Advertisement

Kolkata Doctor Case: ಪೊಲೀಸರಿಂದ ಪ್ರಕರಣ ಮುಚ್ಚಿ ಹಾಕಲು ಯತ್ನ… ಪೋಷಕರಿಂದ ಗಂಭೀರ ಆರೋಪ

11:09 AM Sep 05, 2024 | Team Udayavani |

ಕೋಲ್ಕತ್ತಾ: ಕಳೆದ ತಿಂಗಳು ಕೋಲ್ಕತ್ತಾದ ಆರ್‌ಜಿ ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕಳೆದಂತೆ ಹೆಚ್ಚಿನ ಕಾವು ಪಡೆಯುತ್ತಿದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಬಂಗಾಳದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದೇ ವೇಳೆ ಮಹಿಳಾ ವೈದ್ಯೆಯ ಕುಟುಂಬ ಕೋಲ್ಕತ್ತಾ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದೆ.

Advertisement

ಪೋಷಕರ ಆರೋಪದಂತೆ ಪೊಲೀಸರ ಕ್ರಮದ ಕುರಿತು ನಮಗೆ ಮೊದಲಿನಿಂದಲೇ ಅನುಮಾನವಿತ್ತು ಅಲ್ಲದೆ ಮಗಳ ಹತ್ಯೆ ನಡೆದ ಬಳಿಕ ಮಗಳ ಅಂತ್ಯಸಂಸ್ಕಾರವನ್ನು ಪೊಲೀಸರು ತರಾತುರಿಯಲ್ಲಿ ನಡೆಸಿದ್ದರು ಜೊತೆಗೆ ಪ್ರಕರಣ ಮುಚ್ಚಿ ಹಾಕಲು ಪೊಲೀಸರು ನಮಗೆ ಲಂಚ ನೀಡಲು ಯತ್ನಿಸಿದ್ದರು ಆದರೆ ನಾವು ಅದನ್ನು ನಿರಾಕರಿಸಿದ್ದೆವು ಎಂದು ಆರೋಪಿಸಿದ್ದಾರೆ.

‘‘ಪೊಲೀಸರು ಮೊದಲಿನಿಂದಲೂ ವಿಷಯವನ್ನು ಹತ್ತಿಕ್ಕಲು ಯತ್ನಿಸಿದರು. ಮಗಳ ಶವವನ್ನು ನೋಡಲು ಕೂಡ ನಮಗೆ ಅವಕಾಶ ನೀಡದೆ ಪೊಲೀಸ್ ಠಾಣೆಯಲ್ಲಿಯೇ ಕುಳಿತು ಪೋಸ್ಟ್‌ಮಾರ್ಟಂಗಾಗಿ ಕಾಯುವಂತೆ ಮಾಡಿದ್ದಾರೆ.

ನಮ್ಮ ಮಗಳಿಗೆ ನ್ಯಾಯ ಸಿಗಬೇಕು ಅದಕ್ಕಾಗಿ ಜೀವ ಇರುವವರೆಗೂ ಹೋರಾಡಲು ಸಿದ್ದ, ದೇಶಾದ್ಯಂತ ಪ್ರತಿಭಟನೆಗಳೂ ನಡೆಯುತ್ತಿವೆ ಇದರ ಹಿಂದೆ ಯಾರೆಲ್ಲಾ ಇದ್ದಾರೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇ ಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

Advertisement

ಆರೋಪಿ ಸಂಜಯ್ ರಾಯ್ ಗೆ ಸರ್ಕಾರಿ ಆಸ್ಪತ್ರೆಯ ಮೂಲೆ ಮೂಲೆಗೂ ಮುಕ್ತವಾಗಿ ತಿರುಗಾಡಲು ಹೇಗೆ ಅವಕಾಶ ನೀಡಲಾಯಿತು ಎಂಬ ಪ್ರಶ್ನೆಗಳು ಕೂಡ ಎದ್ದಿವೆ. ಅಷ್ಟುಮಾತ್ರವಲ್ಲದೆ ಆರೋಪಿಗಳು ಹಣಕ್ಕಾಗಿ ಅಕ್ರಮವಾಗಿ ರೋಗಿಗಳಿಗೆ ಆಸ್ಪತ್ರೆಯ ಬೆಡ್ ಮತ್ತು ಇತರ ಸೌಲಭ್ಯಗಳನ್ನು ನೀಡುತ್ತಿದ್ದರು ಎಂಬುದೂ ಕೆಲವು ವರದಿಗಳಲ್ಲಿ ಬೆಳಕಿಗೆ ಬಂದಿದೆ.

ಆಗಸ್ಟ್ ಎರಡನೇ ವಾರದಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿರುವುದು ಗಮನಾರ್ಹ. ಕಳೆದ ಸೋಮವಾರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಆಸ್ಪತ್ರೆಯಲ್ಲಿನ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿದೆ.

ಇದನ್ನೂ ಓದಿ: Narendra Modi: ಅಭಿವೃದ್ಧಿ ನೀತಿಗೆ ಬೆಂಬಲ, ವಿಸ್ತರಣ ವಾದಕ್ಕಲ್ಲ: ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.