Advertisement

ಹೆಬ್ಟಾರ್‌ಗೆ ಪರಮೇಶ್ವರ ಆಚಾರ್ಯ ಪ್ರಶಸ್ತಿ

06:22 PM Mar 13, 2020 | mahesh |

ಹಲವಾರು ಶಿಷ್ಯಂದಿರನ್ನು ಯಕ್ಷಲೋಕಕ್ಕೆ ಸಮರ್ಪಿಸಿದ ಯಕ್ಷಗುರು ಅರಸಿನಮಕ್ಕಿ ದಿ| ಪರಮೇಶ್ವರ ಆಚಾರ್ಯ ಸಂಸ್ಮರಣ ಪ್ರಶಸ್ತಿಯನ್ನು ಅವರ ಒಡನಾಡಿ ವಿಟ್ಟಲ ಹೆಬ್ಟಾರ್‌ ಅವರಿಗೆ ಪ್ರದಾನ ಮಾಡಲಾಗಿದೆ.

Advertisement

ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ಸಮೀಪ ನೆಕ್ಕರಡ್ಕಪಳಿಕೆ ಯಕ್ಷಾಭಿಮಾನಿ ಬಳಗದ ಆಶ್ರಯದಲ್ಲಿ ಮಾ. 3ರಂದು ನಡೆದ ಶ್ರೀ ಹನುಮಗಿರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಬಯಲಾಟದ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಕಲಾವಿದರ ಕೊಡುಗೆಗಳನ್ನು ಮೆಲುಕು ಹಾಕುವ ಸನ್ನಿವೇಶವೂ ಒದಗಿತ್ತು.

ವಾಹನ ವ್ಯವಸ್ಥೆ ಸಮರ್ಪಕವಾಗಿಲ್ಲದ ದಿನಗಳಲ್ಲಿ ಪರಮೇಶ್ವರ ಆಚಾರ್ಯರು ಕಲ್ಲುಗುಂಡಿಯಲ್ಲಿ ಯಕ್ಷಗಾನ ತರಗತಿಗಳನ್ನು ಆರಂಭಿಸಿದ್ದರು. ಶಿಷ್ಯರೂ ಕಡು ಬಡವರು. ಆರು ತಿಂಗಳ ಕಾಲ ಒಬ್ಬರಿಂದ ಒಂದು ರೂ. ಕೂಡ ಪಡೆದುಕೊಳ್ಳದೆ ನಾಟ್ಯಾಭ್ಯಾಸ, ಪ್ರಸಂಗ ಮಾಹಿತಿ ಇತ್ಯಾದಿಗಳನ್ನು ನೀಡಿದರು. ಈಗ ಹನುಮಗಿರಿ ಮೇಳದ ಪ್ರಮುಖ ಕಲಾವಿದರಾಗಿರುವ ಜಯಾನಂದ ಸಂಪಾಜೆ ಅವರಿಗೆ ಆಗ ಬಡತನದ ದಿನಗಳು. ಕಲಿಸಿದ ಗುರುಗಳ ಋಣ ಹೇಗೆ ತೀರಿಸುವುದೆಂಬ ಚಿಂತೆ. ಹೀಗೆ, ಈ ವರ್ಷ ಅವರದೇ ಊರಿನಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ತಮ್ಮ ಗುರುಗಳ ಸಂಸ್ಮರಣೆ ಮಾಡಿ ದರು. ಹಿರಿಯ ಹಿಮ್ಮೇಳ ವಾದಕರಾಗಿ ಪರಮೇಶ್ವರ ಆಚಾರ್ಯರ ಒಡ ನಾಡಿಯೂ ಆಗಿ ದ್ದ ಸೌತಡ್ಕ ನಿವಾಸಿ ವಿಟ್ಟಲ ಹೆಬ್ಟಾರ್‌ ಅವರಿಗೆ ಪ್ರಥಮ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ವಿಟ್ಟಲ ಹೆಬ್ಟಾರರೂ ಕೃಷಿಕರಾಗಿದ್ದವರು. ಗೋಪಾಲಕೃಷ್ಣ ಕುರುಪ್‌, ಜನಾರ್ದನ ಕುರುಪ್‌ ಅವರಿಂದ ಚೆಂಡೆ-ಮದ್ದಳೆ ನುಡಿಸುವುದನ್ನು ಕಲಿತರು. ಸುಂಕದಕಟ್ಟೆ, ಸುಬ್ರಹ್ಮಣ್ಯ, ಅರುವ, ರಾಜರಾಜೇಶ್ವರಿ, ಉಪ್ಪಿನಂಗಡಿ ಮೊದಲಾದ ಮೇಳಗಳಲ್ಲಿ ವಿಟ್ಟಲ ಹೆಬ್ಟಾರ್‌ ಹಾಗೂ ಪರಮೇಶ್ವರ ಆಚಾರ್ಯರು ಒಡaನಾಡಿಗಳಾಗಿದ್ದರು. ಇಬ್ಬರೂ ಸೇರಿ ಉರುವಾಲು, ನೆಟ್ಟಣ, ಕುಂಟಾಲಪಳಿಕೆ, ಮುಂಡಾಜೆ, ಪುತ್ತಿಗೆ, ನೇಲಡ್ಕ, ಅರಸಿನಮಕ್ಕಿ ಹಾಗೂ ದೂರದ ಮೈಸೂರಿನಲ್ಲೂ ಹಿಮ್ಮೇಳದ ತರಗತಿಗಳನ್ನು ನಡೆಸಿದ್ದಾರೆ.

ಅನಂತ ಹುದಂಗಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next