Advertisement

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

08:00 AM Sep 08, 2024 | Team Udayavani |

ಪ್ಯಾರಿಸ್:‌ ಇಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್‌ ನಲ್ಲಿ (Paris Paralympics) ಭಾರತದ ಪದಕ ಬೇಟೆ ಮುಂದುವರಿದಿದೆ. ಶನಿವಾರ ತಡರಾತ್ರಿ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ನವದೀಪ್‌ ಬಂಗಾರ ಗೆದ್ದರೆ, 200 ಮೀಟರ್‌ ಓಟದಲ್ಲಿ ಸಿಮ್ರನ್‌ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪ್ಯಾರಿಸ್‌ ಪ್ಯಾರಾಲಂಪಿಕ್ಸ್‌ ನಲ್ಲಿ ಭಾರತದ ವಿರೋಚಿತ ಯಾತ್ರೆ ಮುಂದುವರಿದಿದೆ.

Advertisement

ಪುರುಷರ ಜಾವೆಲಿನ್‌ ಎಫ್41‌ ವಿಭಾಗದಲ್ಲಿ ನವದೀಪ್‌ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಇದು ಈ ಬಾರಿಯ ಕೂಟದಲ್ಲಿ ಭಾರತಕ್ಕೆ ಒಲಿದ ಏಳನೇ ಬಂಗಾರವಾಗಿದೆ. ಫೈನಲ್‌ ನಲ್ಲಿ 47.32 ಮೀಟರ್‌ ಜಾವೆಲಿನ್‌ ಎಸೆದ ನವದೀಪ್‌ ತನ್ನ ಮೊದಲು ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಆದರೆ ಮೊದಲ ಸ್ಥಾನ ಪಡೆದಿದ್ದ ಇರಾನ್‌ ನ ಸಡೆಗ್ ಬೀಟ್ ಸಯಾಹ್ ಅವರು ಗೆದ್ದ ಸಂಭ್ರಮದಲ್ಲಿ ಐಸಿಸ್‌ ಸಂಘಟನೆಯ ಧ್ವಜ ಪ್ರದರ್ಶಿಸಿದ ಕಾರಣದಿಂದ ಅವರನ್ನು ಅನರ್ಹ ಮಾಡಲಾಯಿತು. ಹೀಗಾಗಿ ಎರಡನೇ ಸ್ಥಾನ ಪಡೆದಿದ್ದ ನವದೀಪ್‌ ಅವರು ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

ಸಿಮ್ರನ್‌ ಗೆ ಕಂಚು

ದೃಷ್ಟಿ ವಿಕಲಚೇತನ ಓಟಗಾರ್ತಿ ಸಿಮ್ರಾನ್, ತನ್ನ ಗೈಡ್ ಅಭಯ್ ಸಿಂಗ್ ಜೊತೆಗೂಡಿ ಮಹಿಳೆಯರ 200 ಮೀ (T12) ಸ್ಪರ್ಧೆಯಲ್ಲಿ ತನ್ನ ವೈಯಕ್ತಿಕ ಅತ್ಯುತ್ತಮ 24.75 ಸೆಕೆಂಡ್‌ ಗಳಲ್ಲಿ ಓಡಿ ಕಂಚು ಗೆದ್ದರು.

Advertisement

16ನೇ ಸ್ಥಾನದಲ್ಲಿ ಭಾರತ

25 ಪದಕ ಗೆಲ್ಲುವ ಗುರಿಯೊಂದಿಗೆ ಪ್ಯಾರಿಸ್‌ ಗೆ ಬಂದಿದ್ದ ಭಾರತ ಈ ಬಾರಿ ಅಭೂತಪೂರ್ವ ಪ್ರದರ್ಶನ ನೀಡಿದೆ. ದಾಖಲೆಯ 7 ಬಂಗಾರ ಸೇರಿ ಒಟ್ಟು 29 ಪದಕಗಳೊಂದಿಗೆ ಭಾರತ ಸದ್ಯ ಪದಕ ಪಟ್ಟಿಯಲ್ಲಿ 16 ಸ್ಥಾನದಲ್ಲಿದೆ. ಭಾರತವು 9 ಬೆಳ್ಳಿ ಮತ್ತು 13 ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next