ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಂಪಿಕ್ಸ್ 2024ರಲ್ಲಿ (Paris Paralympics 2024) ಭಾರತದ ಪದಕ ಬೇಟೆ ಆರಂಭವಾಗಿದೆ. ವನಿತೆಯರ 10 ಮೀ ಏರ್ ರೈಫಲ್ ಸ್ಟಾಂಡಿಂಗ್ ಸ್ಪರ್ಧೆಯಲ್ಲಿ ಭಾರತದ ಅವನಿ ಲೇಖರ (Avani Lekhara) ಅವರು ಚಿನ್ನದ ಪದಕಕ್ಕೆ ಗುರಿಯಿಟ್ಟರೆ, ಮೋನಾ ಅಗರ್ವಾಲ್ (Mona Agarwal) ಕಂಚು ಗೆದ್ದುಕೊಂಡಿದ್ದಾರೆ.
ಚಿನ್ನದ ಪದಕ ಗೆದ್ದ ಅವನಿ ಲೇಖರ ಅವರು ಇತಿಹಾಸ ರಚಿಸಿದರು. ಲೇಖರ ಅವರು ತಮ್ಮದೇ ಆದ ಪ್ಯಾರಾಲಿಂಪಿಕ್ ದಾಖಲೆಯನ್ನು ಇದೇ ವೇಳೆ ಮುರಿದರು. ಇಂದು ಅವರು 249.7 ಸ್ಕೋರ್ ಗಳಿಸಿದರು. ಟೋಕಿಯೊದಲ್ಲಿ ನಡೆದ ಹಿಂದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು 249.6 ರಲ್ಲಿ ಅಂಕ ಸಂಪಾದಿಸಿದರು.
ಅಂತಿಮ ಸುತ್ತಿನಕ್ಕಿಂತ ಹಿಂದಿನ ಸುತ್ತಿನ ಶೂಟ್ ನಲ್ಲಿ ಅವನಿ 9.9 ಅಂಕಕ್ಕೆ ಗುರಿ ಇಟ್ಟರು. ಪ್ರತಿಸ್ಪರ್ಧಿ ಯುನ್ರಿ ಲಿ ಅವರು ಉತ್ತಮ ಆಡುತ್ತಿದ್ದ ಕಾರಣ ಚಿನ್ನ ಗೆಲ್ಲುವ ಸಾಧ್ಯತೆಯ ಬಗ್ಗೆ ಆತಂಕ ಉಂಟಾಗಿತ್ತು. ಅಂತಿಮ ಹೊಡೆತದಲ್ಲಿ ಅವನಿ 10.5ಕ್ಕೆ ಗುರಿ ಇಟ್ಟರು. ಆದರೆ ಒತ್ತಡಕ್ಕೆ ಸಿಲುಕಿದ ಕೊರಿಯಾ ಆಟಗಾರ್ತಿ ಕೇವಲ 6.8 ಅಂಕಕ್ಕೆ ಗುಂಡಿಕ್ಕಿ ನಿರಾಸೆ ಅನುಭವಿಸಿದರು.
ಭಾರತದ ಮೋನಾ ಅಗರ್ವಾಲ್ ಅವರು ಕಂಚಿನ ಪದಕ ಗೆದ್ದು ಕೂಟವನ್ನು ಸ್ಮರಣೀಯವಾಗಿಸಿದರು. ಮೋನಾ 228.7 ರ ಅಂತಿಮ ಸ್ಕೋರ್ ನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.