ಬಜಗೋಳಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಇಲಾಖಾಧಿಕಾರಿಗಳ ಕಚೇರಿ ಕಾರ್ಕಳ ಇದರ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಮಿಶನ್-100 ಎಂಬ ವಿನೂತನ ಹಾಗೂ ಬಜಗೋಳಿ ವ್ಯಾಪ್ತಿಯ 8 ಸರಕಾರಿ ಹಾಗೂ 2 ಖಾಸಗಿ ಪ್ರೌಢಶಾಲೆಯ ಒಟ್ಟು 386 ವಿದ್ಯಾರ್ಥಿಗಳ, ಹೆತ್ತವರ ಪ್ರೇರಣಾ ಸಂಕಲ್ಪ ಸಮಾವೇಶ ಸಂಕಲ್ಪ ಎಂಬ ಕಾರ್ಯಕ್ರಮ ಬಜಗೋಳಿ ಗಣಪತಿ ಸಭಾಭವನ ದಿಡಿಂಬಿರಿ ಇಲ್ಲಿ ನಡೆಯಿತು.
ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗೆ ಬುದ್ದಿವಂತರ ಜಿಲ್ಲೆ ಎಂಬ ಹೆಸರಿದೆ. ಆದರೆ ಇತ್ತೀಚೆಗೆ ಶೈಕ್ಷಣಿಕವಾಗಿ ಹಿಂದಡಿ ಇಡುತ್ತಿದ್ದು ಬಹಳ ಬೇಸರದ ಸಂಗತಿ, ಕಾರ್ಕಳ ತಾಲೂಕಿನ ಯಾವುದೇ ವಿದ್ಯಾರ್ಥಿ ಅನುತ್ತಿರ್ಣರಾಗಬಾರದು ಈ ನಿಟ್ಟಿನಲ್ಲಿ ಹೆತ್ತವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಯಾಗಿ ಕೆಲಸ ಮಾಡಬೇಕು. ಈ ಮೂಲಕ ಸ್ವರ್ಣ ಕಾರ್ಕಳದ ಕನಸನ್ನು ಸಾಕಾರಗೊಳಿಸೋಣ ಎಂದವರು ತಿಳಿಸಿದರು.
ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ನಡುತುಂಡುಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್, ಸಹಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಎಸೆಸೆಲ್ಸಿ ನೋಡಲ್ ಅಧಿಕಾರಿ ವೆಂಕಟರಮಣ ಬೆಳೊಡು, ತಾಲೂಕು ಪ್ರೌಢಶಾಲಾ ಮುಖ್ಯೋಪಾ ಧ್ಯಾಯರ ಸಂಘದ ಅಧ್ಯಕ್ಷ ಪ್ರಕಾಶ್ ರಾವ್ ಇನ್ನ , ಮುಡಾರು ಗ್ರಾ.ಪಂ. ಅಧ್ಯಕ್ಷರಾದ ಗೀತಾ ಪಾಟ್ಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಎಲ್ಲ ಹೆತ್ತವರಿಗೂ ಸಂಕಲ್ಪವನ್ನು ಖುದ್ದಾಗಿ ಶಾಸಕರೇ ಬೋಧಿಸಿದರು.ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಗೂ ತಾ| ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಶ್ರೀಧರ್ ಆಚಾರ್ಯ, ತಾಲೂಕು ಸಹಶಿಕ್ಷಕ ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್ ಭಟ್, ನಲ್ಲೂರು ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಶೆಟ್ಟಿ, ಕೆರ್ವಾಶೆ ಗ್ರಾ. ಪಂ. ಅಧ್ಯಕ್ಷೆ ಪ್ರಮೀಳಾ, ಮಿಯಾರು ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವÌರಿ, ಮುಡಾರು ಗ್ರಾ. ಪಂ. ಸದಸ್ಯರಾದ ಸುರೇಶ್ ಶೆಟ್ಟಿ, ನಲ್ಲೂರು ಶಾಲೆಯ ಮುಖ್ಯೋಪಾಧ್ಯಾಯ ನಾಗೇಶ್, ಸಿಆರ್‌ಪಿ ಕೃಷ್ಣ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕರಾದ ಧನಂಜಯ ಕಾರ್ಯಕ್ರಮ ನಿರೂಪಿಸಿದರು. ಲಿಂಗನಗೌಡ ಪಾಟೀಲ್ ಸ್ವಾಗತಿಸಿ, ಸತೀಶ್ ಅಡಿಗ ವಂದಿಸಿದರು.