Advertisement
ಕ್ರಿ.ಪೂ. 776ರಲ್ಲೇ ಒಲಿಂಪಿಕ್ಸ್!ಒಲಿಂಪಿಕ್ಸ್ ಗೇಮ್ಸ್ ಹುಟ್ಟಿನ ಜಾಡು ಹಿಡಿದು ಹೊರಟರೆ ಬಹುಶಃ 3000 ವರ್ಷಗಳ ಹಿಂದಕ್ಕೆ, ಪ್ರಾಚೀನ ಗ್ರೀಕಿನ ಪೆಲೊಪೊನೀಸ್‌ಗೆ ಹೋಗಿ ನಿಲ್ಲುತ್ತೇವೆ ನಾವು. ಏಕೆಂದರೆ ಒಲಿಂಪಿಕ್ಸ್ ಹುಟ್ಟಿದ್ದು ಇಲ್ಲಿ ಎಂದು ಕೆಲವು ದಾಖಲೆಗಳು ಹೇಳುತ್ತವೆ. ಆರಂಭದಲ್ಲಿ ಒಲಿಂಪಿಯಾದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು.ಮುಂದೆ ಇದೇ ಒಲಿಂಪಿಕ್ಸ್ ಗೇಮ್ಸ್ ಆಯಿತು.
Related Articles
ಹಾಗೆ ನಿಲುಗಡೆಯಾಗಿದ್ದ ಸಾಂಪ್ರದಾಯಿಕ ಅಥ್ಲೆಟಿಕ್ಸ್ ಕ್ರೀಡಾಕೂಟ 1500 ವರ್ಷಗಳ ಬಳಿಕ ಮತ್ತೆ ಆರಂಭಿಸಲಾಯಿತು. 1894ಲ್ಲಿ ಫ್ರಾನ್ಸ್‌ನ ಪಿಯರೆ ಡಿ ಕ್ಯೂಬರ್ತಿನ್ ಎಂಬವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯನ್ನು ಹುಟ್ಟುಹಾಕಿದರು. ಹೀಗಾಗಿ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ 1896ರಲ್ಲಿ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ.
Advertisement
10 ಕ್ರೀಡೆಗಳು, 43 ಸ್ಪರ್ಧೆಗಳುಮೊದಲ ಒಲಿಂಪಿಕ್ಸ್‌ನಲ್ಲಿ ಟೆನಿಸ್, ಈಜು, ಶೂಟಿಂಗ್, ಮ್ಯಾರಥಾನ್, ಸೈಕ್ಲಿಂಗ್ (ವೈಯಕ್ತಿಕ ರೋಡ್ ರೇಸ್, ಟ್ರ್ಯಾಕ್), ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ವೇಟ್ ಲಿಫ್ಟಿಂಗ್, ಕುಸ್ತಿ, ಫೆನ್ಸಿಂಗ್ ಹೀಗೆ 10 ಕ್ರೀಡೆಗಳಲ್ಲಿ ಒಟ್ಟು 43 ಸ್ಪರ್ಧೆಗಳನ್ನು ನಡೆಸಲಾಗಿತ್ತು.
1896ರಲ್ಲಿ ಆಧುನಿಕ ಒಲಿಂಪಿಕ್ಸ್ ಆರಂಭವಾಯಿತಾದರೂ ಆಗ ಮಹಿಳೆಯರು ಸ್ಪರ್ಧಿಸಲು ಅವಕಾಶವಿರಲಿಲ್ಲ. ಆದರೆ 1900ರ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಒಲಿಂಪಿಕ್ಸ್ ಪ್ರವೇಶ ನೀಡಲಾಯಿತು. 5 ಬಾರಿ ವಿಂಬಲ್ಡನ್ ಗೆದ್ದಿರುವ
ಬ್ರಿಟನ್‌ನ ಮಾಜಿ ಟೆನಿಸ್ ತಾರೆ ಶಾರ್ಲೊಟ್ ಕೂಪರ್, ಒಲಿಂಪಿಕ್ಸ್‌ನ ಮೊದಲ ಮಹಿಳಾ ಚಾಂಪಿಯನ್. ಅಂದಿನ ಕೂಟದಲ್ಲಿ ಪಾಲ್ಗೊಂಡಿದ್ದ ಒಟ್ಟು 997 ಅಥ್ಲೀಟ್‌ಗಳಲ್ಲಿ ಕೇವಲ 22 ಮಂದಿ ಮಾತ್ರ ಮಹಿಳೆಯರಿದ್ದರು. 5 ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಿದ್ದರು. 11 ಚಿನ್ನ ಗೆದ್ದಿದ್ದ ಅಮೆರಿಕ
ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 14 ದೇಶಗಳಿಂದ ಒಟ್ಟಾರೆ 214 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ವಿಶೇಷವೆಂದರೆ ಇವರೆಲ್ಲಾ ಪುರುಷ ಅಥ್ಲೀಟ್‌ಗಳೇ. ಆರಂಭದಲ್ಲಿ ವಿನ್ನರ್‌ಗೆ ಬೆಳ್ಳಿ ಮತ್ತು ರನ್ನರ್‌ಗೆ ತಾಮ್ರದ ಪದಕ ನೀಡಲಾಗುತ್ತಿತ್ತು. ಆದರೆ ಒಲಿಂಪಿಕ್ಸ್ ಸಮಿತಿ, ಅಗ್ರ 3 ಸ್ಥಾನಗಳನ್ನು ಪರಿಗಣಿಸಿ ಪದಕಗಳನ್ನು ಚಿನ್ನ, ಬೆಳ್ಳಿ, ಕಂಚಿಗೆ ಬದಲಾಯಿಸಿತು. ಈ ಕೂಟದಲ್ಲಿ ಪಾಲ್ಗೊಂಡಿದ್ದ 14 ರಾಷ್ಟ್ರಗಳಲ್ಲಿ 10 ರಾಷ್ಟ್ರಗಳು ಪದಕ ಗೆದ್ದಿದ್ದವು. ಇವುಗಳಲ್ಲಿ ಅಮೆರಿಕ ಬರೋಬ್ಬರಿ 11 ಚಿನ್ನ ಗೆದ್ದು ಗರಿಷ್ಠ ಚಿನ್ನದ ಸಾಧನೆ ಮೆರೆದಿತ್ತು. ಇನ್ನುಳಿದಂತೆ 7 ಬೆಳ್ಳಿ, 2 ಕಂಚು ಅಮೆರಿಕ ಪಾಲಾಗಿತ್ತು. ಆದರೆ ಕೂಟದಲ್ಲಿ ಗರಿಷ್ಠ ಪದಕಗಳನ್ನು ಗೆದ್ದಿದ್ದು ಆತಿಥೇಯ ಗ್ರೀಸ್. 10 ಚಿನ್ನ, 18 ಬೆಳ್ಳಿ, 19 ಕಂಚಿನ ಪದಕಗಳು ಸೇರಿ ಅದು ಒಟ್ಟಾರೆ 47 ಪದಕಗಳನ್ನು ಬಾಚಿಕೊಂಡಿತ್ತು.
1896ರ ಏಪ್ರಿಲ್ 6-15ರ ವರೆಗೆ ನಡೆದಿದ್ದ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೆಲಿಯಾ, ಆಸ್ಟ್ರಿಯಾ, ಬಲ್ಗೇರಿಯಾ, ಚಿಲಿ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಬ್ರಿಟನ್-ಐರ್ಲೆಂಡ್, ಗ್ರೀಸ್, ಹಂಗೆರಿ, ಇಟಲಿ, ಸ್ವೀಡನ್, ಸ್ವಿಜರ್ಲೆಂಡ್, ಅಮೆರಿಕ ಹೀಗೆ ಒಟ್ಟು 14 ದೇಶಗಳು ಪಾಲ್ಗೊಂಡಿದ್ದವು. ಆಲಿವ್ ಎಲೆಯ ಕಿರೀಟವೇ ಪ್ರಶಸ್ತಿ
ಈ ದಿನಗಳ ಒಲಿಂಪಿಕ್ಸ್‌ನಂತೆ ಪ್ರಾಚೀನಾ ಒಲಿಂಪಿಕ್ಸ್ ದಿನಗಳಲ್ಲಿ ಚಿನ್ನ ಬೆಳ್ಳಿ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡುತ್ತಿರಲಿಲ್ಲ. ಆಗ ಒಬ್ಬರನ್ನಷ್ಟೇ ವಿಜೇತರೆಂದು ಪರಿಗಣಿಸಲಾಗುತ್ತಿತ್ತು. ಗೆದ್ದವರಿಗೆ ಶಾಂತಿಯ ಸಂಕೇತವಾಗಿ ಆಲಿವ್ ಎಲೆಯ ಕಿರೀಟ, ಲಾರೆಲ್ ಮಾಲೆ, ಪೈನ್ ಎಲೆ, ಕಾಡು ಸೆಲರಿ ಕಿರೀಟಗಳನ್ನು ನೀಡುತ್ತಿದ್ದರು.
ಮೊದಲ ಆಧುನಿಕ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಭಾರತ ಪಾಲ್ಗೊಂಡಿರಲಿಲ್ಲ. ಭಾರತ ಮೊದಲು ಪಾಲ್ಗೊಂಡಿದ್ದು 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ. ಅಂದು ನಾರ್ಮನ್ ಪಿಚರ್ಡ್ ಮೊದಲ ಬಾರಿಗೆ ಭಾರತವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ್ದರು. ಈ ವೇಳೆ 200 ಮೀ. ಓಟದಲ್ಲಿ ಪಿಚರ್ಡ್ ಗೆದ್ದ ಬೆಳ್ಳಿ ಪದಕ, ಭಾರತಕ್ಕೆ ಲಭಿಸಿದ ಚೊಚ್ಚಲ ಒಲಿಂಪಿಕ್ಸ್ ಪದಕವಾಗಿದೆ. ಪ್ರಾಚೀನ ಒಲಿಂಪಿಕ್ಸ್‌ನ ಸ್ಪರ್ಧೆಗಳು
ಪಂಕ್ರೇಶನ್ (ನಿರಾಯುಧ ಬಾಕ್ಸಿಂಗ್ ರೀತಿಯ ಸ್ಪರ್ಧೆ), ಪೆಂಟಾಥ್ಲಾನ್ (5 ಈವೆಂಟ್‌ಗಳನ್ನೊಳಗೊಂಡ ಸ್ಪರ್ಧೆ), ಕುದುರೆ
ಸವಾರಿ, ಓಟ, ಲಾಂಗ್ ಜಂಪ್, ಶಾಟ್‌ಪುಟ್, ಜಾವೆಲಿನ್, ಲಾಂಗ್‌ಜಂಪ್, ಬಾಕ್ಸಿಂಗ್ ಡಿಸ್ಕಸ್ ಥ್ರೋ, ಕುಸ್ತಿ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಆದರೆ ಆಗಿನ ಸ್ಪರ್ಧೆಗಳು ಕೊಂಚ ಭಿನ್ನವಾಗಿದ್ದವು. ಓಟದ ಸ್ಪರ್ಧೆಗಳು ಬರಿಗಾಲಿನಲ್ಲಿ ನಡೆಯುತ್ತಿದ್ದವು. ಜಿಗಿತದ ವೇಳೆ ಹೆಚ್ಚು ದೂರಕ್ಕೆ ಜಿಗಿಯಲು ಸ್ಪರ್ಧಿಗಳು ಕಲ್ಲುಗಳನ್ನು ಬಳಸುತ್ತಿದ್ದರು ಕಲ್ಲುಗಳನ್ನೇ ಡಿಸ್ಕಸ್ ಥ್ರೋನಲ್ಲಿ ಬಳಸಲಾಗುತ್ತಿತ್ತು.