Advertisement

ನಟ ಧನುಷ್‌ ನಮ್ಮ ಮಗ: ದಂಪತಿ ಅರ್ಜಿ ವಜಾ

03:45 AM Apr 22, 2017 | Team Udayavani |

ಮಧುರೈ: ನಟ ಧನುಷ್‌ ನಮ್ಮ ಮಗ. ಚಿಕ್ಕವನಿದ್ದಾಗ ಓಡಿ ಹೋಗಿದ್ದ. ಈಗವನು ಸ್ಟಾರ್‌ ಆಗಿದ್ದು, ನಮ್ಮ ಜೀವನ ನಿರ್ವಹಣೆಗೆ ಆತನಿಂದ ಹಣ ಕೊಡಿಸಬೇಕೆಂದು ಕೋರಿ ವೃದ್ಧ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾ ಗೊಳಿಸಿದೆ. 

Advertisement

ಆರ್‌. ಕದಿರೇಶನ್‌ (65) ಮತ್ತು ಅವರ ಪತ್ನಿ ಮೀನಾಕ್ಷಿ (53) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ನ್ಯಾ. ಪಿ.ಎನ್‌.ಪ್ರಕಾಶ್‌ ಅವರಿದ್ದ ಮದುರೆ ಪೀಠ, “ದಂಪತಿ ಸುಳ್ಳು ಹೇಳುತ್ತಿದ್ದು, ಅವರ ವಾದವನ್ನು ನಂಬಲು ಸಾಧ್ಯವಿಲ್ಲ,’ ಎನ್ನುವ ಮೂಲಕ ಅರ್ಜಿ ರದ್ದು ಮಾಡಿದೆ. ಈ ಹಿಂದೆ ವೃದ್ಧ ದಂಪತಿಯ ಅರ್ಜಿಗೆ ಸಂಬಂಧಿಸಿದಂತೆ ನಟ ಧನುಷ್‌  ಮೇಲ್ಮನವಿ ಸಲ್ಲಿಸಿದ್ದರಿಂದ ಆದೇಶವನ್ನು ಹೈಕೋರ್ಟ್‌ ತಡೆಹಿಡಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next