Advertisement
ಇಂಡಿಯಾ ವೈಡ್ ಪಾಲಕರ ಸಂಘದ ಅಧ್ಯಕ್ಷ, ನ್ಯಾಯವಾದಿ ಅನುಭಾ ಸಹೈ ಮಾತನಾಡಿ, ಶಾಲೆಗಳು ಶಿಕ್ಷಣದ ಹಕ್ಕುಗಳ (ಆರ್‌ಟಿಇ) ನಿಯಮಗಳನ್ನು ಉಲ್ಲಂಘಿಸಿದ್ದು, ಹೆತ್ತವರು ಎದುರಿಸುತ್ತಿರುವ ಸಮಸ್ಯೆಗಳನ್ನು ಶಿಕ್ಷಣ ಇಲಾಖೆ ಗಮನಿಸಬೇಕು. ನಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಬಯಸುತ್ತೇವೆ. ಅನೇಕ ಹೆತ್ತವರು ವೇತನ ಕಡಿತ ಮತ್ತು ಉದ್ಯೋಗ ಕಳೆದುಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಪಡೆಯುತ್ತಿಲ್ಲ. ಈ ಸಂದರ್ಭದಲ್ಲಿ ನಾವು ದೊಡ್ಡ ಪ್ರಮಾಣದ ಶುಲ್ಕವನ್ನು ಪಾವತಿಸಬಹುದೆಂದು ಶಿಕ್ಷಣ ಸಂಸ್ಥೆಗಳು ಹೇಗೆ ನಿರೀಕ್ಷಿಸಲು ಸಾಧ್ಯ. ಬೋಧನ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯುವಂತೆ ಆಗ್ರಹಿಸಿದರು.
Related Articles
Advertisement
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆಗ್ರಹ :
ಸರಕಾರಿ ಶಾಲೆಗಳು ಉತ್ತಮ ವಾಗಿದ್ದರೆ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಅಗತ್ಯವಿಲ್ಲ ಎಂದು ಹೆತ್ತವರಾದ ಲಕ್ಷ್ಮೀ ಸಪRಲ್ ಹೇಳಿದರು. ನಾವು ಸರಕಾರಿ ಶಾಲೆಗಳಿಗೆ ಅಗತ್ಯವಾದ ಶುಲ್ಕವನ್ನು ನೀಡಲು ಸಿದ್ಧರಿದ್ದೇವೆ. ಅವರು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಬೇಕು. ಮಕ್ಕಳಿಗೆ ಕ್ರೀಡಾ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದಾಗಿ ಮಗುವಿನ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಮಕ್ಕಳಿಗೆ ಕಿರುಕುಳ ಸಲ್ಲದು :
ಶಾಲೆಯು ಗ್ರಂಥಾಲಯಗಳು ಮತ್ತು ಕ್ರೀಡೆಗಳಿಗೆ ಶುಲ್ಕ ವಿಧಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ಹೆತ್ತವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇಡೀ ವರ್ಷ ಶುಲ್ಕವನ್ನು ಪಾವತಿಸಲು ಆಗ್ರಹಿಸು ತ್ತಿದ್ದಾರೆ. ಇದಕ್ಕೆ ಒಪ್ಪದಿ ದ್ದಾಗ ಆನ್‌ಲೈನ್ ತರಗತಿಗಳ ಸಮಯದಲ್ಲಿ ನಮ್ಮ ಮಕ್ಕಳಿಗೆ ಕಿರುಕುಳ ನೀಡಲಾಗುತ್ತದೆ ಎಂದು ಹೆತ್ತವರು ಆರೋಪಿಸಿದರು.
ಕಠಿನ ಕ್ರಮ:ದಿನಕರ್ ತೆಮ್ಕರ್ :
ಪ್ರಾಥಮಿಕ ಶಿಕ್ಷಣದ ಜಂಟಿ ನಿರ್ದೇಶಕ ದಿನಕರ್ ತೆಮ್ಕರ್ ಮಾತನಾಡಿ, ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೆತ್ತವರಿಗೆ ಭರವಸೆ ನೀಡಲಾಗಿದೆ. ಪೂರ್ಣ ಶುಲ್ಕವನ್ನು ಪಾವತಿಸದ ಆಯ್ದ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣವನ್ನು ನಿಲ್ಲಿಸಿದ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಬೇಕು. ಸಾಂಕ್ರಾಮಿಕ ಸಮಯದಲ್ಲಿ ಖಾಸಗಿ ಶಾಲೆಗಳಿಂದ ತೆಗೆದುಹಾಕಲ್ಪಟ್ಟ ವಿದ್ಯಾರ್ಥಿಗಳನ್ನು ತತ್‌ಕ್ಷಣ ಶಾಲೆಗಳಿಗೆ ಸೇರಿಸಬೇಕು. ಶೀಘ್ರದಲ್ಲೇ ನಾವು ಸಾಮಾನ್ಯ ನೋಟಿಸ್‌ಗಳನ್ನು ನೀಡಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.