Advertisement
ಪ್ಯಾರಿಸ್‌ನ ಹಲವು ಕಡೆ ಫೈಬರ್ ಲೈನ್‌ಗಳನ್ನು ಧ್ವಂಸಗೊಳಿಸಲಾಗಿದೆ. ಹಲವು ಕಡೆ ದೂರಸಂಪರ್ಕ ವ್ಯತ್ಯಯವಾಗಲು ಕಾರಣವಾಗಿದ್ದರೂ ಒಲಿಂಪಿಕ್ಸ್ ಸಂಘಟಕರು ಮಾತ್ರ ತಮಗೆ ಏನಾದರೂ ತೊಂದರೆಯಾಗಿದೆಯೇ ಎಂದು ಬಾಯಿ ಬಿಟ್ಟಿಲ್ಲ. ಆದರೆ ಫ್ರಾನ್ಸ್ ಸರಕಾರದ ಕನಿಷ್ಠ 6 ಇಲಾಖೆಗಳಿಗೆ ಇದರಿಂದ ತೊಂದರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹನ್ನೆರಡು ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ಯಾರಿಸ್‌ನ ಸೆನ್ ನದಿಯನ್ನು ಶುದ್ಧೀಕರಿಸಿದ್ದರೂ ಪ್ರಯೋಜನವಾಗಿಲ್ಲ. ಇದರಲ್ಲಿ ಈಜು ಸ್ಪರ್ಧೆಗಳನ್ನು ನಡೆಸುವಷ್ಟು ನೀರಿನ ಗುಣಮಟ್ಟ ವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಟ್ರಯಾಥ್ಲಾನ್ ಸಂಘಟಕರು ಸತತ 2ನೇ ದಿನವೂ ಇಲ್ಲಿ ನಡೆಯಬೇಕಾದ ಈಜು ಸ್ಪರ್ಧೆಯನ್ನು ಮುಂದೂ ಡಿದ್ದಾರೆ. ನದಿಯ ನೀರಿನ ಗುಣಮಟ್ಟ ಮುಂದಿನ ಅವಧಿಯಲ್ಲಿ ಸುಧಾರಿಸಿದರೆ, ಇಲ್ಲಿ ಟ್ರಯಾಥ್ಲಾನ್ ಕ್ರೀಡೆಯ ಈಜು ಸ್ಪರ್ಧೆ ನಡೆಯುತ್ತದೆ. ಇಲ್ಲವಾದರೆ ಈಜನ್ನು ಮಾತ್ರ ರದ್ದು ಮಾಡಲಾಗುತ್ತದೆ.