Advertisement

Paris Olympics: ಬಜರಂಗ್‌, ರವಿ ದಹಿಯಾಗೆ ಲಭಿಸಲಿಲ್ಲ ಟಿಕೆಟ್‌

11:25 PM Mar 10, 2024 | Team Udayavani |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಪದಕ ಜಯಿಸಿದ್ದ ಕುಸ್ತಿಪಟುಗಳಾದ ಬಜರಂಗ್‌ ಪೂನಿಯ ಮತ್ತು ರವಿ ದಹಿಯಾ ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಸಂಪಾದಿಸುವಲ್ಲಿ ವಿಫ‌ಲರಾಗಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಸೋತ ಕಾರಣ ಇಬ್ಬರಿಗೂ ಭಾರೀ ಹಿನ್ನಡೆಯಾಗಿದೆ.

Advertisement

65 ಕೆಜಿ ವಿಭಾಗದ ಫ್ರೀಸ್ಟೈಲ್‌ ಸೆಮಿಫೈನಲ್‌ನಲ್ಲಿ ಬಜರಂಗ್‌ ಪೂನಿಯ ಅವರನ್ನು ರೋಹಿತ್‌ ಕುಮಾರ್‌ 9-1 ಅಂತರದಿಂದ ಪರಾಭವಗೊಳಿಸಿದರು. 57 ಕೆಜಿ ವಿಭಾಗದಲ್ಲಿ ಅಮಾನ್‌ ಸೆಹ್ರಾವತ್‌ 14-13ರಿಂದ ರವಿ ದಹಿಯಾ ಅವರನ್ನು ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next