Advertisement

ತಂದೆ-ತಾಯಿಯನ್ನು ದೇವರಂತೆ ಕಾಣಿ: ವಜ್ಜಲ್‌

03:20 PM Dec 31, 2021 | Team Udayavani |

ಲಿಂಗಸುಗೂರು: ನಮಗಾಗಿ ಕಷ್ಟುಪಟ್ಟು ಉತ್ತಮ ಜೀವನ ರೂಪಿಸಿದ ತಂದೆ-ತಾಯಿಯನ್ನು ದೇವರಂತೆ ಕಾಣಬೇಕು ಎಂದು ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್‌ ಹೇಳಿದರು.

Advertisement

ಪಟ್ಟಣದ ಸುಧಾಮೂರ್ತಿ ಇನೊಧೀ ಮಹಿಳಾ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುಧಾ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಕಲಿತರೆ ಸಾಲದು. ಸಾಮಾನ್ಯ ಜ್ಞಾನ, ಸಂಸ್ಕಾರ ಕಲಿಯಬೇಕು. ನೌಕರರಿಗಾಗಿ ವಿದೇಶಕ್ಕೆ ಹೋಗುವ ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳು ಎಷ್ಟು ದುಡಿದರೆ ಏನು ಪ್ರಯೋಜನ, ತಂದೆ-ತಾಯಿ ತಾವು ಕಷ್ಟಪಟ್ಟು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ತಂದೆ-ತಾಯಿಗೆ ನಾವು ಕಷ್ಟಕೊಡಬಾರದು. ಇದನ್ನು ವಿದ್ಯಾರ್ಥಿಗಳ ಮನದಟ್ಟು ಮಾಡಿಕೊಂಡು ಶಿಕ್ಷಣವಂತರಾಗಬೇಕು ಎಂದರು.

ಅಂಕಲಿಮಠದ ಬಸವರಾಜ ಸ್ವಾಮೀಜಿ, ಇರಕಲ್‌ ಮಠದ ಬಸವಪ್ರಸಾದ ಸ್ವಾಮೀಜಿ, ವಿವಿ ಸಂಘದ ಆಡಳಿತಾ ಧಿಕಾರಿ ಬಸವಂತರಾಯ ಕುರಿ, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್‌, ಸ್ವಾನ್ವಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅರ್ಪಿತಾ ಭಾವಿಮನಿ, ಶಿವಾನಂದ ಮೇಟಿ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಜ ಕೆಂಭಾವಿ, ವಿನೋಧ ಗುಡಿಮನಿ, ಪ್ರಾಚಾರ್ಯ ಶರಣಮ್ಮ, ಹುಲ್ಲೇಶ ಸಾಹುಕಾರ, ಜೆಸ್ಕಾಂ ಎಇಇ ವೆಂಕಟೇಶ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next