Advertisement

ಅಂಬೇಡ್ಕರ್‌ ಅನುಯಾಯಿಗಳಾಗಿ: ಕಲ್ಬುರ್ಗಿ

04:32 PM Dec 08, 2020 | Suhan S |

ಬೀದರ: ಬುದ್ಧ ಮತ್ತು ಅಂಬೇಡ್ಕರ ಎಂದೂ ಪರಿಹಾರಕ್ಕಾಗಿ ಹೋರಾಟ ಮಾಡಿಲ್ಲ. ಹೊರತಾಗಿಪರಿವರ್ತನೆಗಾಗಿ ಹೋರಾಟ ಮಾಡಿದ್ದಾರೆ. ನಾವು ಬಾಬಾ ಸಾಹೇಬರ ಅಭಿಮಾನಿಗಳಾಗಬಾರದು, ಅವರ ಅನುಯಾಯಿಗಳಾದರೆ ಮಾತ್ರ ಮಾನಸಿಕ ಗುಲಾಮಿತನದಿಂದ ಹೊರ ಬರಲು ಸಾಧ್ಯ ಎಂದುಪ್ರಗತಿಪರ ಚಿಂತಕ ವಿಠಲ್‌ ವಗ್ಗನ್‌ ಕಲುºರ್ಗಿ ಕರೆ ನೀಡಿದರು.

Advertisement

ನಗರದಲ್ಲಿ ಡಾ| ಅಂಬೇಡ್ಕರರ 64ನೇ ಪರಿನಿರ್ವಾಣ ದಿನ ಆಯೋಜನಾ ಸಮಿತಿ ಹಮ್ಮಿಕೊಂಡಿದ್ದ ಸ್ವಯಂ ಪ್ರಕಾಶಿತರಾಗುವ ಕಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಧ ವಿಶ್ವಾಸ ತೊರೆಯಬೇಕು.ಎಲ್ಲರೂ ಮೈತ್ರಿ ಭಾವದಿಂದ ಬದುಕಿದಾಗ ಮಾತ್ರ ಭಾರತ ಪ್ರಬುದ್ಧ ದೇಶವಾಗಲು ಸಾಧ್ಯ ಎಂದು ವಿವರಿಸಿದರು.

ಮಹಾತ್ಮರ ಭಾವಚಿತ್ರಗಳನ್ನು ಕೇವಲ ಮನೆಗಳಲ್ಲಿ ಇಟ್ಟು ಪೂಜಿಸಿದರೆ ಸಾಲದು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಯಲ್ಲಿ ತಂದು, ಇನ್ನೊಬ್ಬರಿಗೆ ತಿಳಿ ಹೇಳಿದಾಗ ಮಾತ್ರ ಬೌದ್ಧಧರ್ಮ ಬೆಳೆಯಲು ಸಾಧ್ಯ. ಈಗಿನ ಬಹುತೇಕ ಜನರು ಬಾಬಾ ಸಾಹೇಬರ ಭಾವಚಿತ್ರಗಳು ಹಾಗೂ ಪ್ರತಿಮೆಗಳನ್ನು ಇಟ್ಟು ಪೂಜೆ ಮಾಡುವುದಕ್ಕಷ್ಟೇ ಸೀಮಿತ ರಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.2016ರಿಂದ ವಿಶ್ವಸಂಸ್ಥೆಯಡಿಯ 193 ರಾಷ್ಟ್ರಗಳು ಅಂಬೇಡ್ಕರ ಅವರ ಜನ್ಮದಿನ ಆಚರಣೆ ಮಾಡುತ್ತಿವೆ. ಪ್ರಪಂಚದಲ್ಲಿ ಯಾವ ಫಿಲಾಸಫಿಯನ್ನು ಓದದ ಚೀನಾ ದೇಶ ತನ್ನ ವಿಶ್ವವಿದ್ಯಾಲಯಗಳಲ್ಲಿ ಬಾಬಾಸಾಹೇಬರ ಬರೆಹಗಳ ಕುರಿತು ಅಧ್ಯಯನ ನಡೆಸಿದೆ. ಬಾಬಾ ಸಾಹೇಬರು ಪ್ರತಿಮೆಗಳಲ್ಲಿ ಇಲ್ಲ. ಪ್ರತಿಮೆಗಳು ಸ್ವಾಭಿಮಾನದ ಸಂಕೇತವಷ್ಟೇ. ಬಾಬಾ ಸಾಹೇಬರ ಪುಸ್ತಕಗಳನ್ನು ಓದಿ ಅವರ ವಿಚಾರಗಳು ಮೈಗೂಡಿಸಿಕೊಂಡು ಆಚರಣೆಯಲ್ಲಿ ತರಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ವಿಠಲದಾಸ ಪ್ಯಾಗೆ ಮಾತನಾಡಿ, ಅಂಬೇಡ್ಕರ ಬಗ್ಗೆ ನಾವು ಭಾವುಕರಾಗದೇಅವರ ವಿಚಾರಗಳನ್ನು ಮೈಗೂಡಿಸಿಕೊಂಡುಆಚರಿಸಬೇಕೆಂದು ಹೇಳಿದರು.ಕಲಬುರಗಿಯ ಯುವ ಚಿಂತಕ ಅನಿಲಕುಮಾರ ಟೇಂಗಳಿ ಮಾತನಾಡಿದರು. ಆಣದೂರನ ಭಂತೆಧಮ್ಮಾನಂದ ಥೇರೋ ನೇತೃತ್ವದ ಭಿಕ್ಕು ಸಂಘ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಸೂರ್ಯಕಾಂತನಾಗಮಾರಪಳ್ಳಿ, ಪ್ರದೀಪ ನಾಟೇಕರ್‌, ಸೂರ್ಯಕಾಂತ ಸಾದೂರೆ, ವಿನೋದ ರತ್ನಾಕರ್‌, ಸಂತೋಷ ಭೂರೆ, ವಿಜಯ ರಾಮಬಾಣ್‌, ಶ್ರೀಧರಸೋಮನೂರ, ಕಿಶೋರ ನವಲಸಪುರ, ರಾಜರತನಶಿಂಧೆ, ಅಮರ ಸಾಗರ, ಪವನ್‌ ಮಿಠಾರೆ, ಗೌತಮ ಮುತ್ತಂಗಿಕರ್‌, ಶಿವಕುಮಾರ ಗೂನಳ್ಳಿಕರ್‌, ಶಾರದಾ ಆಳಂದಕರ್‌, ಉಷಾ ಬನಸೂಡೆ ಹಾಗೂ ಇಂದುಮತಿ ಸಾಗರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next