Advertisement

Paris Olympics Hockey: ನ್ಯೂಜಿಲ್ಯಾಂಡ್‌ ವಿರುದ್ಧ ಗೆದ್ದು ಭಾರತ ಶುಭಾರಂಭ

01:16 AM Jul 28, 2024 | Team Udayavani |

ಪ್ಯಾರಿಸ್‌: ಒಲಿಂಪಿಕ್ಸ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತ ಗೆಲುವಿನ ಆರಂಭ ಮಾಡಿದೆ. ಮೊದಲ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್‌ಗೆ 3-2 ಗೋಲುಗಳ ಸೋಲುಣಿಸಿದೆ.

Advertisement

ಪಂದ್ಯದ ಮೊದಲ ಗೋಲು ನ್ಯೂಜಿಲ್ಯಾಂಡ್‌ನಿಂದ ದಾಖಲಾಯಿತು. 8ನೇ ನಿಮಿಷದಲ್ಲೇ ಸ್ಯಾಮ್‌ ಲೇನ್‌ ಭಾರತದ ಮೇಲೆ ಆಕ್ರಮಣಗೈದರು. ದ್ವಿತೀಯ ಕ್ವಾರ್ಟರ್‌ನಲ್ಲಿ ಮನ್‌ದೀಪ್‌ ಸಿಂಗ್‌ ಪಂದ್ಯವನ್ನು ಸಮಬಲಕ್ಕೆ ತಂದರು. 24ನೇ ನಿಮಿಷದಲ್ಲಿ ಈ ಗೋಲು ಸಿಡಿಯಿತು. 3ನೇ ಕ್ವಾರ್ಟರ್‌ನ 34ನೇ ನಿಮಿಷದಲ್ಲಿ ವಿವೇಕ್‌ ಸಾಗರ್‌ ಪ್ರಸಾದ್‌ ಭಾರತಕ್ಕೆ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು. ಹೀಗೆ 3 ಕ್ವಾರ್ಟರ್‌ಗಳಲ್ಲಿ 3 ಗೋಲು ದಾಖಲಾಯಿತು.

53ನೇ ನಿಮಿಷದಲ್ಲಿ ಸೈಮನ್‌ ಚೈಲ್ಡ್‌ ಬಾರಿಸಿದ ಗೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಪಂದ್ಯವನ್ನು ಸಮಬಲಕ್ಕೆ ತಂದಿತು. ಇನ್ನೇನು ಪಂದ್ಯದ ಮುಕ್ತಾಯಕ್ಕೆ ಒಂದು ನಿಮಿಷ ಉಳಿದಿರುವಾಗ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ 3ನೇ ಗೋಲು ಬಾರಿಸಿ ಭಾರತದ ಗೆಲುವನ್ನು ಸಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next