Advertisement

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

01:13 AM May 05, 2024 | Team Udayavani |

ಉಡುಪಿ: ಪರಶುರಾಮ ಥೀಮ್‌ ಪಾರ್ಕ್‌ ಹೆಸರಿನಲ್ಲಿ ನಡೆದ ಅವ್ಯವಹಾರ, ಅಕ್ರಮ ಕರಾವಳಿ ಜನರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದು, ಜನಾಭಿಪ್ರಾಯಕ್ಕೆ ಸೂಕ್ತವಾಗಿ ಥೀಮ್‌ ಪಾರ್ಕ್‌ ಅನ್ನು ಅಭಿವೃದ್ಧಿ ಮಾಡಬೇಕಿದೆ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ಯಾವುದೇ ಕಾರಣಕ್ಕೂ ಈ ಕಾಮಗಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರ, ಕೃಷ್ಣ ಆರ್ಟ್‌ ಗ್ಯಾಲರಿ ಸಂಸ್ಥೆಗೆ ವಹಿಸಬಾರದು. ಥೀಮ್‌ ಪಾರ್ಕ್‌ ಕಾಮಗಾರಿ ಅಕ್ರಮಗಳಿಂದ ಕೂಡಿದ್ದು, ಮೂರ್ತಿ ನಿರ್ಮಾಣದ ಅನುಭವ ಇಲ್ಲದವರಿಗೆ ಕಾಮಗಾರಿ ವಹಿಸಲಾಗಿದೆ. ಕೂಡಲೇ ಸರಕಾರ ಹಾಗೂ ಜಿಲ್ಲಾಡಳಿತ ಪರಿಶೀಲನೆ ನಡೆಸಿ ನಿರ್ಮಿತಿ ಕೇಂದ್ರದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ರಾಜಕೀಯ ಸ್ವಾರ್ಥಕ್ಕಾಗಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿದವರಿಗೆ ತಕ್ಕ ಶಿಕ್ಷೆಯಾಗಲಿದೆ. ಥೀಮ್‌ಪಾರ್ಕ್‌ ಪ್ರದೇಶವು ಕಂದಾಯ ಇಲಾಖೆಯಲ್ಲಿದ್ದು, ಕಾನೂನು ತೊಡಕು ನಿವಾರಿಸಿ ಕೂಡಲೇ ಜನಾಭಿಪ್ರಾಯದಂತೆ ಪ್ರವಾಸಿ ಸ್ಥಳವಾಗಿ ಜಿಲ್ಲಾಡಳಿತ ರೂಪಿಸಬೇಕು ಎಂದರು. ಮುಖಂಡರಾದ ಕೆ. ಕೃಷ್ಣಮೂರ್ತಿ ಆಚಾರ್ಯ, ರಮೇಶ್‌ ಕಾಂಚನ್‌ ಮಾತನಾಡಿ, ತನಿಖಾ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಸರಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್‌ ಆದೇಶ ಪಾಲನೆಗೆ ಬಿಜೆಪಿ ಒತ್ತಾಯ
ಕಾರ್ಕಳ: ಉಚ್ಚನ್ಯಾಯಾಲಯದ ಆದೇಶ ಉಲ್ಲಂಘಿಸಿ ಪರಶುರಾಮ ಥೀಂ ಪಾರ್ಕ್‌ನ ಕೆಲಸವನ್ನು ತಡೆ ಯುವ ಅಧಿಕಾರ ಜಿಲ್ಲಾಧಿಕಾರಿಗಳಿಗಿಲ್ಲ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್‌ನ ಸೂಚನೆಯಂತೆ ಮೂರ್ತಿ ವಿನ್ಯಾಸಕಾರರು ನಿನ್ನೆಯಿಂದಲೇ (ಮೇ 3) ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಸ್ಥಳದಲ್ಲಿ ಭಯದ ವಾತಾವರಣವಿದ್ದು, ಸೂಕ್ತ ಭದ್ರತೆ ಒದಗಿಸಿ ಕಾಮಗಾರಿ ನಡೆಸಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Advertisement

ಕೆಲಸ ಆರಂಭಿಸದಂತೆ ತಡೆಯಲು ಕೆಲವು ಕಾಂಗ್ರೆಸ್‌ ನಾಯಕರು, ಥೀಂ ಪಾರ್ಕ್‌ ಗೆ ಹೋಗುವ ಬೆಟ್ಟದ ರಸ್ತೆಗೆ ಮಣ್ಣು ಸುರಿದಿದ್ದಾರೆ. ಸರಕಾರಿ ಯೋಜನೆ ಪೂರ್ಣಗೊಂಡು ಸಾರ್ವಜನಿಕರಿಗೆ ಲಭ್ಯವಾಗಬೇಕು ಎನ್ನುವ ಇರಾದೆ ಇವರಿಗಿಲ್ಲ ಎಂದು ಟೀಕಿಸಿದರು. ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ ಬೋಳ ಸತೀಶ್‌ ಪೂಜಾರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next