Advertisement

ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆ ಅಧ್ಯಕ್ಷರಾಗಿ ಬಾಲಿವುಡ್ ನಟ ಪರೇಶ್ ರಾವಲ್ ನೇಮಕ

06:56 PM Sep 10, 2020 | Nagendra Trasi |

ನವದೆಹಲಿ: ಎನ್ ಎಸ್ ಡಿ ಎಂದೇ ಹೆಸರಾಗಿದ್ದ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರನ್ನಾಗಿ ಬಾಲಿವುಡ್ ನಟ, ಬಿಜೆಪಿ ಮಾಜಿ ಸಂಸದ ಪರೇಶ್ ರಾವಲ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂಡ್ ಅವರು ನೇಮಕ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಎನ್ ಎಸ್ ಡಿಗೆ ಪರೇಶ್ ರಾವಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಖಚಿತಪಡಿಸಿದ್ದು, ನೂತನ ಅಧಿಕಾರ ಸ್ವೀಕರಿಸಿರುವ ಪರೇಶ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ. ಅಲ್ಲದೇ ಪ್ರತಿಭಾವಂತ ನಟನ ಪ್ರತಿಭೆ ಲಾಭ ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ದೊರೆಯಲಿ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ನಾಟಕ ಶಾಲೆ ಸ್ವಾಯತ್ತತೆ ಸಂಸ್ಥೆಯಾಗಿದ್ದು, ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ 1959ರಲ್ಲಿ ಸ್ಥಾಪಿಸಲಾಗಿದ್ದು, ಇದೊಂದು ರಂಗ ತರಬೇತಿ ಸಂಸ್ಥೆಯಾಗಿದೆ. ಎನ್ ಎಸ್ ಡಿ ನಾಲ್ವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದ್ದರು ಕೂಡಾ ಯಾರು ಎಂಬ ಬಗ್ಗೆ ಹೆಸರನ್ನು ಬಹಿರಂಗಗೊಳಿಸಿರಲಿಲ್ಲವಾಗಿತ್ತು. ರಾಷ್ಟ್ರಪತಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಈ ನಿಟ್ಟಿನಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಪರೇಶ್ ರಾವಲ್ ಎನ್ ಎಸ್ ಡಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ತೀವ್ರ ಅನಾರೋಗ್ಯದಿಂದ ಜನಪ್ರಿಯ ಹಾಸ್ಯನಟ ವಡಿವೇಲ್ ಬಾಲಾಜಿ ನಿಧನ

2017ರಿಂದಲೂ ಎನ್ ಎಸ್ ಡಿಯ ಅಧ್ಯಕ್ಷ ಹುದ್ದೆ ಖಾಲಿಯಾಗಿತ್ತು. ಉಪಾಧ್ಯಕ್ಷರಾಗಿದ್ದ ರಾಜಸ್ಥಾನಿ ಕವಿ, ರಂಗಭೂಮಿ ನಿರ್ದೇಶಕ, ಚಿಂತಕ ಡಾ.ಅರ್ಜುನ್ ದೇವೊ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.

Advertisement

ಪರೇಶ್ ರಾವಲ್ ಅವರು ಬಾಲಿವುಡ್ ನ ಚಿರಪರಿಚಿತ ಹಾಗೂ ಪ್ರಸಿದ್ಧ ನಟರಾಗಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಸಿನಿಮಾ ರಂಗದಲ್ಲಿದ್ದು, ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 2014ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ಬಾಲಿವುಡ್ ನ ಹೀರಾ ಫೇರಿ ಮತ್ತು ಅಂದಾಝ್ ಅಪ್ನಾ ಅಪ್ನಾ ಸಿನಿಮಾಗಳು ಪರೇಶ್ ರಾವಲ್ ಗೆ ಜನಪ್ರಿಯತೆ ತಂದುಕೊಟ್ಟಿದ್ದವು.

ಇದನ್ನೂ ಓದಿ: ಮಜೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಬೊಳ್ಳಿ

ಪರೇಶ್ ರಾವಲ್ 2014ರಲ್ಲಿ ಅಹಮ್ಮದಾಬಾದ್ ಲೋಕಸಭಾ ಚುನಾವಣೆಯಲ್ಲಿ ಸುಮಾರು 3.25 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next