Advertisement

ಇನ್ನು ಮುಂದೆ ದೇಶದ ಸೇನೆಯಲ್ಲಿನ ಒಂಟೆ, ಕುದುರೆಗಳಿಗೂ ನಿವೃತ್ತಿ ಸೌಲಭ್ಯ

11:26 AM Jan 05, 2020 | Team Udayavani |

ನವದೆಹಲಿ: ಇನ್ನು ಮುಂದೆ ದೇಶದ ಅರೆಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಣಿಗಳೂ ಯೋಧರಂತೆ ನಿವೃತ್ತಿ ವೇತನ ಪಡೆದುಕೊಳ್ಳಲಿವೆ. ಅರೆ ಸೇನಾ ಪಡೆಯ 6 ಸದಸ್ಯರ ಸಮಿತಿ ಈ ಶಿಫಾರಸು ಮಾಡಿದೆ.

Advertisement

ಪ್ರಾಣಿಗಳು ಸಲ್ಲಿಸಿದ ಸೇವೆ, ಆರೋಗ್ಯ ಗಮನಿಸಿಕೊಂಡು, ಅವುಗಳಿಗಾದ ಗಾಯದ ತೀವ್ರತೆ ಗಮನಿಸಿಕೊಂಡು ನಿವೃತ್ತಿ ಪ್ರಕಟಿಸಲಾಗುತ್ತದೆ. ಅಂಥ ಪ್ರಾಣಿಗಳಿಗೆ ದಯಾ ಮರಣ ನೀಡಬಾರದು ಮತ್ತು ಹರಾಜಿನ ಮೂಲಕ ಅವುಗಳನ್ನು ವಿಲೇ ಮಾಡಬಾರದು ಎಂದು ಸಮಿತಿ ಸಲಹೆ ನೀಡಿದೆ.

ಅವುಗಳನ್ನು ಅವುಗಳು ಕರ್ತವ್ಯ ನಿರ್ವಹಿಸಿದ ಕೇಂದ್ರದಲ್ಲಿಯೇ ಇರುವ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು. ನಾಯಿಗಳನ್ನು ತರಬೇತಿ ಅಥವಾ ತಳಿ ಅಭಿವೃದ್ಧಿ ಕೇಂದ್ರಕ್ಕೆ ನೀಡಬೇಕು. ಶ್ವಾನಗಳಿಗೆ ಅವುಗಳ ತರಬೇತುದಾರನ ಜತೆಗೆ ಮೊದಲನೇ ದರ್ಜೆಯ ರೈಲು ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದೂ ಸಲಹೆ ನೀಡಲಾಗಿದೆ. ಸಮಿತಿಯ ಶಿಫಾರಸುಗಳನ್ನು ಗೃಹ ಖಾತೆಗೆ ರವಾನಿಸಲಾಗಿದೆ. ವಿಶೇಷವಾಗಿ ಗಡಿ ಭಾಗದಲ್ಲಿ ಮತ್ತು ಮರುಭೂಮಿ ಯಲ್ಲಿ ದೇಶದ ಅರೆ ಸೇನಾ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ಸೇವೆಗಾಗಿ ಬಳಕೆ ಮಾಡಿಕೊಳ್ಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next