ಉಡುಪಿ: ಪರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಸುವರ್ಣ ಸಂಗಮ ಪ್ರಯುಕ್ತ ಆಸುಪಾಸಿನ ಹೆರ್ಗ,ಬಡಗಬೆಟ್ಟು, ಆತ್ರಾಡಿ ಗ್ರಾಮಗಳ ವ್ಯಾಪ್ತಿಗೆ ಬರುವ 60 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪದಾಧಿಕಾರಿ
ಗಳು, ಸದಸ್ಯರ ಸಮಾವೇಶ ರವಿವಾರ ಪರ್ಕಳ ಶ್ರೀ ವಿಘ್ನೇಶ್ವàರ ಸಭಾಭವನದಲ್ಲಿ ಜರಗಿತು.
ಸುವರ್ಣ ಮಹೋತ್ಸವ ಸವಿನೆನಪಿಗಾಗಿ ಉಚಿತ ಗ್ರಾಮ ಸುರಕ್ಷಾ ಯೋàಜನೆ ಅಡಿಯಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಸತೀಶ್ ಕಾಮತ್ ಚಾಲನೆ ನೀಡಿ ಮಾತನಾಡಿ, ಅಸಂಘಟಿತ ನೌಕರರು, ಕೃಷಿಕರು, ಗ್ರಾಮೀಣ ಬಡಜನರಿಗೆ ಪ್ರಧಾನಮಂತ್ರಿ ಭೀಮಾ ಯೋಜನೆಯ ಫಲಸಿಗುವಂತಾಗಬೇಕು. ಸಾಮಾಜಿಕ ಭದ್ರತೆ ಇಲ್ಲದಂತ ಎಲ್ಲರಿಗೂ ಈ ಯೋಜನೆಯ ಲಾಭ ಸಿಗುವಂತಾಗಲಿ ಎಂದರು.
ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘ ಶಕ್ತಿ ಕಲಿಯುಗ -ಸಂಸ್ಕೃತಿ- ಸಂಸ್ಕಾರ- ಸಾಮರಸ್ಯ ಬಗ್ಗೆ ಮಣಿಪಾಲ ಎಂಐಟಿಯ ಉಪನ್ಯಾಸಕ ಡಾ| ನಾರಾಯಣ ಶೆಣೈ ಉಪನ್ಯಾಸವಿತ್ತರು. ಮಾಜಿ ನಗರಸಭಾಧ್ಯಕ್ಷ ಸೋಮಶೇಖರ ಭಟ್, ಸಿಂಡಿಕೇಟ್ ಬ್ಯಾಂಕಿನ ಉಪ ಮಹಾಪ್ರಬಂಧಕ ಎಸ್. ಎಸ್. ಹೆಗ್ಡೆ, ಮಣಿಪಾಲ ವಿ.ವಿ. ಎಸ್ಟೇಟ್ ಅಧಿಕಾರಿ ಜೈ ವಿಠಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಲತಿ ದಿನೇಶ್, ಆತ್ರಾಡಿ ಗ್ರಾ. ಪಂ. ಅಧ್ಯಕ್ಷೆ ಪ್ರಮೀಳಾ ಶೆಟ್ಟಿಗಾರ್, ನಗರ ಸಭಾ ಸದಸ್ಯರಾದ ನರಸಿಂಹ ನಾಯಕ್, ಸುಕೇಶ ಕುಂದರ್, ಜ್ಯೋತಿ ನಾಯ್ಕ , ಸುವರ್ಣ ಮಹೋತ್ಸವ ಸಮಿತಿ ಗೌರವ ಅಧ್ಯಕ್ಷ ಬಿ. ಜಯರಾಜ್ ಹೆಗ್ಡೆ, ಕೋಶಾಧಿಕಾರಿ ಪ್ರಮೋದ ಕುಮಾರ್, ಕಟ್ಟಡ ಸಮಿತಿ ಕಾರ್ಯದರ್ಶಿ ಸುರೇಶ ಶ್ಯಾನ್‌ಭಾಗ್, ಆಚರಣಾ ಸಮಿತಿ ಪ್ರ. ಕಾರ್ಯದರ್ಶಿ ಮನೋಜ್ ಹೆಗ್ಡೆ ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ ಠಾಕೂರ್ ಸ್ವಾಗತಿಸಿದರು. ಉಮೇಶ ಶ್ಯಾನ್‌ಭಾಗ್ ಕಾರ್ಯಕ್ರಮ ನಿರೂಪಿಸಿದರು. ಪ್ರ. ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗಪ್ರಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಗಣೇಶ ಪಾಟೀಲ್ ವಂದಿಸಿದರು.