Advertisement

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

01:41 AM Apr 20, 2024 | Team Udayavani |

ಹೊಸದಿಲ್ಲಿ: ಫಿಲಿಪ್ಪೀನ್ಸ್‌ಗೆ ಭಾರತ ದಿಂದ ಮೊದಲ ಕಂತಿನ ಬ್ರಹ್ಮೋಸ್‌ ಕ್ಷಿಪಣಿಯನ್ನು ಹಸ್ತಾಂತರಿಸಲಾಗಿದೆ. ಮೊದಲ ಬಾರಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತ ರಫ್ತು ಮಾಡಿದೆ.

Advertisement

2022ರ ಜನವರಿಯಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಮಾರಾಟದ ಕುರಿತು ಭಾರತ ಮತ್ತು ಫಿಲಿಪ್ಪೀನ್ಸ್‌ ನಡುವೆ 3,129 ಕೋಟಿ ರೂ. ಮೊತ್ತದ ಒಪ್ಪಂದ ಏರ್ಪ ಟ್ಟಿತು. ಇದರ ಭಾಗವಾಗಿ ಭಾರತ ಶುಕ್ರವಾರ ಮೊದಲ ಕಂತಿನ ಬ್ರಹ್ಮೋಸ್‌ ಕ್ಷಿಪಣಿಯನ್ನು ಹಸ್ತಾಂತರಿಸಿದೆ. ಒಪ್ಪಂದ ಅನ್ವಯ 3 ಕ್ಷಿಪಣಿಗಳನ್ನು ಭಾರತ ನೀಡಬೇಕಾಗಿದೆ.

ದಕ್ಷಿಣ ಚೀನ ಸಮುದ್ರ ದಲ್ಲಿ ಚೀನದಿಂದ ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆಗಳು ಜಾಗತಿಕ ವಾಗಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಫಿಲಿಪ್ಪೀನ್ಸ್‌ನೊಂದಿಗೆ ರಕ್ಷಣ ಸಹಕಾರ ವನ್ನು ಬಲಪಡಿಸುವ ಗುರಿ ಯನ್ನು ಭಾರತ ಹೊಂದಿದೆ.

ಐಎಎಫ್ನ ಸಿ-17 ಗ್ಲೋಬ್‌ಮಾಸ್ಟರ್‌ ವಿಮಾನವು ಬ್ರಹ್ಮೋಸ್‌ ಕ್ಷಿಪಣಿ ಯನ್ನು ಭಾರತದಿಂದ ಫಿಲಿಪ್ಪೀನ್ಸ್‌ಗೆ ಸಾಗಿಸಿತು. ಇದು 2 ಮಿಸೈಲ್‌ ಲಾಂಚರ್‌ಗಳು, ರೇಡಾರ್‌ ಘಟಕ, ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಅನ್ನು ಒಳಗೊಂಡಿದೆ. ಅರ್ಜೆಂಟೀನಾ ಸೇರಿ ಕೆಲವು ವಿದೇಶಗಳು ಬ್ರಹ್ಮೋಸ್‌ ಕ್ಷಿಪಣಿ ಖರೀದಿಸಲು ಆಸಕ್ತಿ ತೋರಿವೆ.

Advertisement

Udayavani is now on Telegram. Click here to join our channel and stay updated with the latest news.

Next