Advertisement

ಐಫೆಲ್‌ ಟವರ್‌ಗೆ ಬುಲೆಟ್‌ಪ್ರೂಫ್ ಗ್ಲಾಸ್‌ ರಕ್ಷಣೆ!

03:45 AM Feb 11, 2017 | |

ಪ್ಯಾರಿಸ್‌: ಇಲ್ಲಿನ ವಿಶ್ವವಿಖ್ಯಾತ ಐಫೆಲ್‌ ಗೋಪುರಕ್ಕೂ ಭಯೋತ್ಪಾದಕರ ಭೀತಿ ತಪ್ಪಿಲ್ಲ. ಪರಿಣಾಮ ಗೋಪುರದ ಅಡಿಯಲ್ಲಿ ಸುಮಾರು 8 ಅಡಿ ಎತ್ತರಕ್ಕೆ ಸುತ್ತಲೂ ಗುಂಡು ನಿರೋಧಕ ಗಾಜು ಅಳವಡಿಸಲು ಪ್ಯಾರಿಸ್‌ ಆಡಳಿತ ಚಿಂತಿಸಿದೆ.

Advertisement

ಈ ಮೂಲಕ ಆತ್ಮಹತ್ಯಾ ಬಾಂಬರ್‌ಗಳು, ಅಥವಾ ಉಗ್ರರು ವಾಹನಗಳನ್ನು ಗೋಪುರದತ್ತ ನುಗ್ಗಿಸುವುದನ್ನು ತಡೆಯಲಿದೆ. ಈ ಗಾಜಿನ ಗೋಡೆಗೆ 143.8 ಕೋಟಿ ರೂ. ವೆಚ್ಚವಾಗಲಿದೆ.1,063 ಅಡಿ ಎತ್ತರವಿರುವ ಐಫೆಲ್‌ ಗೋಪುರ ಮಹತ್ವದ ಸ್ಮಾರಕವಾದ್ದರಿಂದ ಭದ್ರತೆಗೆ ಯೊಜಿಸಲಾಗಿದೆ. ಈ ಹಿಂದೆ ಯೂರೋ 2016 ಫ‌ುಟ್ಬಾಲ್‌ ಪಂದ್ಯಾಟದ ಸಂದರ್ಭ ಗೋಪುರ ಸುತ್ತಲೂ ಉಕ್ಕಿನ ಗೇಟುಗಳನ್ನು ಇಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next