Advertisement

ನಗರದಲ್ಲಿ ಪರೀಕ್ಷಾ ಪೇ ಚರ್ಚಾ ವೀಕ್ಷಣೆ

03:13 PM Apr 02, 2022 | Team Udayavani |

ಬೆಳಗಾವಿ: ಪರೀಕ್ಷಾ ಪೇ ಚರ್ಚಾ ಕಾಯಕ್ರಮದ 5ನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ 1000 ಶಾಲಾ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

Advertisement

ನಗರದ ಜಿಲ್ಲಾ ಕೇಂದ್ರದಲ್ಲಿ ಕೆ.ಎಲ್‌. ಎಸ್‌. ಶಾಲೆ ಆಡಿಟೋರಿಯಂದಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಡಿಡಿಪಿಐ ಬಸವರಾಜ ನಲತವಾಡ, ಜಿಲ್ಲಾ ಉಪ ಸಮನ್ವಯಾಧಿಕಾರಿ ಬಿ.ಎಚ್‌. ಮಿಲ್ಲಾನಟ್ಟಿ, ನಗರ ಬಿಇಒ ವೈ.ಜೆ. ಭಜಂತ್ರಿ ಮತ್ತು ಮೇದಾರ, ನಾವಗೇಕರ, ಶಾಲೆಯ ಶಿಕ್ಷಕರು ಹಾಗೂ ಸುಮಾರು 450 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲೆಯಾದ್ಯಂತ 1557 ಶಾಲೆಗಳ ಸುಮಾರು 142380 ವಿದ್ಯಾರ್ಥಿಗಳು ವಿವಿಧ ಮಾಧ್ಯಮಗಳಾದ ಟಿ.ವಿ., ಕಂಪ್ಯೂಟರ್‌, ಮೊಬೈಲ್‌, ಸ್ಮಾರ್ಟ್‌ ಕ್ಲಾಸ್‌ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

ಸಂವಾದದಲ್ಲಿ ನೇರವಾಗಿ ಭಾಗವಹಿಸಲು ಬೆಳಗಾವಿ ಜಿಲ್ಲೆಯಿಂದ ವಿದ್ಯಾರ್ಥಿಗಳಾದ ಶ್ರೇಯಸ ಮಾರ್ಗನಕೊಪ್ಪ ಹಾಗೂ ಜಾಹ್ನವಿ ದ್ವಿಬೇದಿ ಆಯ್ಕೆಯಾಗಿದ್ದರು. ಈ ವಿದ್ಯಾರ್ಥಿಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾಗಿದ್ದು, ವಿಶೇಷ ಪ್ರಶಸ್ತಿ ಪತ್ರ ಹಾಗೂ ಪರೀಕ್ಷಾ ಪೇ ಚರ್ಚಾ ಕಿಟ್‌ನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next