೇ ಧ್ಯೇಯಗಳಿದ್ದು, ಒಂದು “ಪರಿವಾರ ಬಚಾವೋ, ಎರಡನೆಯದ್ದು “ಭ್ರಷ್ಟಾಚಾರ ಬಚಾವೋ’. ಇವುಗಳನ್ನು ಬಿಟ್ಟರೆ ಅವರಿಗೆ ಬೇರೆ ಯಾವುದೇ ಕಾರ್ಯಕ್ರಮಗಳಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

Advertisement

ಶುಕ್ರವಾರ ನಗರದ ಗಣೇಶ ಮಂದಿರದಿಂದ ಭಾರೀ ಜನಸ್ತೋಮದೊಂದಿಗೆ ನಡೆದ ಬೃಹತ್‌ ರೋಡ್‌ ಶೋ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿಯ ಖರ್ಗೆ ಮತ್ತು ಇಂಡಿಯಾ ಒಕ್ಕೂಟ ರಾಷ್ಟ್ರದ ಹಿತಾಸಕ್ತಿ, ಅಭಿವೃದ್ಧಿಗೆ ಗಮನಕೊಡದೇ ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಪರಿವಾರ ಹಾಗೂ ಭ್ರಷ್ಟಾಚಾರ ರಕ್ಷಿಸುವ ಎರಡೇ ಎರಡು ಅಜೆಂಡಾ ಆಧರಿಸಿ ಚುನಾವಣೆ ಕಣಕ್ಕಿಳಿದಿದೆ. ಆದರೆ ಮೋದಿ ಸರಕಾರ ಬಲಿಷ್ಠ ಮತ್ತು ಅಭಿವೃದ್ಧಿಯ ಕನಸಿನದ್ದಾಗಿದೆ. ಕಾಂಗ್ರೆಸ್‌ ಹಗರಣಗಳ ಸರಕಾರವಾಗಿದೆ. ನೂರಾರು ಹಗರಣಗಳಲ್ಲಿ ಸಿಲುಕಿದ ಕಾಂಗ್ರೆಸ್‌ ನಾಯಕರು ಹಾಗೂ ಐಎನ್‌ಡಿಐಎ ಒಕ್ಕೂಟದ ಮುಖಂಡರು ಒಂದೋ ಜೈಲಿನಲ್ಲಿದ್ದಾರೆ ಇಲ್ಲವೇ ಬೇಲ್‌ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಗಣಿ, ಆಗಸ್ತಾ ವೆಸ್ಟ್‌ಲ್ಯಾಂಡ್‌, 2ಜಿ, 3ಜಿ, ಕಾಮನ್ವೆಲ್ತ್‌, ಬಾಹ್ಯಾಕಾಶ ಹಗರಣ ಹೀಗೆ ನೂರಾರು ಹಗರಣಗಳನ್ನು ಮಾಡಿ ಭಾರತವನ್ನು ಕೊಳ್ಳೆ ಹೊಡೆಯಲಾಗಿತ್ತು. ಕಾಂಗ್ರೆಸ್‌ ಪಕ್ಷ ಭೂಮಿ, ಆಕಾಶ, ಪಾತಾಳ ಯಾವುದನ್ನು ಬಿಡದೆ ಲೂಟಿ ಮಾಡಿದೆ. ಮಮತಾ ಸರಕಾರವು ಶಿಕ್ಷಕರ ನೇಮಕಾತಿ ಹಗರಣ, ಭೂಮಿ ಹಗರಣ, ಆಪ್‌ ಸರಕಾರ ಅಬಕಾರಿ ಹಗರಣ ಹೀಗೆ ಐಎನ್‌ಡಿಐಎ ಒಕ್ಕೂಟದ ಪಕ್ಷಗಳಾದ ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ ಹಗರಣಗಳನ್ನು ನಡೆಸಿ ರಾಷ್ಟ್ರದ ಸಂಪತ್ತು ಕೊಳ್ಳೆ ಹೊಡೆದ ದುಷ್ಟ ಕೂಟವಾಗಿದೆ ಎಂದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next