Advertisement

Maui: ಪ್ರಣಯ ನಗರ ಎಂಬ ಖ್ಯಾತಿ ಇನ್ಮುಂದೆ ಪ್ಯಾರಿಸ್‌ ಬದಲು ಮಾವಿ ಪಾಲು

11:15 PM Sep 10, 2024 | Team Udayavani |

ನವದೆಹಲಿ: ವಿಶ್ವದ ಅತ್ಯಂತ ರೊಮ್ಯಾಂಟಿಕ್‌ ನಗರವಾಗಿ “ಪ್ರಣಯದೂರು’ ಎಂಬ ಪ್ಯಾರಿಸ್‌ನ ಪಟ್ಟವನ್ನು ಹವಾಯಿಯ ಮಾವಿ ದ್ವೀಪವು ತನ್ನದಾಗಿಸಿಕೊಂಡಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

Advertisement

ವಿಶ್ವದ ಪ್ರಮುಖ ರೊಮ್ಯಾಂಟಿಕ್‌ ಪ್ರವಾಸಿ ತಾಣಗಳ ಕುರಿತ ಫ‌ುಂಜೆಟ್‌ ವೆಕೇಶನ್ಸ್‌ ಸಹಯೋಗದೊಂದಿಗೆ ಟಾಕರ್‌ ರಿಸರ್ಚ್‌ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 2000 ಅಮೆರಿಕದವರ ಪೈಕಿ 34 ಪ್ರತಿಶತ ಜನ ಮಾವಿ ದ್ವೀಪವನ್ನು ತಮ್ಮ ನೆಚ್ಚಿನ ರೊಮ್ಯಾಂಟಿಕ್‌ ತಾಣವೆಂದು ತಿಳಿಸಿದ್ದಾರೆ.

ಈ ಸಮೀಕ್ಷೆಯಲ್ಲಿ ಕೊಂಚ ಹಿಂದೆ ಬಿದ್ದಿರುವ ಪ್ಯಾರಿಸ್‌ 33 ಪ್ರತಿಶತ ಜನರ ಮನ ಕದ್ದಿರುವುದಾಗಿ ಸಮೀಕ್ಷೆ ತಿಳಿಸಿದೆ. ಹವಾಯಿಯ ಎರಡನೇ ದೊಡ್ಡ ದ್ವೀಪವಾದ ಮಾವಿ, ಸುಂದರ ಸಮುದ್ರ ತೀರಗಳು, ಬಿದಿರು ಉದ್ಯಾನ ಮತ್ತು ಸುಂದರ ಸೂರ್ಯಾಸ್ತಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.