Advertisement

ಪರೇಶ ಮೇಸ್ತ ನಿಗೂಢ ಸಾವು, ಶೀಘ್ರ ತನಿಖೆಗೆ ಆಗ್ರಹಿಸಿ ಮನವಿ

12:27 PM Dec 28, 2017 | Team Udayavani |

ಬಂಟ್ವಾಳ: ಹಿಂದೂ ನೇತಾರರ ಹತ್ಯೆಗಳ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಸಂಬಂಧಿತರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಬಂಟ್ವಾಳದ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರ ಮೂಲಕ ಕರ್ನಾಟಕ ರಾಜ್ಯಪಾಲರಿಗೆ ಡಿ. 27ರಂದು ಮನವಿ ನೀಡಿತು.

Advertisement

ಹೊನ್ನಾವರದ ಕೋಮುಗಲಭೆಯಲ್ಲಿ 18 ವರ್ಷದ ಯುವಕ ಪರೇಶ ಮೇಸ್ತ ಅವರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ರಾಜ್ಯ ಸರಕಾರ ಸಹಜ ಸಾವು ಎಂದು ಪ್ರಕರಣವನ್ನು ತಿರುಚಲು ಪ್ರಯತ್ನಿಸಿದೆ. ರಾಜ್ಯದಲ್ಲಿ 20ಕ್ಕೂ ಅಧಿಕ ಹಿಂದೂ ನಾಯಕರ ಹತ್ಯೆಯಾಗಿದೆ. ರಾಜ್ಯ ಸರಕಾರ ಮುಸ್ಲಿಂ ತುಷ್ಟೀಕರಣ ನೀತಿ ಮತ್ತು ಹಿಂದೂ ವಿರೋಧಿ ಧೋರಣೆಯನ್ನೇ ಮುಂದುವರಿಸಿದೆ. ಇದುವರೆಗೆ ನಡೆದ ಹಿಂದೂ ನಾಯಕರ ಹತ್ಯೆಗೆ ವಿಶೇಷ ತನಿಖಾ ದಳ ನೇಮಿಸಬೇಕು. ತನಿಖೆಗಳ ಆಧಾರದಲ್ಲಿ ಹಿಂದೂ ನಾಯಕರಿಗೆ ಸೂಕ್ತ ಭದ್ರತೆಯನ್ನು ಪೊಲೀಸ್‌ ಇಲಾಖೆ ಕೂಡಲೇ ಕಲ್ಪಿಸಬೇಕು. ತನಿಖೆಗೆ ಸಂಬಂಧಿಸಿದಂತೆ ಪೊಲೀಸರ ಹೇಳಿಕೆ ಮತ್ತು ಅವರ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೆ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಲಾಯಿತು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕಿರಣ್‌ ಕುಮಾರ್‌, ಬಜರಂಗದಳದ ಅಶೋಕ್‌ ಸರಪಾಡಿ, ಗುರುರಾಜ್‌ ಬಂಟ್ವಾಳ, ಪ್ರದೀಪ್‌ ಅಜ್ಜಿಬೆಟ್ಟು, ಲೋಹಿತ್‌ ಪಣೋಲಿಬೈಲು, ದಕ್ಷಣ್‌ ಮಿತ್ತಮಜಲು, ಗಣೇಶ್‌ ಕಾರಾಜೆ, ಗಿರೀಶ್‌ ಸರಪಾಡಿ, ಅಮೃತ್‌ ಶಾಂತಿನಗರ, ರಾಮ ನಂದಾವರ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next