Advertisement
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 1,500 ಸಜಾಬಂದಿಗಳು, 3,600 ವಿಚಾರಣಾಧೀನ ಕೈದಿಗಳು ಸೇರಿ ಐದು ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಎಲ್ಲರಿಗೂ ವಾರಾಂತ್ಯದಲ್ಲಿ ಎನ್‌ಜಿಒಗಳ ಕಡೆಯಿಂದ ಯೋಗ, ಧ್ಯಾನ ಇನ್ನಿತರ ಕಾರ್ಯಕ್ರಮಗಳ ಮೂಲಕ ಮನಃಪರಿವರ್ತನೆ ಮಾಡಲಾಗುತ್ತಿದೆ. ಈ ವೇಳೆ ಕೆಲವು ಕೈದಿಗಳಲ್ಲಿ ಕಂಡು ಬಂದ ಸುಪ್ತಪ್ರತಿಭೆಗಳನ್ನು ಕಂಡು ಅಚ್ಚರಿಗೊಂಡ ಕಾರಾಗೃಹ ಇಲಾಖೆ ಅಧಿಕಾರಿಗಳು ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ತಿಳಿದೋ ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಕಷ್ಟು ವಿದ್ಯಾವಂತರು, ಪದವೀಧರರು, ಎಂಜಿನಿಯರ್‌ಗಳು ಜೈಲು ಸೇರಿದ್ದಾರೆ. ಅವರಲ್ಲಿರುವ ಭಾಷಾಜ್ಞಾನ, ಆಸಕ್ತಿ, ವಿದ್ಯಾರ್ಹತೆ, ಭಾಷಣಕಾರರು, ಹಾಡುಗಾರರು, ವಾಕ್ಚಾತುರ್ಯ ಉಳ್ಳ ಅರ್ಹ ಕೈದಿಗಳಿಗೆ ನಾನಾ ಹಂತದಲ್ಲಿ ಪರೀಕ್ಷೆಗಳನ್ನು ನಡೆಸಿ ಈ ಮೂಲಕ ಆರು ಮಂದಿ ಮಹಿಳೆಯರು ಸೇರಿ 20 ಮಂದಿಯನ್ನು ಆಯ್ಕೆ ಮಾಡಲಾಗಿದೆ. ರೇಡಿಯೋದಲ್ಲಿ ಏನೆಲ್ಲ ಇರುತ್ತೆ?
ಒಂದು ವರ್ಷದ ಯೋಜನೆಯನ್ನು ಈಗ ಕಾರ್ಯರೂಪಕ್ಕೆ ತರಲಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಸಮುದಾಯ ರೇಡಿಯೋ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
Related Articles
ಕಾರಾಗೃಹ ವ್ಯಾಪ್ತಿಯಲ್ಲಿ ಸಮುದಾಯ ರೇಡಿಯೋ ಕಾರ್ಯನಿರ್ವಹಿಸಲಿದ್ದು, 16 ಬ್ಯಾರಕ್‌ಗಳಲ್ಲಿಯೂ ಧ್ವನಿವರ್ಧಕ ಅಳವಡಿಸಲಾಗಿದೆ. ಕಾರಾಗೃಹದ ಆಡಳಿತ ಕಚೇರಿ ಪಕ್ಕದಲ್ಲೇ ರೇಡಿಯೋ ಸ್ಟೇಷನ್ ನಿರ್ಮಾಣ ಮಾಡಲಾಗುತ್ತದೆ. ಕೈದಿಗಳು ಅಲ್ಲಿ ಆರ್‌ಜೆ ಜತೆ ಮಾತನಾಡಬಹುದು.
Advertisement
- ಮೋಹನ್ ಭದ್ರಾವತಿ