Advertisement

ಬಿಗ್ ಬಾಸ್ : ಈ ವೀಕೆಂಡ್ ಎಪಿಸೋಡ್ ಬಗ್ಗೆ ಸುಳಿವು ಕೊಟ್ಟ ಪರಮೇಶ್ವರ್‌ ಗುಂಡ್ಕಲ್‌!

04:47 PM Apr 16, 2021 | Team Udayavani |

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಈ ವಾರ ನಡೆಯಬೇಕಿದ್ದ ಬಿಗ್ ಬಾಸ್ ವೀಕೆಂಡ್‍ ಎಪಿಸೋಡ್‍ನಲ್ಲಿ ಭಾಗಿಯಾಗುವುದಿಲ್ಲ ಎಂದು ನಟ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್‌ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Advertisement

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪರಮೇಶ್ವರ್‌ ಗುಂಡ್ಕಲ್‌,  ಇಷ್ಟು ಸೀಸನ್ನುಗಳಲ್ಲಿ ಇಂಥ ಸಂದರ್ಭ ಎದುರಾಗುತ್ತಿರುವುದು ಇದೇ ಮೊದಲು. ಆರೋಗ್ಯದ ತೊಂದರೆ ಇರುವುದರಿಂದ ಕಿಚ್ಚ ಸುದೀಪ್ ಅವರು ಈ ವಾರ ಬಿಗ್ ಬಾಸ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿಲ್ಲ. ಆದರೆ ನಾಳೆ ಮತ್ತು ರವಿವಾರ ಬಿಗ್ ಬಾಸ್ ಎಪಿಸೋಡುಗಳು ರಾತ್ರಿ ಒಂಬತ್ತು ಗಂಟೆಗೆ ಎಂದಿನಂತೆ ಪ್ರಸಾರ ಆಗಲಿವೆ.

ಜೊತೆಯಲ್ಲಿ ಈ ವಾರ ಅತಿಕಡಿಮೆ ಮತಗಳನ್ನು ಪಡೆದ ಒಬ್ಬರು ಕಂಟೆಸ್ಟೆಂಟ್ ಮನೆಯಿಂದ ಹೊರಹೋಗಲಿದ್ದಾರೆ. ಈ ಎಲಿಮಿನೇಷನ್ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ನಿಮಗಿದ್ದರೆ ಹೇಗೆಲ್ಲಾ ಮಾಡಬಹುದು ಎಂಬ ಆಯ್ಕೆಗಳನ್ನು ಎದುರಿಗೆ ಇಟ್ಟುಕೊಂಡು ಬಿಗ್ ಬಾಸ್ ತಂಡ ಕೆಲಸ ಮಾಡುತ್ತಿದೆ. ನಿಮ್ಮ ಕುತೂಹಲಕ್ಕೆ, ಪ್ರೀತಿಗೆ ಮತ್ತು ಶುಭಹಾರೈಕೆಗಳಿಗೆ ಧನ್ಯವಾದಗಳು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next