Advertisement

Paris Olympics; ಸೀನ್ ನದಿಯ ಉದ್ದಕ್ಕೂ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭ

01:04 AM Jul 27, 2024 | Team Udayavani |

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಫ್ರೆಂಚ್ ರಾಜಧಾನಿಯ ಸೀನ್ ನದಿಯ ಉದ್ದಕ್ಕೂ
ಜುಲೈ 26 ರಂದು (ಶುಕ್ರವಾರ) ನಡೆಯಿತು. ಹಿಂದೆಂದೂ ನೋಡಿರದ ಉದ್ಘಾಟನಾ ಸಮಾರಂಭದ ಅತ್ಯಾಕರ್ಷಕ ನೋಟವನ್ನು ಸೆರೆ ಹಿಡಿಯಲು ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಕ್ರೀಡಾಕೂಟವು ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದ್ದು, ನಾಲ್ಕು ಗಂಟೆಗಳ ಅವಧಿಯ ಕರ್ಟನ್ ರೈಸರ್ ಕ್ರೀಡೆಯ ದೊಡ್ಡ ಆಚರಣೆಯ ಮೆರುಗು ಹೆಚ್ಚಿಸಿತು.

Advertisement

ಪಿವಿ ಸಿಂಧು ಮತ್ತು ಶರತ್ ಕಮಲ್ ಅವರು ಸೀನ್ ನದಿಯಲ್ಲಿ ರಾಷ್ಟ್ರಗಳ ಪರೇಡ್‌ನಲ್ಲಿ ಭಾರತವನ್ನು ಮುನ್ನಡೆಸಿದರು. ಉನ್ನತ ಕಲಾವಿದರ ಕೆಲವು ವಿದ್ಯುನ್ಮಾನ ಪ್ರದರ್ಶನಗಳ ನಡುವೆ ತೇಲುವ ಮೆರವಣಿಗೆ ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ಸಿಂಧು ಮತ್ತು ಶರತ್ ಅವರು ಪ್ಯಾರಿಸ್ ಗೇಮ್ಸ್‌ನ ಆರಂಭಿಕ ದಿನದಂದು ಭಾರತ ತಂಡದೊಂದಿಗೆ ಹೊಸ ಹುರುಪು ತೋರಿದರು.

ಪರೇಡ್ ಆಫ್ ನೇಷನ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸುಮಾರು 78 ಅತ್ಲೀಟ್‌ಗಳು ಮತ್ತು ಸಹಾಯಕ ಸಿಬಂದಿ ಸೀನ್ ನದಿಯಲ್ಲಿ ಬೋಟ್ ನಲ್ಲಿ ಮಿಂಚಿದರು.

ಫುಟ್ಬಾಲ್ ಪಟು ಝಿನೆಡಿನ್ ಜಿಡಾನೆ ಅವರು ಒಲಿಂಪಿಕ್ ಜ್ಯೋತಿಯನ್ನು ಸ್ಟೇಡ್ ಡಿ ಫ್ರಾನ್ಸ್‌ನಿಂದ ಉದ್ಘಾಟನಾ ಸಮಾರಂಭದ ಸ್ಥಳಕ್ಕೆ ಮರಳಿ ತಂದ ನಂತರ ಬೆಳಗ್ಗೆ(ಫ್ರಾನ್ಸ್ ಕಾಲಮಾನ) 11 ಗಂಟೆಗೆ ಪ್ರಾರಂಭವಾದ ರಾಷ್ಟ್ರಗಳ ಮೆರವಣಿಗೆಯಲ್ಲಿ ಗ್ರೀಸ್ ಮುನ್ನಡೆಸುವ ತಂಡವಾಗಿತ್ತು. ಸೀನ್ ನದಿಯ ಉದ್ದಕ್ಕೂ 6 ಕಿ.ಮೀ. ಐಫೆಲ್ ಟವರ್‌ನ ಮುಂಭಾಗದಲ್ಲಿರುವ ಆಸ್ಟರ್ಲಿಟ್ಜ್ ಸೇತುವೆ ಯಿಂದ ಟ್ರೋಕಾಡೆರೊಗೆ ನದಿಯಲ್ಲೇ ಅತ್ಯಾಕರ್ಷಕ ಮೆರವಣಿಗೆ ಸಾಗಿತು.

Advertisement

Advertisement

Udayavani is now on Telegram. Click here to join our channel and stay updated with the latest news.

Next