Advertisement

ಮಕ್ಕಳ ಶಿಕ್ಷಣಕ್ಕೆ ಪಾಲಕರು ಗಮನ ಕೊಡಲಿ

05:58 PM Feb 07, 2022 | Shwetha M |

ಹೂವಿನಹಿಪ್ಪರಗಿ: ಮಕ್ಕಳಿಗೆ ಆಸ್ತಿಗಳನ್ನು ಮಾಡುವ ವ್ಯಾಮೋಹ ಕೈಬಿಟ್ಟು ನಿಮ್ಮ ಮಕ್ಕಳನ್ನು ಆಸ್ತಿಯನ್ನಾಗಿ ರೂಪಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಜಿಲ್ಲಾ ಉಪನಿರ್ದೇಶಕ ರಾಮನಗೌಡ ಕನ್ನೊಳಿ ಹೇಳಿದರು.

Advertisement

ಬಸವನಬಾಗೇವಾಡಿ ತಾಲೂಕಿನ ಸೋಲವಾಡಗಿ ಗ್ರಾಮದ ಜಯಶ್ರೀ ಪ್ರಭಾಕರ ಪಿಎಸೈ ಆಗಿ ನೇಮಕವಾದ ಹಿನ್ನೆಲೆ ಗ್ರಾಮಸ್ಥರು ಹಮ್ಮಿಕೊಮಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನೂತನವಾಗಿ ಪಿಎಸೈ ಆಗಿ ನೇಮಕವಾದ ಜಯಶ್ರೀ ಪ್ರಭಾಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಾಲಕರು ಮಕ್ಕಳ ಶಿಕ್ಷಣ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಸರ್ಕಾರದ ನೌಕರಿ ನಿಮ್ಮ ಅಂಕಗಳ ಮೇಲೆ ಬರುತ್ತದೆ ಹೊರತು ಹಣದಿಂದ ಅಲ್ಲ ಎಂದರು.

ಪ್ರಭುಸ್ವಾಮಿ ಹಿರೇಮಠ, ಚಂದ್ರಕಾಂತ ಸಿಂಗೆ, ಶ್ರೀನಾಥ ಪೂಜಾರಿ, ಹುಯೋಗಿ ತಳ್ಳೋಳ್ಳಿ, ಗುರುರಾಜ ಗುಡಿಮನಿ ಮಾತನಾಡಿದರು. ವೀರಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಂಗನಬಸಯ್ಯ ಹಿರೇಮಠ, ರೇಣುಕಾ ಪೂಜಾರಿ, ಪುಂಡಲೀಕ ಮಾನವರ, ಚಿದಾನಂದ ಪ್ರಭಾಕರ ಇದ್ದರು. ಸಿದ್ದನಗೌಡ ಪಾಟೀಲ ನಿರೂಪಿಸಿದರು. ಗುರುರಾಜ ಗುಡಿಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next