ಬನ್ನೂರು: ಪೋಲಿಯೋ ಲಸಿಕೆ ಹಾಕುವ ಮೂಲಕ ಮುಂದೆ ಸಂಭವಿಸುವ ಅಂಗವಿಕಲತೆಯನ್ನು ತಡೆಗಟ್ಟಿ ಮಕ್ಕಳ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೋಷಕರು ನೆರವಾಗಬೇಕು ಎಂದು ಸಮಾಜ ಸೇವಕ ಮಹೇಂದ್ರ ಸಿಂಗ್‌ಕಾಳಪ್ಪ ತಿಳಿಸಿದರು.
ಬನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಲಸಿಕೆ ಹಾಕಿದ ನಂತರ ಮಾತನಾಡಿದ ಅವರು, ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಪೋಲಿಯೋ ದೇಶಕ್ಕೆ ದೊಡ್ಡ ಪಿಡುಗಾಗಿದ್ದು, ರೋಟರಿ ಸಂಸ್ಥೆ ಪೋಲಿಯೋ ನಿರ್ಮೂಲನೆಗೆ ಪಣತೊಟ್ಟು ಕೆಲಸ ನಿರ್ವಹಿಸಿ ಇಂದು ಯಶಸ್ಸು ಕಂಡಿದೆ ಎಂದು ತಿಳಿಸಿದರು. ಲಸಿಕೆ ಹಾಕಿಸುವಲ್ಲಿ ಪೋಷಕರ ಪಾತ್ರ ಅತಿ ಮುಖ್ಯವಾಗಿದ್ದು, ನಿಗದಿತ ಅವಧಿಯಲ್ಲಿ ಲಸಿಕೆ ಹಾಕುವ ಮೂಲಕ ಮುಂದೆ ಆಗಬಹುದಾದಂತ ಸಮಸ್ಯೆಯನ್ನು ತಡೆಗಟ್ಟಬಹುದು ಎಂದು ಹೇಳಿದರು.
ಲಸಿಕೆ ತೆಗೆದುಕೊಂಡ ಅರ್ಧ ಗಂಟೆಯವರೆಗೆ ಮಕ್ಕಳಿಗೆ ಎನನ್ನು ಕೊಡಬಾರದು ಎಂದ ಅವರು , ನಂತರ ಆಹಾರ ನೀಡುವಂತೆ ತಿಳಿಸಿದರು. ಪ್ರತಿಯೊಬ್ಬರು ಜಾಗೃತರಾಗಿ ಲಸಿಕೆಯನ್ನು ಮಕ್ಕಳಿಗೆ ನೀಡಿದರೆ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲನೆ ಆಗುತ್ತದೆ ಎಂದು ಹೇಳಿದರು.
ಇದರಲ್ಲಿ ಪೋಷಕರ ಪಾತ್ರ ಮುಖ್ಯ ಎಂದು ಹೇಳಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಚಾಮೇಗೌಡ, ಡಾ.ರವಿಕುಮಾರ್, ಪರಮೇಶ, ಕೆಂಪೇಗೌಡ, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.