Advertisement

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

04:03 PM Apr 24, 2024 | Team Udayavani |

ಹುಬ್ಬಳ್ಳಿ: ಬಿಜೆಪಿ ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿಯಾಗಿದೆ, ದ್ವಂದ್ವತೆ, ಜನರನ್ನು ಒಡೆದಾಳುವ ನೀತಿ, ವಿಭಜನೆ ಬಿಜೆಪಿ ಡಿಎನ್ ಎನಲ್ಲಿಯೇ ಇದೆ ಎಂದು ಕಾಂಗ್ರೆಸ್ ಪಕ್ಷದವ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ ಆರೋಪಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ನೀಡಿದ್ದ ಯಾವುದಾದರು ಭರವಸೆಯನ್ನು ಬಿಜೆಪಿ ಈಡೇರಿಸಿದೆಯೇ. ಅದು ಸ್ವಾಮಿನಾಥನ್ ವರದಿ ಅನುಷ್ಠಾನವಿರಲಿ, ವಿದೇಶಗಳಿಂದ ಕಪ್ಪು ಹಣ ತಂದು ಜನರಿಗೆ ಹಂಚುವುದದಿರಲಿ ಯಾವುದು ಮಾಡಿದ್ದಾರೆ. ಅವರು ಮಾಡಿದ್ದು ಒಂದೇ, ಭಾವನೆಗಳನ್ನು‌ ಕೆರಳಿಸುವುದು, ಬ್ರಿಟಿಷ ರಂತೆ ಒಡೆದಾಳುವ ನೀತಿ ಅನುಸರಿಸುವುದು.ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡು ಮಾಡೆಲ್ ನಲ್ಲಿ ನಡೆಯುತ್ತಿದೆ ಒಂದು ಕಾಂಗ್ರೆಸ್ ನ ಗ್ಯಾರಂಟಿ ಇನ್ನೊಂದು ಬಿಜೆಪಿಯ ಖಾಲಿ ಚೊಂಬು. ಪ್ರಧಾನಿಯವರು ಸುಮಾರು 73 ಸಾರ್ವಜನಿಕ ಉದ್ಯಮ ಗಳನ್ನು ಖಾಸಗಿ ತೆಕ್ಕೆಗೆ ನೀಡಿದ್ದಾರೆ. 100ಕ್ಕೂ ಹೆಚ್ಚು ವಿಮಾನ ನಿಲ್ದಾಣ, ಬಂದರುಗಳು ಕೆಲವರ ಕೈಗೆ ಬೀಡಲಾಗಿದೆ ಎಂದು ಆರೋಪಿಸಿದರು.

ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದು, ದಲಿತರು, ಹಿಂದುಳಿದವರ ಮೀಸಲಾತಿ ಕಬಳಿಸುವ ರೀತಿ ಸರ್ಕಾರಿ ಹುದ್ದೆಗಳಿಗೆ ಖಾಸಗಿಯವರ ನೇಮಕ ಮಾಡಿದ್ದು ಇದೇ ಮೋದಿ ಸರ್ಕಾರ ಅಲ್ಲವೇ? ಎಂದರು.

ಪ್ರಧಾನಿ ಕೀಳುನಟ್ಟದ ಶಬ್ದ ಬಳಕೆ ನಾಚಿಕೆಗೇಡು.ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದಾಗ ಯಡಿಯೂರಪ್ಪ ಸೇರಿ ಬಿಜೆಪಿಯವರು ತಮಾಷೆ ಮಾಡಿದ್ದರು, ಮೋದಿಯವರು ಇವುಗಳ ಅನುಷ್ಠಾನ ಅಸಾಧ್ಯ, ಇದರಿಂದ ರಾಜ್ಯ ದಿವಾಳಿ ಆಗಲಿದೆ ಎಂದಿದ್ದರು. ಇದೀಗ ನಮ್ಮ ಗ್ಯಾರಂಟಿ ಯನ್ನ ಮೋದಿಯವರು ಕದ್ದು ಪ್ರಚಾರ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಚರ್ಚೆಗೆ ಬರಲಿ, ನಮ್ಮ ಸಿಎಂ, ಡಿಸಿಎಂ, ಸಚಿವರು ಬರುತ್ತಾರೆ. ಬಹಿರಂಗ ಚರ್ಚೆಗೆ ಸ್ಥಳ ಅವರೇ ನಿಗದಿ ಪಡಿಸಲಿ ಎಂದು ಬಹಿರಂಗ ಸವಾಲು ಹಾಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next