Advertisement

ಆಧಾರ್‌ ತಿದ್ದುಪಡಿಗೆ ಪೋಷಕರ ಪರದಾಟ

05:13 PM Mar 15, 2018 | |

ಚಿಕ್ಕಬಳ್ಳಾಪುರ: ಆಧಾರ್‌ ಕಾರ್ಡ್‌ಗಳಲ್ಲಿ ಮುದ್ರಣ ದೋಷದಿಂದ ಉಂಟಾಗಿರುವ ಮಕ್ಕಳ ಹೆಸರು ತಿದ್ದುಪಡಿಗಾಗಿ ಈಗ ಜಿಲ್ಲೆಯ ಪೋಷಕರು ಬೆಳಗ್ಗೆಯೆ ತಮ್ಮ ಕೆಲಸ ಕಾರ್ಯ ಬಿಟ್ಟು ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ.

Advertisement

ಮುದ್ರಣ ದೋಷ: ಸಾರ್ವಜನಿಕ ಶಿಕ್ಷಣ ಇಲಾಖೆಯು 2018-19ನೇ ಸಾಲಿಗೆ ಎಲ್‌ಕೆಜಿಯಿಂದ ಉಚಿತ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶೇ.25 ಬಡ ಮಕ್ಕಳ ಪ್ರವೇಶಕ್ಕೆ ಆದೇಶ ನೀಡಿದೆ. ಪೋಷಕರು ಆರ್‌ಟಿಇನಡಿ ಅರ್ಜಿ ಸಲ್ಲಿಸುವ ವೇಳೆ ಆಧಾರ್‌ ಕಾರ್ಡ್‌ ಸಲ್ಲಿಕೆ ಕಡ್ಡಾಯ ವಾಗಿದ್ದು, ಆದರೆ, ಶಾಲೆಗೆ ಸೇರಿಸುವ ಮಕ್ಕಳ ಹೆಸರು ಮುದ್ರಣ ದೋಷದಿಂದ ಆಧಾರ್‌ ಕಾರ್ಡ್‌ಗಳಲ್ಲಿ ತಪ್ಪಾಗಿ ಮುದ್ರಣಗೊಂಡಿರುವುದರಿಂದ ಆಧಾರ್‌ ತಿದ್ದುಪಡಿಗಾಗಿ ಪೋಷಕರು ಇನ್ನಿಲ್ಲದ ರೀತಿಯಲ್ಲಿ ಪ್ರಯಾಸ ಪಡೆಯುತ್ತಿದ್ದಾರೆ.

2 ಬ್ಯಾಂಕ್‌ನಲ್ಲಿ ಮಾತ್ರ ಅವಕಾಶ: ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಕೊಳ್ಳಲು ಪೋಷಕರಿಗೆ ಅವಕಾಶ
ನೀಡಲಾಗಿದ್ದರೂ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಮಾತ್ರ ಕೆಲ ಬ್ಯಾಂಕ್‌ಗಳಲ್ಲಿ ಈ ಅವಕಾಶ ಕಲ್ಪಿಸಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿ ಪೋಷಕರು ಬೆಳಗ್ಗೆ ಬ್ಯಾಂಕ್‌ಗಳ ಮುಂದೆ ತಿದ್ದುಪಡಿಗಾಗಿ ಕ್ಯೂ ನಿಲ್ಲು ವಂತಾಗಿದೆ. ಚಿಕ್ಕಬಳ್ಳಾಪುರದಲ್ಲಿ ಬಿಬಿ ರಸ್ತೆಯ ಎಸ್‌ ಬಿಐ ಹಾಗೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ನಲ್ಲಿ ಮಾತ್ರ ಆಧಾರ್‌ ತಿದ್ದುಪಡಿಗೆ ಅವಕಾಶ ನೀಡಿ ರುವುದರಿಂದ ಜಿಲ್ಲೆಯ ವಿವಿಧಡೆಗಳಿಂದ ನೂರಾರು ಪೋಷಕರು ತಮ್ಮ ಮಕ್ಕಳ ಸಮೇತ ಊಟ, ತಿಂಡಿ ಬಿಟ್ಟು ಬ್ಯಾಂಕ್‌ಗಳ ಮುಂದೆ ನಿಲ್ಲುತ್ತಿದ್ದಾರೆ. ಸದ್ಯ
ಬಿಸಿಲಿನ ಆರ್ಭಟ ಜಿಲ್ಲೆಯಲ್ಲಿ ಹೆಚ್ಚಾಗಿರುವುದರಿಂದ ಪುಟ್ಟ ಪುಟ್ಟ ಮಕ್ಕಳೊಂದಿಗೆ ಪೋಷಕರು ಬ್ಯಾಂಕುಗಳ ಮುಂದೆ ಊರಿ ಬಿಸಿಲಲ್ಲಿ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದೆ.

ಹೆಚ್ಚುವರಿ ಕೇಂದ್ರ ತೆರೆಯಿರಿ: ಮುದ್ರಣ ದೋಷ ದಿಂದ ಆಧಾರ್‌ ಕಾರ್ಡ್‌ಗಳಲ್ಲಿ ಸಾಕಷ್ಟು ಮಕ್ಕಳ ಹೆಸರು ವ್ಯತ್ಯಾಸಗೊಂಡಿದ್ದು, ತಿದ್ದುಪಡಿಗಾಗಿ ನೂರಾರು ಸಂಖ್ಯೆಯಲ್ಲಿ ಪೋಷಕರು ಬ್ಯಾಂಕ್‌ಗಳಿಗೆ ಲಗ್ಗೆ ಇಟ್ಟರೂ ಮುಗಿಯುತ್ತಿಲ್ಲ. ಇದರಿಂದ ಆರ್‌ ಟಿಇಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಸಮೀಪಿಸುತ್ತಿ ರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ.

ಆದರೆ, ಆಧಾರ್‌ ತಿದ್ದುಪಡಿಗಾಗಿ ಪೋಷಕರು ಜಿಲ್ಲೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿರುವುದು ವಿದ್ಯಾರ್ಥಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಆಧಾರ್‌ ತಿದ್ದುಪಡಿಗೆ ಕೇವಲ ಎರಡು ಬ್ಯಾಂಕ್‌ಗೆ ಮಾತ್ರ ಅವಕಾಶ ನೀಡುವ ಬದಲು ಅಯಾ ಗ್ರಾಪಂ ಕೇಂದ್ರಗಳಲ್ಲಿ ತಿದ್ದುಪಡಿಗೆ ಅರ್ಜಿ
ಸಲ್ಲಿಸಲು ಅವಕಾಶ ನೀಡಿದರೆ ಅನುಕೂಲವಾಗುತ್ತದೆ ಎಂದು ಪೋಷಕರು ಆಗ್ರಹಿಸಿದ್ದಾರೆ.

Advertisement

ಆರ್‌ಟಿಇ ಸೀಟು ಕೈ ತಪುವ ಆತಂಕ 
ಮಗನನ್ನು ಆರ್‌ಟಿಇನಡಿ ಶಾಲೆಗೆ ಸೇರಿಸಬೇಕು. ಆಧಾರ್‌ ಕಾರ್ಡ್‌ನಲ್ಲಿ ಹೆಸರು ತಪ್ಪಿದೆ. ತಿದ್ದುಪಡಿಗೆ ಅರ್ಜಿ ಸಲ್ಲಿಸಲಿಕ್ಕೆ ಮಂಚೇನಹಳ್ಳಿಯಿಂದ ಬಂದಿದ್ದೇನೆ. ಆದರೆ, ಇಲ್ಲಿ ನೋಡಿದರೆ ಜನ ತುಂಬಿ ಹೋಗಿದ್ದಾರೆ.

ತಿದ್ದುಪಡಿಗೆ ಸಿಮೀತವಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ. ಇವತ್ತು ಅರ್ಜಿ ಸಲ್ಲಿಸಕ್ಕೆ ಆಗಲ್ಲ ಅಂತ ವಾಪಸ್‌ ಹೋಗುತ್ತಿದ್ದೇನೆಂದು ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಿಂದ ಆಗಮಿಸಿದ್ದ ಪ್ರಕಾಶ್‌ ಅಳಲು ತೋಡಿಕೊಂಡರು. ಗ್ರಾಪಂ ಕೇಂದ್ರದಲ್ಲಿ ತಿದ್ದುಪಡಿ ಅರ್ಜಿ ಸ್ವೀಕರಿಸಿದರೆ ನಮಗೆ ಅನುಕೂಲವಾಗುತ್ತದೆ ಎಂದರು.

ಆಧಾರ್‌ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ ವಾರಕ್ಕೆ ಫ‌ಲಾನುಭವಿಗಳಿಗೆ ಹೊಸ ಕಾರ್ಡ್‌ ಸಿಗುತ್ತದೆ. ಆದರೆ ತಿದ್ದುಪಡಿಗೆ ಅರ್ಜಿ
ಹಾಕಲಿಕ್ಕೆ ಸಾಧ್ಯವಾಗದೇ ಎಷ್ಟೋ ಪೋಷಕರು ತಮ್ಮ ಮಕ್ಕಳ ಆರ್‌ಟಿಇ ಪ್ರವೇಶದಿಂದ ವಂಚಿತರಾಗುವ
ಆತಂಕದಲ್ಲಿದ್ದಾರೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next