Advertisement

Paris Games; ಟೋಕಿಯೊದಲ್ಲಿ ಕಣ್ಣೀರು-ಪ್ಯಾರಿಸ್ ನಲ್ಲಿ ಪದಕ ಮಾಲೆ; ಇದು ಮನು ಭಾಕರ್ ಯಶೋಗಾಥೆ

04:47 PM Jul 28, 2024 | Team Udayavani |

ಪ್ಯಾರಿಸ್: ಸಮ್ಮರ್ ಒಲಿಂಪಿಕ್ಸ್ ನ ವನಿತಾ ಶೂಟಿಂಗ್ ವಿಭಾಗದಲ್ಲಿ ಭಾರತದ ಪದಕದ ಬರ ಇಂದು ನೀಗಿದೆ. 22 ವರ್ಷದ ಭಾರತದ ಶೂಟರ್ ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್ ನ 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಗೆದ್ದು ಮಿಂಚಿದ್ದಾರೆ. ಈ ಮೂಲಕ 2024ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಿದೆ.

Advertisement

ಮನು ಭಾಕರ್ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾಕರ್ ಅವರು ಆರಂಭದಿಂದ ಅಂತ್ಯದವರೆಗೆ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡರು. ಅತ್ಯುತ್ತಮ ಕೌಶಲ್ಯ ಮತ್ತು ಹಿಡಿತವನ್ನು ತೋರಿಸಿದ ಭಾಕರ್ ಟಾಪ್ 3 ರಲ್ಲಿ ಮೂಡಿ ಬಂದರು.

ಅಂತಿಮ ಹೊಡೆತಕ್ಕೆ ಎರಡನೇ ಹೆಡ್ಡಿಂಗ್‌ನಲ್ಲಿ ಭಾಕರ್ 0.1 ಮುಂದಿದ್ದರು, ಆದರೆ ಅದರ ನಂತರ ಮೂರನೇ ಸ್ಥಾನಕ್ಕೆ ಜಾರಿದರು. ಭಾಕರ್ ಅವರು 221.7 ಅಂಕಗಳನ್ನು ಗಳಿಸಿದರು, ಅವರ ಅಂತಿಮ ಹೊಡೆತದಲ್ಲಿ 10.3 ಅನ್ನು ಹೊಡೆದರು, ಬೆಳ್ಳಿ ಪದಕ ವಿಜೇತ ಯೆಜಿ ಕಿಮ್ 10.5 ಗೆ ಹೊಡೆದಿದ್ದರಿಂದ ಭಾಕರ್ ಅಂತಿಮವಾಗಿ ಮೂರನೇ ಸ್ಥಾನ ಪಡೆದರು.

Advertisement

ಹರ್ಯಾಣದ ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್. ಒಟ್ಟಾರೆ ರಾಜ್ಯವರ್ಧನ್ ಸಿಂಗ್ ರಾಥೋಡ್ (2004), ಅಭಿನವ್ ಬಿಂದ್ರಾ (2008), ವಿಜಯ್ ಕುಮಾರ್ (2012) ಮತ್ತು ಗಗನ್ ನಾರಂಗ್ (2012) ನಂತರ ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದ ಭಾರತದಿಂದ ಐದನೇ ಶೂಟರ್ ಆಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಿಸ್ತೂಲ್ ಕೈಕೊಟ್ಟ ಕಾರಣದಿಂದ ಮನು ಭಾರಿ ನಿರಾಸೆ ಅನುಭವಿಸಿದ್ದರು. ಇದೀಗ ಪದಕ ಗೆದ್ದು ಮಿಂಚಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಟೋಕಿಯೊದ ನಂತರ ನಾನು ತುಂಬಾ ನಿರಾಶೆಗೊಂಡಿದ್ದೆ. ಅದರಿಂದ ಹೊರಬರಲು ನನಗೆ ಬಹಳ ಸಮಯ ಹಿಡಿಯಿತು. ಇಂದು ನಾನು ಎಷ್ಟು ಸಂತಸಗೊಂಡಿದ್ದೇನೆ ಎಂದು ನಾನು ವಿವರಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next