Advertisement

Paris Olympics ಹಾಕಿ ವೇಳಾಪಟ್ಟಿ:ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಮೊದಲ ಪಂದ್ಯ

11:52 PM Mar 06, 2024 | Team Udayavani |

ಲುಸಾನ್ನೆ: ಪ್ಯಾರಿಸ್‌ ಒಲಿಂಪಿಕ್ಸ್‌ ಹಾಕಿ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆ ಯಾಗಿದೆ. ಜು. 27ರಂದು ನಡೆಯ ಲಿರುವ ಮೊದಲ ಪಂದ್ಯ ದಲ್ಲಿ ಭಾರತದ ಪುರುಷರ ತಂಡ ನ್ಯೂಜಿ ಲ್ಯಾಂಡ್‌ ವಿರುದ್ಧ ಸೆಣಸಲಿದೆ.

Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ಆರ್ಜೆಂಟೀನಾ, ಐರ್ಲೆಂಡ್‌, ಹಾಲಿ ಚಾಂಪಿಯನ್‌ ಬೆಲ್ಜಿಯಂ ಮತ್ತು ಆಸ್ಟ್ರೇಲಿಯ. ಈ ತಂಡ ಗಳ ವಿರುದ್ಧ ಭಾರತ ಕ್ರಮವಾಗಿ ಜು. 29, 30, ಆ. 1 ಮತ್ತು 2ರಂದು ಆಡಲಿದೆ.

“ಎ’ ವಿಭಾಗದಲ್ಲಿ ನೆದರ್ಲೆಂಡ್ಸ್‌, ಸ್ಪೇನ್‌, ಜರ್ಮನಿ, ಫ್ರಾನ್ಸ್‌, ಗ್ರೇಟ್‌ ಬ್ರಿಟನ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಆ. 4ರಂದು ಕ್ವಾರ್ಟರ್‌ ಫೈನಲ್ಸ್‌, ಆ. 6ರಂದು ಸೆಮಿಫೈನಲ್ಸ್‌, ಆ. 8ರಂದು ಕಂಚಿನ ಪದಕದ ಪಂದ್ಯ ಹಾಗೂ ಫೈನಲ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next