Advertisement

ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಡ್ಯಾಂಗೆ ನವಲಿಯಲ್ಲಿ ಜಾಗ

01:28 AM Feb 13, 2019 | |

ವಿಧಾನಪರಿಷತ್‌: ತುಂಗಭದ್ರಾ ಜಲಾಶಯಕ್ಕೆ ಪೂರಕವಾಗಿ ಗಂಗಾವತಿ ಜಿಲ್ಲೆಯ ನವಲಿ ಗ್ರಾಮದ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಇದಕ್ಕಾಗಿ ಜಾಗ ಗುರುತಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಕಾಂಗ್ರೆಸ್‌ ಸದಸ್ಯ ಎನ್‌.ಎಸ್‌. ಬೋಸರಾಜು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಜಲಾಶಯದ ಸಾಮರ್ಥ್ಯಕ್ಕಿಂತ ಸುಮಾರು 33 ಟಿಎಂಸಿಯಷ್ಟು ನೀರು ಕಡಿಮೆ ಸಂಗ್ರಹ ಆಗುತ್ತಿದೆ. ಈ ಬಗ್ಗೆ ತಜ್ಞರಿಂದಲೂ ಅಭಿಪ್ರಾಯ ಸಂಗ್ರಹಿಸಿ, ಸಮಾ ನಾಂತ ರ ಜಲಾಶಯ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದರಿಂದ ರಾಜ್ಯಕ್ಕೆ 20 ಟಿಎಂಸಿ ಹಾಗೂ ನೆರೆಯ ಆಂಧ್ರಪ್ರದೇಶಕ್ಕೆ 11 ಟಿಎಂಸಿ ನೀರು ಸಿಗಲಿದೆ. ಇದಕ್ಕೆ ಆಂಧ್ರದಿಂದಲೂ ಸ್ಪಂದನೆ ದೊರಕಿದೆ ಎಂದರು. ಅಲ್ಲದೆ, ಕೃಷ್ಣಾ ನದಿಪಾತ್ರದಿಂದ ಗಣೇಕಲ್‌ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಯನ್ನು 2019-20ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.

ಕೃಷ್ಣಾ ಯೋಜನೆ ಸಂತ್ರಸ್ತರಿಗೆ ಮೂಲಸೌಕರ್ಯ

ವಿಧಾನಪರಿಷತ್‌: ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಪುನರ್‌ವಸತಿ ಕೇಂದ್ರಗಳಿಗೆ ಸ್ಮಶಾನ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದಟಛಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬಿಜೆಪಿ ಸದಸ್ಯ ಹನುಮಂತಪ್ಪ ರುದ್ರಪ್ಪ ನಿರಾಣಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂಲಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸಲಾಗುವುದು. ಜತೆಗೆ ಸ್ಮಶಾನಕ್ಕಾಗಿ ಜಾಗವನ್ನು ಖರೀದಿಸಲಾಗುವುದು. ಯಾವುದಾದರೂ ಜಾಗದ ಲಭ್ಯತೆ ಇದ್ದರೆ, ಮಾಹಿತಿ ನೀಡುವಂತೆಯೂ ಹೇಳಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ 137 ಪುನರ್‌ವಸತಿ ಕೇಂದ್ರಗಳನ್ನು ನಿರ್ಮಿಸಿದ್ದು, 107 ಕೇಂದ್ರಗಳಿಗೆ ಸಂತ್ರಸ್ತರು ಸ್ಥಳಾಂತರಗೊಂಡಿದ್ದಾರೆ.

Advertisement

ಯೋಜನೆ ಹಂತ-1 ಘಟ್ಟ 3ರಡಿ ಉಳಿದ ಮುಳುಗಡೆ ಗ್ರಾಮಗಳು ಹಿನ್ನೀರಿನಿಂದ ಸದ್ಯಕ್ಕೆ ಯಾವುದೇ ಬಾಧೆ ಆಗದಿರುವುದರಿಂದ ಸ್ಥಳಾಂತರಗೊಂಡಿಲ್ಲ. ಈ ಕೇಂದ್ರಗಳಿಗೆ 2016 ಮತ್ತು 2017ರಲ್ಲಿ ಒಟ್ಟಾರೆ 325.34 ಕೋಟಿ ರೂ. ವಿಶೇಷ ಅನುದಾನದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next