Advertisement
ಶೂಟಿಂಗ್‌ನಲ್ಲಿ ಸತತ 2 ಚಿನ್ನದ ಪದಕ ಗೆದ್ದ ಅವನಿ ಲೇಖರಾ, ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಜೂಡೋಪಟು ಕಪಿಲ್ ಪಾರ್ಮರ್, ಮೊದಲ ಬಾರಿ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಎಲ್ಲ ಕ್ರೀಡಾಪಟುಗಳು ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.
ಸಂವಾದ ಬಳಿಕ ಮಾತನಾಡಿದ ಕನ್ನಡಿಗ ಸುಹಾಸ್ ಯತಿರಾಜ್, “ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ. ಪ್ಯಾರಾಲಿಂಪಿಕ್ಸ್‌ಗೆ ಹೋಗುವ ಮೊದಲು ನಮ್ಮಲ್ಲಿ ಎರಡು ಗುರಿಯಿತ್ತು. ಒಂದು ಪದಕ ಗೆಲ್ಲುವುದು, ಮತ್ತೂಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವುದು’ ಎಂದು ಹೇಳಿದರು.
Related Articles
ಪ್ಯಾರಾಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ, ಕುಬj ಗಾತ್ರದ ನವದೀಪ್ ಸಿಂಗ್ ಅವರಿ ಗಾಗಿ ಮೋದಿ ನೆಲದ ಮೇಲೆ ಕುಳಿತದ್ದು ವಿಶೇಷವಾಗಿತ್ತು. ನವದೀಪ್ ಅವರು ಮೋದಿಯವರಿಗೆ ನೀಲಿ ಟೋಪಿ ಯೊಂದನ್ನು ಹಾಕಿ ಸಂಭ್ರಮಿಸಿದರು. ಈ ವೀಡಿಯೊ ವೈರಲ್ ಆಗಿದ್ದು, ಪ್ರಧಾನಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
Advertisement