ಸೈದಾಪುರ: ಮಗುವಿಗೆ ಸಂಸ್ಕಾರ ಕೊಟ್ಟರೆ ಉತ್ತಮ ನಾಗರಿಕನಾಗುತ್ತಾನೆ. ಆ ವಿವಿಧ ಶಕ್ತಿ ಗುರುಗಳಲ್ಲಿ ಇರುತ್ತದೆ ಎಂದು ಮಾನವಿ ಕಲ್ಮಠದ ವೀರೂಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮೀಜಿ ಹೇಳಿದರು. ಇಲ್ಲಿನ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ 1987-88ನೇ ಸಾಲಿನ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಗುರುವಂದನೆ, ಸ್ನೇಹ ಸಮ್ಮೇಳನ ಹಾಗೂ ಶೈಕ್ಷಣಿಕ ಚಿಂತನೆ ಮತ್ತು ದೇಣಿಗೆ ಅರ್ಪಿಸುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬದುಕಿನಲ್ಲಿ ಸುಖ ದುಃಖ ಎರಡು ದಡಗಳಿರುತ್ತವೆ. ಈ ಎರುಪೇರುಗಳನ್ನು ದೂರ ಮಾಡಿ ಜೀವನ ರೂಪಿಸಿಕೊಳ್ಳುವ ತಾಕತ್ತು ನಮ್ಮಲ್ಲಿದೆ. ಈ ದಿಸೆಯಲ್ಲಿ ನಾವು ಪ್ರಯತ್ನ ಮಾಡಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಕಲಬುರುಗಿ ಕೆಎಸ್‌ಆರ್‌ಪಿ, ಡಿವೈಎಸ್‌ಪಿ ಗುರುನಾಥ ಮಾತನಾಡಿ, ತಂದೆ ತಾಯಿರಂತೆ ಗುರವಿಗೂ ಪ್ರಮುಖ ಸ್ಥಾನ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ ಮಾತನಾಡಿ, ಯುವ ಜನಾಂಗ ದಾರಿ ತಪ್ಪುತ್ತಿದೆ. ಅವರಿಗೆ ಮಾರ್ಗದರ್ಶನ ಮಾಡುವ ಕೆಲಸವಾಗಬೇಕು. ಶಿಕ್ಷಣದ ಮೂಲಕ ವಿದ್ಯೆಯೊಂದಿಗೆ ಗುಣವಂತ ಆರೋಗ್ಯವಂತ ಉತ್ತಮ ನಾಗರಿಕರನ್ನಾಗಿ ಮಾಡುವ ಪ್ರಯುತ್ನ ನಾವು ಮಾಡಬೇಕು ಎಂದು ಹೇಳಿದರು.
1987-88ನೇ ಸಾಲಿನ ವಿದ್ಯಾರ್ಥಿಗಳಾದ ಶರಣಗೌಡ ಶೆಟ್ಟಿಹಳ್ಳಿ, ಸೀತಮ್ಮ, ವೆಂಕಟೇಶ ಜೋಶಿ, ಪದ್ಮಾವತಿ, ರಮೇಶ ಕುಲಕರ್ಣಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದಕ್ಕೂ ಮುಂಚೆ ನಿವೃತ್ತಿ ಹೊಂದಿದ ವೀರಣ್ಣ ಸಾಹು, ಬಿ.ಬಿ. ಹೆಬ್ಟಾಳೆ, ವೆಂಕಟಣ್ಣ ಅಲೆಮನಿ, ಶರಣಪ್ಪ ಸಾತನೂರಕರ ಸೇರಿದಂತೆ ಸೇವೆ ಸಲ್ಲಿಸಿದ ಇನ್ನೂಳಿದ ಕುಟಂಬ ವರ್ಗಕ್ಕೆ ಗುರವಂದನಾ ಗೌರವ ಸಮರ್ಪಣೆ ಅಂಗವಾಗಿ ವಿಶೇಷ ಸನ್ಮಾನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಸಾಹೇಬಗೌಡ ಬಿರದಾರ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, 1987-88ನೇ ಸಾಲಿನ ವಿದ್ಯಾರ್ಥಿಗಳ ಪದಾಧಿಕಾರಗಳಾದ ನಿರಂಜನರಡ್ಡಿಗೌಡ ಶೆಟ್ಟಹಳ್ಳಿ, ಮಲ್ಲಣ್ಣಗೌಡ ಮುನಾಗಾಲ, ಚಂದ್ರಯ್ಯಗೌಡ, ಮಹಿಳಾ ಪ್ರತಿನಿಧಿ ಸೀತಮ್ಮ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, 1987-88ನೇ ಸಾಲಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು. ಅರ್ಚನಾ ಪ್ರಾರ್ಥಾನಾ ಗೀತೆ ಹಾಡಿದಳು. ಶಾಂತಗೌಡ ಬಾಡಿಯಾಲ ಸ್ವಾಗತಿಸಿದರು. ಮಲ್ಲಕಾರ್ಜುನ ಗುಡೆಬಲ್ಲೂರು ನಿರೂಪಿಸಿದರು.
ಗುರುಗಳ ಜೊತೆಗೆ ವಿದ್ಯಾರ್ಥಿಗಳ ಪ್ರಯತ್ನವೂ ಅತೀ ಮುಖ್ಯವಾಗಿದೆ. ಕೆಲವು ಸಂದರ್ಭಗಳು ನಮ್ಮ ವೈಪಲ್ಯಕ್ಕೆ ಕಾರಣ ಆಗುತ್ತವೆ. ಆದರೂ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಿದೆ. ನೀವು ಕಲಿತ ಗುರುಗಳಿಗೆ ಮಾಡಿರುವ ಸನ್ಮಾನ ದೇಶದ ಎಲ್ಲಾ ಪ್ರಶಸ್ತಿಗಳಿಗಿಂತ ದೊಡ್ಡದಾಗಿರುವುದೆ ಇದಕ್ಕೆ
ಉದಾಹರಣೆಯಾಗಿದೆ.
ನಿವೃತ್ತ ಹಿರಿಯ ಶಿಕ್ಷಕ, ವೆಂಕಣ್ಣ ಅಲೆಮನಿ