Advertisement

ಪರಶುರಾಮ ಥೀಮ್‌ ಪಾರ್ಕ್‌ಅಕ್ರಮ ತನಿಖೆಗೆ ಆಗ್ರಹ

01:27 PM Sep 09, 2023 | Team Udayavani |

ಉಡುಪಿ: ತಾಲೂಕಿನ ಬೈಲೂರು ಉಮಿಕಲ್‌ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮನ ಮೂರ್ತಿಯು ಕಂಚಿನದ್ದು ಎಂಬುದರ ಸತ್ಯಾಸತ್ಯತೆ ತಿಳಿಯಲು ಲೋಹಮಾಪನ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.

Advertisement

1.58 ಎಕ್ರೆ ಗೋಮಾಳದಲ್ಲಿ ಅಕ್ರಮವಾಗಿ ಪಾರ್ಕ್‌ ನಿರ್ಮಿಸಲಾಗಿದೆ. ಚುನಾವಣೆ ಉದ್ದೇಶದಿಂದ ಅವಸರದಲ್ಲಿ ಥೀಮ್‌ ಪಾರ್ಕ್‌ ಉದ್ಘಾಟಿಸಲಾಗಿದೆ. ಪರಶುರಾಮನ ಕಂಚಿನ ಪ್ರತಿಮೆ ಎಂದಿದ್ದರು. ಅದು ಈಗ ಪೂರ್ಣ ಪ್ರಮಾಣದ ಕಂಚಿನ ಪ್ರತಿಮೆಯಾಗಿಲ್ಲ. ಮೊಣಕಾಲು ತನಕ ಕಂಚಿನದ್ದಾಗಿದ್ದು, ಉಳಿದ ಭಾಗ ಇನ್ನೂ ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ. ಹೀಗಾಗಿಯೇ ಸಾರ್ವಜನಿಕರಿಗೆ
ಪ್ರವೇಶ ನಿರ್ಬಂಧಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪಾರ್ಕ್‌ ಅವ್ಯವಹಾರ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದ್ದು, ಅವರು ಕಾಮಗಾರಿ ಸ್ಥಗಿತಗೊಳಿಸಲುಜಿಲ್ಲಾಧಿಕಾರಿಗಳಿಗೆ ಸೂಚನೆ
ನೀಡಿದ್ದಾರೆ ಎಂದರು. 14.42 ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ 6.72 ಕೋಟಿ ರೂ. ಪಾವತಿಯಾಗಿದೆ. ಅವುಗಳ ಪೈಕಿ 2 ಕೋಟಿ ರೂ. ಪಾವತಿಗೆ ಸಂಬಂಧಿಸಿ ಯಾವುದೇ ಮಾಹಿತಿ, ದಾಖಲಾತಿ ಇಲ್ಲ. ಪಾರ್ಕ್‌  ಉದ್ಘಾಟನೆಗೆ 2.18 ಕೋ.ರೂ. ಖರ್ಚು ಮಾಡಲಾಗಿದ್ದು, 60 ಲ. ರೂ. ಯಾವುದಕ್ಕೆ ಪಾವತಿಸಿದ್ದಾರೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ ಎಂದು ದೂರಿದರು. ಮುಖಂಡರಾದ ಸದಾಶಿವ ದೇವಾಡಿಗ, ದೀಪಕ್‌ ಕೋಟ್ಯಾನ್‌, ಸುಬಿತ್‌ ಕುಮಾರ್‌, ಸುಧಾಕರ ಶೆಟ್ಟಿ ಹಾಗೂ ಸುಬೋಧರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next