Advertisement
ನೀರಜ್ ಚೋಪ್ರಾಒಲಿಂಪಿಕ್ಸ್ ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ 89.94 ಮೀ. ದೂರ ಜಾವೆಲಿನ್ ಎಸೆದು ಕ್ಷಮತೆಯನ್ನು ತೋರಿಸಿದ್ದಾರೆ. ಈ ವರ್ಷ ಎಲ್ಲ ಆ್ಯತ್ಲೀಟ್‌ಗಳು 89 ಮೀ.ಗಿಂತ
ಕಡಿಮೆ ದೂರ ಜಾವೆಲಿನ್ ಎಸೆದಿರುವುದು ನೀರಜ್ ಮೇಲಿನ ಭರವಸೆಯನ್ನು ಹೆಚ್ಚಿಸಿದೆ.
ಸಾಧನೆ: ಟೋಕಿಯೋ ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ .
ಮಹತ್ವದ ಟೂರ್ನಿಗಳಲ್ಲಿ ಭಾರತಕ್ಕೆ ಪದಕ ತಂದ ಕೀರ್ತಿ ಸಿಂಧುಗೆ ಸಲ್ಲುತ್ತದೆ. 2016, 2021 ವರ್ಷದಲ್ಲಿ ಪ್ರದರ್ಶನ ಉತ್ತಮವಾಗಿರದಿದ್ದರೂ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದರು.
ಸಾಧನೆ: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು
Related Articles
ಮನು ಬಾಕರ್
10 ಮೀ. ಏರ್ ಪಿಸ್ತೂಲ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮನು ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಕ್ಷಮತೆ ಹೊಂದಿರುವುದು ಇವರ ಬಲವಾಗಿದೆ.
ಸಾಧನೆ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ
Advertisement
ಸಾತ್ವಿಕ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ಸ್ ಪದಕ ತಂದುಕೊಡಬಲ್ಲ ಜೋಡಿ ಇದಾಗಿದೆ. ಬಲವಾದ ಶಾಟ್ಸ್, ಡ್ರಾಪ್ ಶಾಟ್‌ಗಳ ಮೂಲಕ ಎದುರಾಳಿಗಳಿಗೆ ಮುಳುವಾಗಬಲ್ಲರು.
ಸಾಧನೆ: ವಿಶ್ವದ ನಂ.1 ರ್‍ಯಾಂಕಿಂಗ್, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಲವ್ಲಿನಾ ಬೊರ್ಗೊಹೇನ್
ತನ್ನ ಪಂಚ್‌ಗಳಲ್ಲಿ ಭಾರಿ ಶಕ್ತಿಯನ್ನು ಹೊಂದಿರುವ ಲವಿÉನಾ ಈ ಬಾರಿ 75 ಕೆ.ಜಿ. ವಿಭಾಗದಲ್ಲಿ ಭಾರತಕ್ಕೆ ಪದಕ ತರಬಲ್ಲರು. ಸತತ ಅಭ್ಯಾಸದ ಮೂಲಕ ಕೌಶಲಗಳನ್ನು ಕರಗತಮಾಡಿಕೊಂಡು ಸಿದ್ಧವಾಗಿದ್ದಾರೆ.
ಸಾಧನೆ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಅಂತಿಮ್ ಪಂಘಲ್
ಹಲವು ಟೂರ್ನಿಗಳಲ್ಲಿ ಪದಕ ಬೇಟೆಯಾಡಿರುವ ಅಂತಿಮ್ 3 ಕೆ.ಜಿ. ವಿಭಾಗದಲ್ಲಿ ಈ ಬಾರಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
ಸಾಧನೆ: ಏಷ್ಯನ್ ಗೇಮ್ಸ್ ಕಂಚು. ಅದಿತಿ ಅಶೋಕ್
ಗಾಲ್ಫ್ ರ್‍ಯಾಂಕಿಂಗ್‌ನಲ್ಲಿ 39ನೇ ಸ್ಥಾನಕ್ಕೇರಿರುವ ಅದಿತಿ, ಕಳೆದ ಕೆಲವು ವರ್ಷಗಳಿಂದ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಗುರಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಉತ್ತಮ ಕೌಶಲ್ಯವನ್ನು ಹೊಂದಿದ್ದಾರೆ.
ಸಾಧನೆ: ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಭಾರತ ಪುರುಷರ ಹಾಕಿ ತಂಡ
ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ಪದಕ ಗೆದ್ದಿರುವ ದಾಖಲೆ ಹೊಂದಿರುವ ಭಾರತ ಹಾಕಿ ತಂಡ ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಹಿರಿಯ ಮತ್ತು ಕಿರಿಯ ಆಟಗಾರನ್ನು ಒಳಗೊಂಡಿರುವ ತಂಡ ಸಾಕಷ್ಟು ಸಮತೋಲಿತವಾಗಿದೆ.
ಸಾಧನೆ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು, ಒಲಿಂಪಿಕ್ಸ್‌ನಲ್ಲಿ 8 ಚಿನ್ನ ಅವಿನಾಶ್ ಸಾಬ್ಲೆ
3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಪದಕದ ಭರವಸೆ ಮೂಡಿಸಿದ್ದಾರೆ. 8.09 ನಿಮಿಷದ ದಾಖಲೆ ಹೊಂದಿರುವ ಇವರು ಐದಾರು ಸೆಕೆಂಡ್ ಹೆಚ್ಚಿಸಿಕೊಳ್ಳುವ ಮೂಲಕ ಪದಕ ಗೆಲ್ಲಬಹುದು.
ಸಾಧನೆ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಅಮನ್ ಸೆಹ್ರಾವತ್
ವೇಗವಾಗಿ ಮತ್ತು ಚಾಣಕ್ಷ್ಯತನದಿಂದ ರಿಂಗ್‌ನಲ್ಲಿ ಓಡಾಡುವ ಅಮನ್ ಕೌಶಲ ಭಾರತಕ್ಕೆ ಪದಕ ತಂದುಕೊಡಬಲ್ಲದು. ಆರಂಭದಲ್ಲಿ ಅಟ್ಯಾಕಿಂಗ್ ಮೂಲಕ ಎದುರಾಳಿಗಳನ್ನು ಕಾಡುತ್ತಿದ್ದ ಅಮನ್, ಈಗ ಡಿಫೆನ್ಸ್ ಸಹ ಕರಗತ ಮಾಡಿಕೊಂಡಿದ್ದಾರೆ.
ಸಾಧನೆ: ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಮೀರಾಬಾಯಿ ಚಾನು
ಈ ವರ್ಷ 200 ಕೆ.ಜಿ.ಗೂ ಹೆಚ್ಚು ತೂಕ ಎತ್ತಿರುವ ಚಾನು ಪದಕದ ಭರವಸೆ ಮೂಡಿಸಿದ್ದಾರೆ. ಒಲಿಂಪಿಕ್ಸಲ್ಲಿ ಪದಕ ಗೆಲ್ಲಲು 200ರಿಂದ 210 ಕೆ.ಜಿ. ಎತ್ತಿದರೆ ಸಾಕು.
ಸಾಧನೆ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿನೇಶ್ ಫೋಗಟ್
50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವುದಕ್ಕಾಗಿ ತೂಕ ಇಳಿಸಿಕೊಂಡಿರುವ ವಿನೇಶ್, ಕೌಶಲಭರಿತ ಪಟ್ಟುಗಳ ಮೂಲಕ ಪದಕ ಗೆಲ್ಲಬಲ್ಲರು. ರಿಂಗ್‌ನಲ್ಲಿ ಚಾಕಚಕ್ಯತೆಯಿಂದ ಓಡಾಡುವ ಅವರ ಕಾಲುಗಳೇ ಇದಕ್ಕೆ ಸಾಕ್ಷಿ
ಸಾಧನೆ: ಏಷ್ಯನ್ ಚಾಂಪಿಯನ್, ಕಾಮನ್‌ವೆಲ್ತ್‌ನಲ್ಲಿ 3 ಚಿನ್ನ ಸಿಫ್ತ್ ಕೌರ್ ಸಮ್ರಾ
50 ಮೀ. ಶೂಟಿಂಗ್‌ನಲ್ಲಿ ತನ್ನ ಹೆಸರಿಗೆ ವಿಶ್ವ ದಾಖಲೆಯನ್ನು ಬರೆದುಕೊಂಡಿರುವ ಸಿಫ್¤ ಪದಕದ ಭರವಸೆ ಮೂಡಿಸಿದ್ದಾರೆ. ಶೂಟಿಂಗ್ ರೇಂಜ್‌ನಲ್ಲಿ ವಿಚಲಿತರಾಗದೇ ಸಂಪೂರ್ಣ ಗಮನ ಕೇಂದ್ರಿಕರಿಸುವ ಕಲೆ ಅವರಿಗೆ ಒಲಿದಿದೆ.
ಸಾಧನೆ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, ಬೆಳ್ಳಿ ನಿಖತ್ ಜರೀನ್
ವೇಗವಾಗಿ ಚಲಿಸುವ ಕಾಲುಗಳು, ಶಕ್ತಿಶಾಲಿ ಪಂಚ್‌ಗಳು ನಿಖತ್‌ಗೆ ಪದಕ ತಂದುಕೊಡಬಲ್ಲವು. ಇತ್ತೀಚಿಗೆ ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅನುಭವವಿದೆ.
ಸಾಧನೆ: 2 ಬಾರಿ ವಿಶ್ವ ಚಾಂಪಿಯನ್ ಆರ್ಚರಿ ತಂಡ
ಈ ಬಾರಿ ಸಂಪೂರ್ಣ ತಂಡದೊಂದಿಗೆ ಪ್ಯಾರಿಸ್ ಪ್ರವಾಸ ಕೈಗೊಂಡಿರುವ ಭಾರತ ಎಲ್ಲ 5 ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಬಿಲ್ಲಾಳುಗಳು ಇತ್ತೀಚಿಗೆ ಗುರಿ ಬೇಧಿಸುವಲ್ಲಿ ತೋರಿರುವ ಕೌಶಲ ಭಾರತಕ್ಕೆ ಪದಕದ ಭರವಸೆ ಮೂಡಿಸಿದೆ.
ಸಾಧನೆ: ಏಷ್ಯನ್ ಗೇಮ್ಸ್‌ನಲ್ಲಿ 6, ಕಾಮನ್‌ವೆಲ್ತ್‌ನಲ್ಲಿ 3 ಚಿನ್ನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕನ್ನಡಿಗರು
2024ರ ಒಲಿಂಪಿಕ್ಸ್‌ನಲ್ಲಿ 9 ಮಂದಿ ಕರ್ನಾಟಕದ ಕ್ರೀಡಾಪಟುಗಳು ಭಾಗಿಯಾಗುತ್ತಿದ್ದಾರೆ. ಭಾರತದಿಂದ ಭಾಗಿಯಾಗುತ್ತಿರುವ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳಿಬ್ಬರೂ ಸಹ ಕರ್ನಾಟಕದವರೇ ಆಗಿರುವುದು ವಿಶೇಷ. ಬೋಪಣ್ಣ ಹಿರಿಯ ಆ್ಯತ್ಲಿಟ್ ಆದರೆ, ಧಿನಿಧಿ ಕಿರಿಯ ಆ್ಯತ್ಲಿಟ್ ಆಗಿದ್ದಾರೆ. ಕರ್ನಾಟದಿಂದ ಭಾಗಿಯಾಗುತ್ತಿರುವ ಕ್ರೀಡಾಪಟುಗಳ ಮಾಹಿತಿ ಇಲ್ಲಿದೆ. ಅಶ್ವಿನಿ ಪೊನ್ನಪ್ಪ
ಬ್ಯಾಡ್ಮಿಂಟನ್ ಪಟು ಅಶ್ವಿನಿ ಪ್ಯಾರಿಸ್ ಒಲಿಂಪಿಕ್ಸ್ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೋ ಜತೆ ಆಡುತ್ತಿ ದ್ದಾರೆ. ಜ್ವಾಲಾ ಗುಟ್ಟಾ ಅವರ ಜತೆ ಸೇರಿ ಹಲವು ಪ್ರಶಸ್ತಿ ಗೆದ್ದಿದ್ದಾರೆ.
ಸಾಧನೆ: ಕಾಮನ್‌ವೆಲ್ತ್‌ನಲ್ಲಿ 2 ಚಿನ್ನ, 3 ಬೆಳ್ಳಿ, 1 ಕಂಚು
ಅದಿತಿ ಅಶೋಕ್
ಬೆಂಗಳೂರಿನವರಾದ ಅದಿತಿ ಅಶೋಕ್ ಗಾಲ್ಫ್ ಕ್ರೀಡೆಯಲ್ಲಿ ಇತ್ತೀಚೆಗೆ ಭಾರಿ ಛಾಪು ಮೂಡಿಸಿ ದ್ದಾರೆ. ಪ್ರಸ್ತುತ ಜಾಗತಿಕವಾಗಿ 39ನೇ ರ್‍ಯಾಂಕಲ್ಲಿ ರುವ ಅದಿತಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
ಸಾಧನೆ: ಏಷ್ಯನ್ ಗೇಮ್ಸ್ ಬೆಳ್ಳಿ ಧಿನಿಧಿ ದೇಸಿಂಗೂ
ಮೊದಲ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುತ್ತಿರುವ ಧಿನಿಧಿಗೆ ಕೇವಲ 14 ವರ್ಷ. ಬೆಂಗಳೂರಿನ ವರಾದ ಧಿನಿಧಿ ರಾಜ್ಯ ಈಜು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.
ಸಾಧನೆ: 200 ಮೀ. ರಾಷ್ಟ್ರೀಯ ದಾಖಲೆ ಎಂ.ಆರ್.ಪೂವಮ್ಮ
ಮಂಗಳೂರಿನವರಾದ ಮಚ್ಚೆಟ್ಟೀರ ರಾಜು ಪೂವಮ್ಮ ರಿಲೇ ಸ್ಪರ್ಧಿ ಯಾಗಿ ದ್ದಾರೆ. ಈ ಬಾರಿ 400 ಮೀ. ರಿಲೇ ಭಾರತ ತಂಡದೊಂದಗೆ ಎಂ.ಆರ್.ಪೂವಮ್ಮ ಭಾಗಿಯಾಗುತ್ತಿದ್ದಾರೆ.
ಸಾಧನೆ: ಏಷ್ಯನ್ ಗೇಮ್ಸ್‌ನಲ್ಲಿ 3 ಚಿನ್ನ ಅರ್ಚನಾ ಕಾಮತ್
ಬೆಂಗಳೂರಿನವರಾದ ಅರ್ಚನಾ ಕಾಮತ್ ಟೇಬಲ್ ಟೆನಿಸ್ ಆಟಗಾರ್ತಿ ಯಾಗಿದ್ದಾರೆ. 2023ರ ನ್ಯಾಶನಲ್ ಗೇಮ್ಸ್‌ನಲ್ಲಿ ಇವರು ಉತ್ತಮ ಪ್ರದರ್ಶನ ತೋರಿದ್ದರು.
ಸಾಧನೆ: ನ್ಯಾಶನಲ್ ಗೇಮ್ಸ್ ಚಿನ್ನ ಶ್ರೀಹರಿ ನಟರಾಜ್
ಬೆಂಗಳೂರಿನವರಾದ ಶ್ರೀಹರಿ ನಟ ರಾಜ್ ಉತ್ತಮ ಈಜುಪಟು ವಾಗಿದ್ದು, ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟರಲ್ಲಿ ಭಾಗಿಯಾಗುತ್ತಿ ದ್ದಾರೆ.
ಸಾಧನೆ: ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ 4 ಚಿನ್ನ ರೋಹನ್ ಬೋಪಣ್ಣ
ಮಡಿಕೇರಿಯವರಾದ ರೋಹನ್ ಬೋಪಣ್ಣ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿ ದ್ದಾರೆ. ಶ್ರೀರಾಮ್ ಬಾಲಾಜಿ ಜತೆ ಸೇರಿ ಡಬಲ್ಸ್‌ನಲ್ಲಿ ಆಡುತ್ತಿದ್ದಾರೆ.
ಸಾಧನೆ: ಫ್ರೆಂಚ್ ಓಪನ್ ಚಾಂಪಿಯನ್ ನಿಶಾಂತ್ ದೇವ್
72 ಕೆ.ಜಿ. ವಿಭಾಗದಲ್ಲಿ ಭಾಗಿಯಾಗು ತ್ತಿರುವ ಬಾಕ್ಸರ್ ನಿಶಾಂತ್ ದೇವ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟ ಹಾಗೂ ವಿಶ್ವಚಾಂಪಿಯನ್‌ಶಿಪ್‌ಗ್ ಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ಸಾಧನೆ: ವಿಶ್ವ ಚಾಂಪಿಯನ್ ಕಂಚು ಮಿಜೋ ಚಾಕೋ
400 ಮೀ. ರಿಲೇಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿ ರುವ ಮಿಜೋ ಮಂಗಳೂರಿನ ಪಣಂಬೂರ್‌ನವರಾಗಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಸಾಧನೆ: ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ – ಮಾಹಿತಿ: ಗಣೇಶ್ ಪ್ರಸಾದ್