Advertisement
ಇತ್ತೀಚೆಗಿನ ದಿನಗಳಲ್ಲಿ ಲಕ್ವಾ ಹಿರಿಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ; ಯುವ ಜನರಲ್ಲಿಯೂ ಉಂಟಾಗುತ್ತಿದ್ದು, ಈ ವಯೋಮಾನದವರಿಗೆ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಉದ್ಭವಗೊಂಡಿದೆ. 50 ವರ್ಷ ವಯಸ್ಸಿಗಿಂತ ಕೆಳಗಿನವರು ಅಥವಾ 15ರಿಂದ 45 ವರ್ಷ ವಯೋಮಾನದ ಒಳಗಿನವರು ಯುವಜನರಲ್ಲಿ ಲಕ್ವಾಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಅನೇಕ ಕಾರ್ಡಿಯೊವಾಸ್ಕಾಲರ್ ಅಪಾಯ ಅಂಶಗಳು ಜನಸಾಮಾನ್ಯರಲ್ಲಿ ಕಡಿಮೆಯಾಗುತ್ತಿದ್ದರೂ ಯುವಜನರಲ್ಲಿ ಅವುಗಳ ಪರಿಣಾಮ ಹೆಚ್ಚುತ್ತಿರುವುದು ಕಂಡುಬಂದಿದೆ. 35 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಈ ಅಪಾಯ ಅಂಶಗಳು ಗಮನಾರ್ಹವಾಗಿ ಹೆಚ್ಚಿದ್ದು, ಈ ವಯೋಮಾನದವರು ಭವಿಷ್ಯದಲ್ಲಿ ವಾಸ್ಕಾಲರ್ ತೊಂದರೆಗಳಿಗೆ ಈಡಾಗುವ ಸಾಧ್ಯತೆಯನ್ನು ಹೆಚ್ಚಿಸಿವೆ.
Related Articles
- ಅರ್ಟೀರಿಯಲ್ ಹೈಪರ್‌ಟೆನ್ಶನ್
- ಡಿಸ್‌ಲಿಪಿಡೇಮಿಯಾ
- ಮಧುಮೇಹ
- ಧೂಮಪಾನ
- ಅತಿಯಾದ ಮದ್ಯಪಾನ
- ದೈಹಿಕ ಚಟುವಟಿಕೆ ಕಡಿಮೆ ಇರುವುದು
- ಬೊಜ್ಜು (ಬಿಎಂಐ 230)
Advertisement
ಹಾಗೆಯೇ ಹೆಮರಾಜಿಕ್ ಲಕ್ವಾವು ಅಧಿಕ ರಕ್ತದೊತ್ತಡ, ಅತಿಯಾದ ಮದ್ಯಪಾನ ಮತ್ತು ಆಲಸಿ ಜೀವನ ಶೈಲಿಯಿಂದ ಉಂಟಾಗುವುದು ಕಂಡುಬಂದಿದೆ. ಈ ಅಂಶದ ಪ್ರಾಮುಖ್ಯವು ವ್ಯಕ್ತಿಗಳು, ಕುಟುಂಬಗಳು, ಸಮಾಜ, ಆರೋಗ್ಯ ಸೇವಾ ವೆಚ್ಚಗಳು ಮತ್ತು ಬಳಕೆ ಹಾಗೂ ಜಾಗತಿಕ ಬೃಹತಾರ್ಥಿಕತೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಹೊಂದಿದೆ.
ವರದಿಗಳ ಪ್ರಕಾರ, ಲಕ್ವಾಕ್ಕೆ ಒಳಗಾಗಿರುವ ಬಹುತೇಕ ಯುವಜನರು ಅಧಿಕ ರಕ್ತದೊತ್ತಡವು ಹೊಂದಿರುವುದು ಆಗಾಗ ಪತ್ತೆಯಾಗುತ್ತದೆ. ಯುವ ಜನರು ಮಧುಮೇಹ ಹೊಂದಿರುವುದಕ್ಕೂ ಇಶೆಮಿಕ್ ಲಕ್ವಾದ ಅಪಾಯ ಹೆಚ್ಚಳಕ್ಕೂ ಸಂಬಂಧವಿದೆ. ಜತೆಗೆ ಯುವಜನರಲ್ಲಿ ಮಧುಮೇಹ ಹೆಚ್ಚುತ್ತಿದ್ದು, ಭಾರತ, ಚೀನ ಮತ್ತು ಅಮೆರಿಕದಲ್ಲಿ ಅನುಕ್ರಮವಾಗಿ ಅತೀ ಹೆಚ್ಚು ಇದೆ.
ಯುವ ಜನರಲ್ಲಿ ಲಕ್ವಾ ಉಂಟಾಗುವುದಕ್ಕೆ ಅತ್ಯಂತ ಸಾಮಾನ್ಯವಾದ ಅಪಾಯ ಕಾರಣ ಧೂಮಪಾನ. ಇತ್ತೀಚೆಗಿನ ವರ್ಷಗಳಲ್ಲಿ ಯುವಜನರಲ್ಲಿ ಧೂಮಪಾನ ಹವ್ಯಾಸ ಹೆಚ್ಚಿದ್ದು, ಶೇ. 50ಕ್ಕಿಂತಲೂ ಅಧಿಕ ಮಂದಿ ಧೂಮಪಾನಿಗಳಾಗಿದ್ದಾರೆ. ಧೂಮಪಾನ ಮಾಡುವ ಯುವ ಜನರು ಇಶೆಮಿಕ್ ಲಕ್ವಾಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಲ್ಲದೆ, ಸಿಗರೇಟು ಸೇವನೆಗೂ ಲಕ್ವಾ ಉಂಟಾಗುವ ಅಪಾಯಕ್ಕೂ ಸಂಖ್ಯೆ-ಸಾಧ್ಯತೆಯ ಸಂಬಂಧ ಇದೆ. ಹೆಚ್ಚು ಸಿಗರೇಟುಗಳನ್ನು ಸೇದಿದಷ್ಟು ಲಕ್ವಾಕ್ಕೆ ತುತ್ತಾಗುವ ಅಪಾಯ ಹೆಚ್ಚುತ್ತದೆ.
-ಮುಂದಿನ ವಾರಕ್ಕೆ
ಮಂಜೂಷಾ,
ಅಸಿಸ್ಟೆಂಟ್ ಪ್ರೊಫೆಸರ್,
ಕಾರ್ಡಿಯೊವಾಸ್ಕಾಲರ್,
ಟೆಕ್ನಾಲಜಿ ವಿಭಾಗ ಎಂಸಿಎಚ್‌ಪಿ,
ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನ್ಯೂರಾಲಜಿ ವಿಭಾಗ, ಕೆಎಂಸಿ , ಮಂಗಳೂರು)