Advertisement

Paris ; ಬಾಂಬ್ ಬೆದರಿಕೆಯ ನಂತರ ಐಫೆಲ್ ಟವರ್ ಪ್ರವೇಶಕ್ಕೆ ತಡೆ

08:28 PM Aug 12, 2023 | Team Udayavani |

ಪ್ಯಾರಿಸ್ : ಬಾಂಬ್ ಬೆದರಿಕೆ ಬಂದ ನಂತರ ಮುಂಜಾಗ್ರತಾ ಕ್ರಮವಾಗಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಗೆ ಶನಿವಾರ ಸಾರ್ವಜನಿಕರ ಪ್ರವೇಶ ಕ್ಕೆ ಸುಮಾರು ಎರಡು ಗಂಟೆಗಳ ಕಾಲ ತಡೆ ಹಾಕಲಾಗಿತ್ತು.

Advertisement

ಬಾಂಬ್ ಬೆದರಿಕೆಯ ಕಾರಣದಿಂದ ಅಧಿಕಾರಿಗಳು ಐಫೆಲ್‌ ಟವರ್ ಬಳಿ ಇದ್ದ ಜನರನ್ನು ಸ್ಥಳಾಂತರಿಸಿದ್ದು, ಸುಮಾರು ಎರಡು ಗಂಟೆಗಳ ನಂತರ ಸಂದರ್ಶಕರನ್ನು ಹಿಂತಿರುಗಲು ಅನುಮತಿಸಲಾಗಿದೆ ಎಂದು ಫ್ರೆಂಚ್ ಪೊಲೀಸ್ ಮೂಲಗಳು ತಿಳಿಸಿವೆ.

“ಇದು ಸುಳ್ಳು ಬೆದರಿಕೆ, ಜನರು ಒಳಗೆ ಹೋಗಬಹುದು” ಎಂದು ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next