Advertisement

ಮೇನಾಲ: ಶಾಲೆಯಲ್ಲಿ ತುರ್ತು ಪೋಷಕರ ಸಭೆ; ವಿದ್ಯಾರ್ಥಿಯ ದುರ್ವರ್ತನೆ ಆಕ್ರೋಶ

05:02 PM Dec 11, 2023 | Team Udayavani |

ಈಶ್ವರ ಮಂಗಲ: ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ಓರ್ವರಿಂದ ಇಡೀ ಶಾಲೆಗೆ ತೊಂದರೆ , ದುರ್ವರ್ತನೆ ಬಗ್ಗೆ ಪೋಷಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇಲಾಖೆ ಯ ಮೇಲಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಮೇನಾಲ ಶಾಲೆಯಲ್ಲಿ ನಡೆದಿದೆ.

Advertisement

 ಒಬ್ಬ ವಿದ್ಯಾರ್ಥಿ ಯಿಂದ  122 ಮಕ್ಕಳಿಗೆ ತೊಂದರೆ:

ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 123 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 6ನೇ ತರಗತಿ ವಿದ್ಯಾರ್ಥಿ ಒಬ್ಬ  ಉಳಿದ ವಿದ್ಯಾರ್ಥಿಗಳಿಗೆ ಕೀಟಲೆ, ಉಪದ್ರ ,ಕಲ್ಲು ಬಿಸಾಡುವುದು, ನಿಷೇಧಿತ ವಸ್ತು ಸೇವನೆ ಮುಂತಾದ ದುರ್ವರ್ತನೆಯಿಂದ  ಉಳಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಹಲವು ಸಲ ಈ ವಿದ್ಯಾರ್ಥಿಯ ಬಗ್ಗೆ ಗಮನಹರಿಸಿ, ಸರಿಪಡಿಸುವ ವ್ಯವಸ್ಥೆ ನಡೆದರು ಸಹ ವಿದ್ಯಾರ್ಥಿಯ ವರ್ತನೆ ಸರಿಯಾಗಿ ಆಗದೆ ಇರುವುದರಿಂದ 122 ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದರು.

ದುರ್ವರ್ತನೆ ತೋರಿದ ವಿದ್ಯಾರ್ಥಿ ಶಾಲೆಗೆ ಬಂದರೆ 122 ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು  ಸಭೆಯಲ್ಲಿದ್ದ ಪೋಷಕರು ಹೇಳಿದರು. ಒಬ್ಬ ವಿದ್ಯಾರ್ಥಿ ಇಂದ ಆಗುವ ತೊಂದರೆಯನ್ನು  ಪೋಷಕರು, ವಿದ್ಯಾರ್ಥಿಗಳು  ಸಭೆಯಲ್ಲಿ ತಿಳಿಸಿದರು. ದುರ್ವರ್ತನೆ ತೋರಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯ ತಾಯಿಗೆ  ಕೌನ್ಸಿಲಿಂಗ್ ಮಾಡಿದರೆ ಉತ್ತಮ ಎಂದು ಅಭಿಪ್ರಾಯ ಪೋಷಕರಿಂದ ಬಂತು.

ಶಿಕ್ಷಣ ಸಂಯೋಜಕಿ ಅಮೃತಾ ಕಲಾ ಮಾತನಾಡಿ ಬಾಲ ಮಂದಿರ ಬೊಂದೆಲ್, ಮಂಗಳೂರು ಇಲ್ಲಿಗೆ ಕಳಿಸುವ ಅಥವಾ ಶಾಲಾ ಕೊಠಡಿ ಯಲ್ಲಿ ಶಿಕ್ಷಕಿಯನ್ನು ಇಟ್ಟು ತರಗತಿ ನಡೆಸುವ ಬಗ್ಗೆ ತಿಳಿಸಿದರು. ಇದರಿಂದ ಅಸಮಾಧಾನ ಗೊಂಡ ಪೋಷಕರು ಇಂಥ ಘಟನೆಗಳು ಕೆಲವು ಸಲ ನಡೆದಿವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು  ಸಭೆಯಿಂದ ಹೊರ ಬಂದ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು ನಂತರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

Advertisement

ಸ್ಪಂದಿಸಿದ ಶಿಕ್ಷಣ ಇಲಾಖೆ:

ಶಿಕ್ಷಣಾಧಿಕಾರಿಗಳು ನಗರ ಸಭೆಯ ಚುನಾವಣಾ ಕರ್ತವ್ಯದಲ್ಲಿ ರುವುದರಿಂದ ಶಿಕ್ಷಣಾಧಿಕಾರಿಗಳು ನಿರ್ದೇಶನದಂತೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಇವರು ಶಾಲೆಗೆ ಆಗಮಿಸಿ ವಿದ್ಯಾರ್ಥಿಯ ಪೋಷಕರೊಂದಿಗೆ ಮಾತುಕತೆ ನಡೆಸಿದರು.ಮಂಗಳವಾರ ಶಾಲೆಗೆ ಮಕ್ಕಳ ಹಕ್ಕು ಮತ್ತು ಕಲ್ಯಾಣಾಧಿಕಾರಿಗಳ ಸಮಿತಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಾರೆ.ಬುಧವಾರ ಈ ಪ್ರಕರಣಕ್ಕೆ ಸುಖಾಂತ್ಯ ಸಿಗಲಿದೆ ಎಂದು ಭರವಸೆ ನೀಡಿದರು.

ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಅಬ್ದುಲ್ ಮೆಣಸಿನಕಾನ, ಉಪಾಧ್ಯಕ್ಷೆ  ಮನೋರಮ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೌಜಿಯ,ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯ ರಾದ ಇಬ್ರಾಹಿಂ ,ರಮೇಶ್ ರೈ, ವೆಂಕಪ್ಪ ,ಶಶಿಕಲಾ ಮುಖ್ಯ ಶಿಕ್ಷಕಿ ಜಲಜ ಶಿಕ್ಷಕಿಯರಾದ ವಾಣಿಶ್ರೀ. ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next