ಟೋಕಿಯೊ: ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಸಲ ಅಳವಡಿಸಲಾದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತೀಯರು ಸೆಮಿಫೈನಲ್ ಸಾಧನೆಯೊಂದಿಗೆ ಬಹಳಷ್ಟು ಪದಕಗಳ ಭರವಸೆ ಮೂಡಿಸಿದ್ದಾರೆ.
“ಬಿ’ ವಿಭಾಗದ ಮಿಶ್ರ ಡಬಲ್ಸ್ ನಲ್ಲಿ ಪ್ರಮೋದ್ ಭಗತ್-ಪಲಕ್ ಕೊಹ್ಲಿ ಥಾಯ್ಲೆಂಡ್‌ನ ಸಿರಿಪಾಂಗ್ ಟೀಮರೋಮ್-ನಿಪಾದ ಸೇನ್ಸುಪಾ ಅವರನ್ನು 21-15, 21-19 ಅಂತರದಿಂದ ಪರಾಭವಗೊಳಿಸಿದರು.
ಪುರುಷರ “ಎ’ ವಿಭಾಗದ ಸಿಂಗಲ್ಸ್ ಎಸ್‌ಎಲ್4 ಕ್ಲಾಸ್‌ನಲ್ಲಿ ವಿಶ್ವದ ನಂ.3 ಶಟ್ಲರ್ ಸುಹಾಸ್ ಯತಿರಾಜ್ ಇಂಡೋನೇಶ್ಯದ ಹ್ಯಾರಿ ಸುಸಾಂತೊ ಅವರನ್ನು 21-6, 21-12 ಅಂತರದಿಂದ ಸೋಲಿಸಿದರು. “ಬಿ’ ವಿಭಾಗದಲ್ಲಿ ತರುಣ್ ಧಿಲ್ಲಾನ್ ಕೊರಿಯಾದ ಶಿನ್ ಕ್ಯುಂಗ್ ಹ್ವಾನ್ ಅವ ರನ್ನು 21-18, 15-21, 21-17ರಿಂದ ಮಣಿಸಿದರು.
ಇದನ್ನೂ ಓದಿ :ಪ್ಯಾರಾಲಿಂಪಿಕ್ಸ್ : ಮೊದಲ ಆರ್ಚರಿ ಪದಕ ತಂದ ಹರ್ವಿಂದರ್ ಸಿಂಗ್
ಎಸ್‌ಎಲ್3 ಕ್ಲಾಸ್ ಸ್ಪರ್ಧೆಯಲ್ಲಿ ಮನೋಜ್ ಸರ್ಕಾರ್ ಉಕ್ರೇನಿನ ಅಲೆಕ್ಸಾಂಡರ್ ಶಿರ್ಕೋವ್ ವಿರುದ್ಧ 21-16, 21-9 ಅಂತರದ ಗೆಲುವು ಸಾಧಿಸಿದರು.
ವನಿತಾ ಡಬಲ್ಸ್‌ನಲ್ಲಿ ಕೊಹ್ಲಿ-ಪಾರುಲ್ ಸತತ 2ನೇ ಸೋಲಿ ನೊಂದಿಗೆ ಹೋರಾಟ ಅಂತ್ಯಗೊಳಿಸಿದರು. ಬಳಿಕ ಸಿಂಗಲ್ಸ್ ಕ್ವಾ. ಫೈನಲ್‌ನಲ್ಲಿ ಕೊಹ್ಲಿ ಕೂಡ ಪರಾಭವಗೊಂಡರು.