Advertisement

Paris Olympics: ಸಿಂಗಲ್ಸ್‌ನಲ್ಲಿ ಲಕ್ಷ್ಯ, ಡಬಲ್ಸ್‌ನಲ್ಲಿ ಚಿರಾಗ್‌ ಜೋಡಿಗೆ ಜಯ

10:04 PM Jul 27, 2024 | Team Udayavani |

ಪ್ಯಾರಿಸ್‌: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಲಕ್ಷ್ಯ ಸೇನ್‌ ಗೆಲುವಿನ ಆರಂಭ ಪಡೆದಿದ್ದಾರೆ. ಹಾಲಿ ಅಮೆರಿಕನ್‌ ಚಾಂಪಿಯನ್‌, ಗ್ವಾಟೆಮಾಲಾದ ಕೆವಿನ್‌ ಕಾರ್ಡನ್‌ ವಿರುದ್ಧ 21-8, 22-20 ಅಂತರದ ಜಯ ಸಾಧಿಸಿದರು. ಇದು ಲಕ್ಷ್ಯ ಸೇನ್‌ ಅವರ ಮೊದಲ ಒಲಿಂಪಿಕ್ಸ್‌ ಸ್ಪರ್ಧೆಯಾಗಿದೆ. ಪುರುಷರ ಸಿಂಗಲ್ಸ್‌ನಲ್ಲಿ ಎಲ್‌ ಗುಂಪಿನಲ್ಲಿರುವ ಲಕ್ಷ್ಯ ಸೇನ್‌ಗೆ ಇನ್ನೂ 2 ಪಂದ್ಯಗಳಿವೆ. ಇನ್ನೊಂದು ಪಂದ್ಯ ಗೆದ್ದರೆ ಅವರ ಕ್ವಾರ್ಟರ್‌ ಫೈನಲ್‌ ಸ್ಥಾನ ಖಚಿತವಾಗಲಿದೆ.

Advertisement

ಇನ್ನು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದೆ. ಸಿ ಗುಂಪಿನಲ್ಲಿ ಚಿರಾಗ್‌-ಸಾತ್ವಿಕ್‌ ಜೋಡಿ ಫ್ರಾನ್ಸ್‌ನ ಲೂಕಾಸ್‌ ಕಾರ್ವೀ-ರೋನನ್‌ ಲಬರ್‌ ವಿರುದ್ಧ 21-17, 21-14ರಿಂದ ಗೆಲುವು ಸಾಧಿಸಿದ್ದಾರೆ. ಈ ಜೋಡಿ ಸೋಮವಾರ ಜರ್ಮನಿ ಜೋಡಿಯನ್ನು ಎದುರಿಸಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next