Advertisement
ಫೈನಲ್‌ನಲ್ಲಿ ಮನೀಷ್ ನರ್ವಾಲ್ 234.9 ಅಂಕ ಗಳಿಸಿದರು. ದಕ್ಷಿಣ ಕೊರಿಯಾದ ಹಿರಿಯ ಶೂಟರ್ ಜೊ ಜಿಯೊಂಗುx 237.4 ಅಂಕಗಳೊಂದಿಗೆ ಚಿನ್ನ ಗೆದ್ದರು. ಸ್ಪರ್ಧೆಯ ಒಂದು ಹಂತದಲ್ಲಿ ಮನೀಷ್ ಮುನ್ನಡೆಯ ಲ್ಲಿದ್ದರು. ಆದರೆ ಕ್ರಮೇಣ ಅಂಕ ಗಳಿಕೆಯಲ್ಲಿ ಹಿನ್ನಡೆ ಕಾಣುತ್ತ ಹೋದರು.
Related Articles
Advertisement
ದಿಲಾºಗ್ ನರ್ವಾಲ್, ರಾಜ್ಯ ಮಟ್ಟದ ಮಾಜಿ ಫ್ರೀ ಸ್ಟೈಲ್ ಕುಸ್ತಿಪಟು. ಮಗಳು ಶಿಖಾ ಅಂತಾರಾಷ್ಟ್ರೀಯ ಖ್ಯಾತಿಯ ಶೂಟರ್.ಕಿರಿಯ ಪುತ್ರ ಶಿವ ಕೂಡ ಶೂಟಿಂಗ್‌ನಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ. ಹಿರಿಯ ಮಗ ಮನ್‌ಜಿàತ್ ಕಳೆದ ವರ್ಷ ರಸ್ತೆ ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾಗಿದ್ದರು.
ಟಿಟಿ, ಡಿಸ್ಕಸ್ ಭಾರತಕ್ಕೆ ಹಿನ್ನಡೆಪ್ಯಾರಾಲಿಂಪಿಕ್ಸ್ನ ಶುಕ್ರವಾರದ ಕೆಲವು ಸ್ಪರ್ಧೆಗಳಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಹಿಳೆಯರ ಡಿಸ್ಕಸ್ ತ್ರೊÅà ಎಫ್55 ವಿಭಾಗದ ಫೈನಲ್‌ನಲ್ಲಿ ಸಾಕ್ಷಿ ಕಸಾನ (21.49 ಮೀ.) 8ನೇ ಮತ್ತು ಕರಮ್ ಜ್ಯೋತಿ (20.22 ಮೀ.) 9ನೇ ಸ್ಥಾನ ಪಡೆದರು. ಪ್ಯಾರಾ ಟೇಬಲ್ ಟೆನಿಸ್‌ನ ಮಹಿಳೆ ಯರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭವಿನಾಬೆನ್ ಪಟೇಲ್ ಮತ್ತು ಸೋನಲ್‌ಬೆನ್ ಪಟೇಲ್, ಕೊರಿಯಾದ ಜುಂಗ್ ಯಂಗ್ ಮತ್ತು ಮೂನ್ ಸುಂಘೆÂ ವಿರುದ್ಧ ಸೋಲನುಭವಿಸಿದರು.
ಪ್ಯಾರಾ ರೋವಿಂಗ್‌ನಲ್ಲಿ ಅನಿತಾ ಮತ್ತು ನಾರಾಯಣಾ ಕೊಂಗನಾಪಲ್ಲೆ ಅವರನ್ನೊಳಗೊಂಡ ಜೋಡಿ, ಮಿಶ್ರ ಡಬಲ್ಸ್ ಸ್ಕಲ್ ವಿಭಾಗದ ಹೀಟ್‌ನಲ್ಲಿ 5ನೇ ಸ್ಥಾನ ಪಡೆದಿದೆ. ಆದರೆ ಈ ವಿಭಾಗದ ಸ್ಪರ್ಧಿ ಫೈನಲ್‌ಗೆ ಪ್ರವೇಶಿಸಿರುವುದರಿಂದ ಇಬ್ಬರೂ ರೆಪಿಶೇಜ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪ್ಯಾರಾ ಸೈಕ್ಲಿಂಗ್ ಟ್ರ್ಯಾಕ್ ಪುರುಷರ 3,000 ಮೀ. ವೈಯಕ್ತಿಕ ವಿಭಾಗದಲ್ಲಿ ಅರ್ಷದ್ ಶೇಕ್ 9ನೇ ಸ್ಥಾನ ಪಡೆದರು.ಮಹಿಳಾ ಸಿಂಗಲ್ಸ್‌ನಲ್ಲಿ ಪಲಕ್ ಕೊಹ್ಲಿ, ಇಂಡೋನೇಷ್ಯಾದ ಲಿಯಾನಿ ರತ್ರಿ ವಿರುದ್ಧ 21-18, 5-21, 13-21 ಅಂತರದಿಂದ ಸೋಲನುಭವಿಸಿದರು. ಪ್ಯಾರಾ ಶೂಟಿಂಗ್ ಮಿಶ್ರ 10 ಮೀ. ಏರ್ ರೈಫಲ್‌ನಲ್ಲಿ ಕನ್ನಡಿಗ ಶ್ರೀಹರ್ಷ ದೇವರೆಡ್ಡಿ 9ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಪ್ಯಾರಾ ಆರ್ಚರಿ ಮಹಿಳಾ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಸರಿತಾ, ಮಲೇಷ್ಯಾದ ನೂರ್ ಜೋನಾಥನ್ ಅಬ್ದುಲ್ ವಿರುದ್ಧ ಗೆದ್ದರು.