Advertisement

ವರ್ಷಾಚರಣೆ ವೇಳೆ ಪ್ಯಾರಿಸ್‌ ಮೇಲೆ ದಾಳಿ: ಐಸಿಸ್‌ ಬೆದರಿಕೆ

10:50 AM Dec 09, 2017 | Team Udayavani |

ಪ್ಯಾರಿಸ್‌: ಇದೇ ತಿಂಗಳ ಕೊನೆಯ ದಿನ ನಡೆಯಲಿರುವ ಹೊಸ ವರ್ಷ ಸಂಭ್ರಮಾಚರಣೆ ಪ್ಯಾರಿಸ್‌ ಪಾಲಿಗೆ ಭೀತಿಯ ನೆರಳಾಗಿ ಮಾರ್ಪಟ್ಟಿದೆ. ಕುಖ್ಯಾತ ಉಗ್ರ ಸಂಘಟನೆಯಾದ ಐಸಿಸ್‌, ಪ್ಯಾರಿಸ್‌ನಲ್ಲಿ ನಡೆಯಲಿರುವ ನೂತನ ವರ್ಷಾಚರಣೆ ವೇಳೆ ದಾಳಿ ನಡೆಸುವುದಾಗಿ ಹೇಳಿದ್ದು, ಅಂದು ನಡೆಯುವ ಎಲ್ಲಾ ಸಂ ಭ್ರಮ ಸಮಾರಂಭಗಳನ್ನು ನರಕದ ಕೂಪವಾಗಿಸುವುದಾಗಿ ಎಚ್ಚರಿಸಿದೆ. ಪ್ಯಾರಿಸ್‌ ನಗರದ ಆರ್ಕ್‌ ಡಿ ಟ್ರಯಂಫ್ ಕಟ್ಟಡಕ್ಕೆ ಈ ಎಚ್ಚರಿಕೆ ಯುಳ್ಳ ಪೋಸ್ಟರ್‌ ಅಂಟಿಸಲಾಗಿದೆ. ಇತ್ತೀಚೆಗೆ, ನ್ಯೂಯಾರ್ಕ್‌ ನಗರದ ಲ್ಲೂ ಇಂಥದ್ದೇ ಪೋಸ್ಟರ್‌ ಪತ್ತೆ ಯಾಗಿ, ಅದರಲ್ಲಿ ಈ ಬಾರಿಯ ಕ್ರಿಸ್‌ಮಸ್‌ ದಿನ ನ್ಯೂಯಾರ್ಕ್‌ ನಗರದ ಮೇಲೆ ದಾಳಿ ನಡೆಸುವು ದಾಗಿ ಬೆದರಿಕೆ ಹಾಕಲಾಗಿತ್ತು.

Advertisement

ಗಡಿಯಲ್ಲಿ ಹೈ ಅಲರ್ಟ್‌: ಇದೇ ವೇಳೆ, ರಾಜ ಸ್ಥಾನದ ಜೈಸಲ್ಮೇರ್‌ ಬಳಿ ಬರುವ ಭಾರತ-ಪಾಕಿಸ್ಥಾನ ಗಡಿ ಭಾಗದ ನೆದಾಯ್‌ ಎಂಬ ಹಳ್ಳಿಯ ರೈತನೊಬ್ಬನ ಹೊಲದಲ್ಲಿ ಕ್ವಾಡ್‌ ಕಾಪ್ಟರ್‌ ಪತ್ತೆಯಾಗಿದೆ. ಇದು ಪಾಕ್‌ ಕಡೆಯಿಂದ ಬಂದಿ ರುವ ಸಾಧ್ಯತೆಗಳಿರುವುದರಿಂದ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next