Advertisement

Paris Olympics; ಕೊನೆ ಕ್ಷಣದಲ್ಲಿ ತಪ್ಪಿತು ಅರ್ಜುನನ ಗುರಿ; ನಾಲ್ಕನೇ ಸ್ಥಾನಕ್ಕೆ ತೃಪ್ತಿ

04:20 PM Jul 29, 2024 | Team Udayavani |

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics) ಭಾರತದ ಮತ್ತೊಂದು ಪದಕ ಕೊನೆಯ ಕ್ಷಣದಲ್ಲಿ ಕೈತಪ್ಪಿತು. ಪುರುಷರ 10 ಮೀ ಏರ್ ರೈಫಲ್ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿದ್ದ ಅರ್ಜುನ್ ಬಬುಟ (Arjun babuta) ನಾಲ್ಕನೇ ಸ್ಥಾನಿಯಾಗಿ ಪಂದ್ಯ ಮುಗಿಸಿದರು.

Advertisement

ಚಂಡೀಗಢದ ಅರ್ಜುನ್‌ ಬಬುಟ 7ನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದರು. ಫೈನಲ್ ನಲ್ಲಿ ಕೊನೆಯವರೆಗೆ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದ ಅರ್ಜುನ್ ಅತ್ಯಂತ ಕೊನೆ ಶೂಟ್ ನಲ್ಲಿ 9.5 ರೇಂಜ್ ಗೆ ಹೊಡೆದು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಫೈನಲ್ ನಲ್ಲಿ ಅರ್ಜುನ್ 208.4 ಅಂಕ ಸಂಪಾದಿಸಿದರು.

ಚೀನಾದ ಎಲ್ ಎಚ್ ಶೆಂಗ್ ಮೊದಲ ಸ್ಥಾನ ಪಡೆದರೆ, ಸ್ವೀಡನ್ ನ ವಿ ಲಿಂಡ್ ಗ್ರೀನ್ ಎರಡನೇ ಸ್ಥಾನ ಪಡೆದರು. ಕ್ರೋವೇಶಿಯಾದ ಸ್ಪರ್ಧಿ ಮೂರನೇ ಸ್ಥಾನ ಪಡೆದರು.

ನಿರಾಸೆ ಮೂಡಿಸಿದ ರಮಿತಾ

ವನಿತೆಯರ 10 ಮೀ ಏರ್ ರೈಫಲ್ ವಿಭಾಗದಲ್ಲಿ ಪದಕ ನಿರೀಕ್ಷೆ ಮೂಡಿಸಿದ್ದ ರಮಿತಾ ಜಿಂದಾಲ್ (Ramita Jindal) ಇಂದು ನಿರಾಸೆ ಅನುಭವಿಸಿದರು. ಫೈನಲ್ ನಲ್ಲಿ ಏಳನೇ ಸ್ಥಾನಿಯಾಗಿ ಕೂಟ ಮುಗಿಸಿದರು.

Advertisement

ಹಾಂಗ್‌ಝೋ ಏಷ್ಯಾಡ್‌ನ‌ಲ್ಲಿ ಕಂಚಿನ ಪದಕ ಗೆದ್ದಿರುವ ರಮಿತಾ 636.4 ಅಂಕಗಳೊಂದಿಗೆ ಅಗ್ರ 8 ಶೂಟರ್‌ಗಳ ಫೈನಲ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ಕಂಚಿನ ಪದಕ ಸವಾಲಿಗೆ ಮನು- ಸರಬ್ಜೋತ್

ಈ ಬಾರಿಯ ಒಲಿಂಪಿಕ್ಸ್ ನ ಭಾರತದ ಮೊದಲ ಪದಕ ವಿಜೇತೆ ಮನು ಭಾಕರ್ (Manu Bhaker) ಅವರ ತಮ್ಮ ಓಟ ಮುಂದುವರಿಸಿದ್ದಾರೆ. 10 ಮೀ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ ನಲ್ಲಿ ಮನು ಭಾಕರ್ ಮತ್ತು ಸರ್ಬಜೋತ್ ಸಿಂಗ್ ಅವರು ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದರು. ಅರ್ಹತಾ ಸುತ್ತಿಗೆ ಈ ಜೋಡಿ ಮೂರನೇ ಸ್ಥಾನ ಪಡೆದರು.

ಮನು ಮತ್ತು ಸರಬ್ಜೋತ್ ತಮ್ಮ 3 ಸಿರೀಸ್ ನಲ್ಲಿ 193, 195 ಮತ್ತು 192 ಅಂಕ ಗಳಿಸಿದರು. ಅವರು ಕಂಚಿನ ಪದಕದ ಪಂದ್ಯದಲ್ಲಿ ಕೊರಿಯಾದ ಜಿನ್ ಯೆ ಓಹ್ ಮತ್ತು ವೊನ್ಹೋ ಲೀ ಅವರನ್ನು ಎದುರಿಸಲಿದ್ದಾರೆ. ಟರ್ಕಿಯ ಇಲ್ಲೈಡಾ ತರ್ಹಾನ್ ಮತ್ತು ಯೂಸೆಫ್ ಡಿಕೆಕ್ ಮತ್ತು ಸೆರ್ಬಿಯಾದ ಝೋರಾನಾ ಅರುನೋವಿಕ್ ಮತ್ತು ದಮಿರ್ ಮೈಕೆಕ್ ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಈ ಎರಡು ಪಂದ್ಯಗಳು ಮಂಗಳವಾರ (ಜುಲೈ 30) ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next