Advertisement

Paris Olympics ಆರ್ಚರಿ: ಮಿಂಚಿದ ಧೀರಜ್‌, ಅಂಕಿತಾ

11:44 PM Jul 25, 2024 | Team Udayavani |

ಪ್ಯಾರಿಸ್‌: ಉತ್ತಮ ಫಾರ್ಮ್ ನಲ್ಲಿರುವ ಧೀರಜ್‌ ಬೊಮ್ಮದೇವರ ಮತ್ತು ಅಂಕಿತಾ ಭಕತ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಆರ್ಚರಿ ಕ್ರೀಡೆಯ ರಿಕರ್ವ್‌ ತಂಡ ಸ್ಪರ್ಧೆಯಲ್ಲಿ ನೇರ ವಾಗಿ ಕ್ವಾರ್ಟರ್‌ಫೈನಲಿಗೆ ಪ್ರವೇಶಿಸುವ ಮೂಲಕ ಭಾರತದ ಅಭಿಯಾನವನ್ನು ಉತ್ತರ ರೀತಿಯಲ್ಲಿ ಆರಂಭಿಸಿದ್ದಾರೆ.

Advertisement

ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿ ಸುತ್ತಿರುವ ಧೀರಜ್‌ ಮತ್ತು ಅಂಕಿತಾ ಅವರ ಅಮೋಘ ನಿರ್ವಹಣೆಯಿಂದ ಭಾರತ ಅಗ್ರ ನಾಲ್ಕರೊಳಗಿನ ಸ್ಥಾನ ಪಡೆದಿದೆ. ಈ ಮೂಲಕ ಆರ್ಚರಿಯಲ್ಲಿ ಒಲಿಂಪಿಕ್‌ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದೆ. ಈ ವಿಭಾಗದ ಅಗ್ರ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲಿಗೇರಲಿವೆ.

ವೈಯಕ್ತಿಕ ವಿಭಾಗದಲ್ಲಿ ವಿಶ್ವಕಪ್‌ ಕಂಚು ವಿಜೇತ ಧೀರಜ್‌ ಅಂಟಾಲ್ಯದ ಮೌರೊ ನೆನ್ಪೋಲಿ ಅವರನ್ನು ಸೋಲಿಸಿ ನಾಲ್ಕನೇ ಸ್ಥಾನ ಪಡೆದರು. ಪುರುಷರ ತಂಡ ಒಟ್ಟಾರೆ ಮೂರನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲಿಗೇರಿದೆ.

ವನಿತೆಯರ ವಿಭಾಗದಲ್ಲಿ ಅಂಕಿತಾ ಭಕತ್‌ ಅಮೋಘ ನಿರ್ವಹಣೆ ನೀಡಿ ಅನುಭವಿ ದೀಪಿಕಾ ಕುಮಾರಿ ಅವರನ್ನು ಹಿಂದಿಕ್ಕಿ 11ನೇ ಸ್ಥಾನ ಪಡೆದಿ ದ್ದಾರೆ. 26ರ ಹರೆಯದ ಅಂಕಿತಾ 666 ಅಂಕಗಳೊಂದಿಗೆ ಭಾರತದ ಅಗ್ರ ರ್‍ಯಾಂಕಿನ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ತಂಡ ವಿಭಾಗದಲ್ಲಿ ಒಟ್ಟಾರೆ 1983 ಅಂಕ ಪಡೆದಿರುವ ಭಾರತ ನಾಲ್ಕನೇ ಸ್ಥಾನ ಪಡೆದಿದೆ. 2046 ಅಂಕ ಪಡೆದಿರುವ ಕೊರಿಯ ಅಗ್ರಸ್ಥಾನದಲ್ಲಿದ್ದರೆ ಚೀನಾ ದ್ವಿತೀಯ ಮತ್ತು ಮೆಕ್ಸಿಕೊ ಮೂರನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next