Advertisement
“ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಸಲಹೆಗಾರ ಜಿತೇಂದ್ರ ಸಿಂಗ್ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿಗೆ ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದ್ದು, ಮಂತ್ರಿಯಾಗಿದ್ದು ಎಲ್ಲಾ ಗೊತ್ತಿದೆ ತನಗೆ. ಸಂಸದನಾಗಿ ದೆಹಲಿಯಲ್ಲಿದ್ದ ತನ್ನ ಮನೆಗೇ ನೀವು ದುಡ್ಡಿನ ಸೂಟ್‌ಕೇಸ್ ತಂದಿರಲಿಲ್ಲವೇ’ ಎಂದು ತಿಳಿಸಿದರು.
1989ರಿಂದ ಗೆಲುವು-ಸೋಲು ಎರಡನ್ನೂ ಕಂಡಿದ್ದೇನೆ. ಆದರೆ, ತನ್ನ ರಾಜಕೀಯ ಜೀವನದಲ್ಲಿ ಯಾರಿಗೂ ಹಣ ಕೊಟ್ಟು ಗೆದ್ದಿಲ್ಲ. ಪರಮೇಶ್ವರ್ ಹಣ ಕೊಟ್ಟು ಮಂತ್ರಿಯಾದರು, ನನ್ನ ಮನೆಗೇ ಹಣದ ಸೂಟ್‌ಕೇಸ್ ತಂದಿದ್ದರು ಎನ್ನುತ್ತಾರೆ ಶ್ರೀನಿವಾಸಪ್ರಸಾದ್. ಅವರ ಮನೆಗೆ ಹಣ ತೆಗೆದುಕೊಂಡು ಹೋಗಲು ಅವರೇನು ಪಕ್ಷದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಆಗಿದ್ದರಾ? ಇಷ್ಟಕ್ಕೂ ಮಂತ್ರಿಗಳ ಮನೆಯಲ್ಲಿ ಸಿಸಿ ಟಿವಿಗಳಿರುತ್ತವೆ. ಅದರಲ್ಲಿ ತಾನು ಹಣ ತೆಗೆದುಕೊಂಡು ಹೋಗಿದ್ದ ದಾಖಲೆ ಇರಬೇಕಲ್ಲಾ? ಶ್ರೀನಿವಾಸಪ್ರಸಾದ್ ಬಗ್ಗೆಯೂ ಸಾಕಷ್ಟು ಹೇಳಬಹುದು. ಆದರೆ ಅವರ ಲೆವಲ್‌ಗೆ ತಾನು ಇಳಿಯುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.