Advertisement

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

02:54 PM May 03, 2024 | Team Udayavani |

ಪಣಜಿ: ಗೋವಾದಲ್ಲಿ ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.ಸದ್ಯ ದಕ್ಷಿಣ ಗೋವಾದ ಕರಾವಳಿ ಪ್ರದೇಶಗಳಲ್ಲಿ ಇಂತಹದೊಂದು ಅಭಿಯಾನ ಆರಂಭವಾಗಿದ್ದು, ಈ ಪ್ಯಾರಾ ಗ್ಲೈಡರ್ ಗಳ ಮೂಲಕ ಆಕಾಶದಿಂದ ಕರಪತ್ರಗಳನ್ನು ಎಸೆಯಲಾಗುತ್ತಿದೆ. ಅದರ ಮೇಲೆ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂಬ ಸಂದೇಶವನ್ನು ಬರೆಯಲಾಗಿದೆ.

Advertisement

ದಕ್ಷಿಣ ಗೋವಾದ ಮುಖ್ಯ ಚುನಾವಣಾಧಿಕಾರಿ ಅಶ್ವಿನ್ ಚಂದ್ರು ಈ ಮಾಹಿತಿ ನೀಡಿದ್ದಾರೆ. ಈ ಹಿಂದೆ ಬೇರೆ ಕಡೆಗಳಲ್ಲೂ ಈ ಅಭಿಯಾನ ನಡೆಸಲಾಗಿತ್ತು. ನಾಲ್ಕು ದಿನಗಳ ಕಾಲ ದಕ್ಷಿಣ ಗೋವಾದಲ್ಲಿ ಖಡ್ಡಾಯ ಮತದಾನದ ಕುರಿತು ಪ್ರಚಾರ ಮಾಡಲು ಇದೇ ಏಜೆನ್ಸಿಯನ್ನು ನೇಮಿಸಿದ್ದೇವೆ.

ಈ ಪ್ಯಾರಾ-ಗ್ಲೈಡರ್‍ಗಳು ಆಕಾಶದಿಂದ ಜನನಿಬಿಡ ಪ್ರದೇಶಗಳಿಗೆ ಕರಪತ್ರಗಳನ್ನು ಎಸೆಯಲಿವೆ. ಈ ಕರಪತ್ರದಲ್ಲಿ ಮತದಾರರು ಯಾವುದೇ ಒತ್ತಡಕ್ಕೆ ಮಣಿಯದೆ ಮುಕ್ತವಾಗಿ ಮತದಾನ ಮಾಡಬೇಕು ಎಂಬ ಸಂದೇಶವನ್ನು ಬರೆಯಲಾಗಿದೆ ಎಂದರು. ಈ ಅಭಿಯಾನದ ಅಂಗವಾಗಿ ಮತದಾನದ ದಿನದಂದು ಜಿಲ್ಲಾಡಳಿತದಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ವಿವಿಧ ರೀತಿಯಲ್ಲಿ ಮತ ಸೆಳೆಯಲು ಪ್ರಯತ್ನಿಸುತ್ತೇವೆ ಎಂದು ಚಂದ್ರು ಹೇಳಿದರು.

ಇದನ್ನೂ ಓದಿ: Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next